", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/463655-1750669165-manjunath---2025-06-23T142918.852.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯ : ವಿದ್ಯುತ್ ಕಂಬ ಬದಲಾಯಿಸುವ ವೇಳೆ ಕಂಬದಿಂದ ಬಿದ್ದು ಲೈನ್ ಮ್ಯಾನ್‌ವೊಬ್ಬರು ಸಾವನ್ನಪ್ಪಿರುವ ದುರ್ಘಟನೆಯೊಂದು ಮಂಡ್ಯ ಜಿಲ್ಲೆಮಳವಳ್ಳಿ ತ...Read more" } ", "keywords": "Mandya Electric Pole Accident, Lineman Dies in Accident, Electrical Lineman Killed, Karnataka Power Transmission Accident, Mandya News, Electrical Accident Death, Power Line Worker Dies, Lineman Electrocuted, Fatal Electrical Accident in Mandya ", "url": "https://dashboard.publicnext.com/node" } ಮಂಡ್ಯ : ವಿದ್ಯುತ್ ಕಂಬದಿಂದ ಬಿದ್ದು ಲೈನ್ ಮ್ಯಾನ್ ಸಾವು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ : ವಿದ್ಯುತ್ ಕಂಬದಿಂದ ಬಿದ್ದು ಲೈನ್ ಮ್ಯಾನ್ ಸಾವು

ಮಂಡ್ಯ : ವಿದ್ಯುತ್ ಕಂಬ ಬದಲಾಯಿಸುವ ವೇಳೆ ಕಂಬದಿಂದ ಬಿದ್ದು ಲೈನ್ ಮ್ಯಾನ್‌ವೊಬ್ಬರು ಸಾವನ್ನಪ್ಪಿರುವ ದುರ್ಘಟನೆಯೊಂದು ಮಂಡ್ಯ ಜಿಲ್ಲೆಮಳವಳ್ಳಿ ತಾಲ್ಲೂಕಿನ ಡಿ ಹಲಸಹಳ್ಳಿ ಗ್ರಾಮದ ಬಳಿ ನಡೆದಿದೆ.

ಚೆಸ್ಕಾಂನ ಹಾಡ್ಲಿ ವಿಭಾಗದಲ್ಲಿ ಲೈನ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ 33 ವರ್ಷದ ಅನಿಲ್ ಎಂಬುವರೇ ಮೃತಪಟ್ಟ ದುರ್ದೈಯಾಗಿದ್ದು, ಭಾನುವಾರ ಸಾಯಂಕಾಲ 5.30 ರ ಸಮಯದಲ್ಲಿ ಈ ಅವಘಡ ಸಂಭವಿಸಿದೆ.

ಡಿ. ಹಲಸಹಳ್ಳಿ ಗ್ರಾಮದ ಹೊರವಲಯದ ರೈತರೊಬ್ಬರ ಜಮೀನಿನಲ್ಲಿ ಶಿಥಿಲವಾಗಿದ್ದ ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಸಲಕರಣೆಗಳನ್ನು ತೆರವು ಮಾಡಲು ಕಂಬವೇರಿದ್ದ ಅನಿಲ್ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಾಲ್ಲೂಕಿನ ಕುಲುಮೆದೊಡ್ಡಿ ಗ್ರಾಮದ ವಾಸಿಯಾದ ಅನಿಲ್ ವಿವಾಹಿತರಾಗಿದ್ದು ಒಂದು ಗಂಡು ಮಗುವಿನ ತಂದೆ ಎಂದು ಗೊತ್ತಾಗಿದೆ.

ತಡರಾತ್ರಿ 8 ಗಂಟೆ ಸಮಯದಲ್ಲಿ ಕುಟುಂಬದವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಹಲಗೂರು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶವವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ.

Edited By :
Kshetra Samachara

Kshetra Samachara

23/06/2025 02:31 pm

Cinque Terre

5.46 K

Cinque Terre

0