ಬೋರ್ಡ್ ಇರದ ಬಸ್ ಅನು ಹಾಡಿಗೆ ಕುಣಿದಿದ್ದ ನಟಿ ಶೆಫಾಲಿ ಜರಿವಾಲಾ ಅವರ ಅಕಾಲಿಕ ಮರಣದ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಸಾವಿನ ನಂತರ ಮನೆಯನ್ನು ಪರಿಶೀಲಿಸಿದಾಗ ಮಾತ್ರೆಗಳು( ಏಜ್ ರಿವರ್ಸಿಂಗ್) ಗ್ಲುಟಾಥಿಯೋನ್ ಚರ್ಮದ ಹೊಳಪು ಹೆಚ್ಚಿಸುವ ಔಷಧಿ, ವಿಟಮಿನ್ ಸಿ ಇಂಜೆಕ್ಷನ್,ಆಸಿಡಿಟಿ ಮಾತ್ರೆಯ ಎರಡು ಬಾಕ್ಸ್ ಪತ್ತೆಯಾಗಿದ್ದು ಮರಣೋತ್ತರ ವರದಿಗಾಗಿ ಮುಂಬೈ ಪೊಲೀಸರು ಕಾಯುತ್ತಿದ್ದಾರೆ.ಸಾವಿನ್ನಪ್ಪಿದ ದಿನ ನಟಿ ಉಪವಾಸದಲ್ಲಿ ಇದ್ದರಂತೆ. ಇನ್ನೊಂದು ಮೂಲಕಗಳ ಪ್ರಕಾರ ಈಕೆ ಲೋ ಬಿಪಿ, ಹೃದಾಯಾಘಾತ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಸಾವನ್ನಪಿರಬಹುದು ಎಂದು ಹೇಳಲಾಗುತ್ತಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ 3.3 ಮಿಲಿಯನ್ ಫಾಲೋವರ್ಸ್ ಹೊಂದಿರುವ ಇವರು ಇತ್ತೀಚೆಗೆ ಫೊಟೋ ಶೂಟ್ ಅನ್ನು ಹಂಚಿಕೊಂಡಿದ್ದರು.ಕಾಂತ ಲಗಾ ಹಾಡಿನ ರಿಮೇಕ್‌ನಲ್ಲಿ ಕಾಣಿಸಿಕೊಂಡ ನಂತರ ಇವರು ಮತ್ತಷ್ಟು ಫೇಮಸ್ ಆಗಿದ್ರು.ಸಂಗೀತ ವೀಡಿಯೊಗಳಿಂದ ರಿಯಾಲಿಟಿ ಶೋಗಳು ಮತ್ತು ಚಲನಚಿತ್ರಗಳಲ್ಲಿ ಇವರು ಕೆಲಸಮಾಡಿದ್ದಾರೆ.ಶೆಫಾಲಿ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಪದವೀಧರೆಯಾಗಿದ್ದಾರೆ.
PublicNext
30/06/2025 04:35 pm