", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/styles/large/public/videos/thumbnails/2259634/thumbnail-2259634_0001.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಆಂಧ್ರಪ್ರದೇಶ: ತಿರುಪತಿ ಯಾತ್ರೆಯಿಂದ ಮರಳುತ್ತಿದ್ದ ಭಕ್ತರ ಟಿಟಿ ವಾಹನ ಭೀಕರ ರಸ್ತೆ ಅಪಘಾತಕ್ಕೀಡಾಗಿ ಮೂವರು ಕನ್ನಡಿಗರು ಸ್ಥಳದಲ್ಲೇ ಮೃತಪಟ್ಟು,...Read more" } ", "keywords": "Tirupati, road accident, Andhra Pradesh, Karnataka, Kannada pilgrims, fatal crash, Annamayya district, Kurabalakota. ", "url": "https://dashboard.publicnext.com/node" }
ಆಂಧ್ರಪ್ರದೇಶ: ತಿರುಪತಿ ಯಾತ್ರೆಯಿಂದ ಮರಳುತ್ತಿದ್ದ ಭಕ್ತರ ಟಿಟಿ ವಾಹನ ಭೀಕರ ರಸ್ತೆ ಅಪಘಾತಕ್ಕೀಡಾಗಿ ಮೂವರು ಕನ್ನಡಿಗರು ಸ್ಥಳದಲ್ಲೇ ಮೃತಪಟ್ಟು, ಒಂಬತ್ತು ಮಂದಿ ಗಾಯಗೊಂಡ ದಾರುಣ ಘಟನೆ ನಡೆದಿದೆ.
ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ತಾಲ್ಲೂಕಿನ ಕುರುಬಲಕೋಟ ಮಂಡಲದ ಚೆನ್ನಾಮರ್ರಿಮಿಟ್ಟ ಗ್ರಾಮದ ಬಳಿ ಸಂಭವಿಸಿದೆ. ತಿರುಪತಿಯತ್ತ ಸಾಗುತ್ತಿದ್ದ ಟಿಟಿ ವಾಹನಕ್ಕೆ ಅಪರಿಚಿತ ಭಾರೀ ವಾಹನ ಡಿಕ್ಕಿ ಹೊಡೆದ ಪರಿಣಾಮ, ಕಾರು ತಲೆಕೆಳಗಾಗಿ ಉರುಳಿ ಬಿದ್ದಿದೆ.
ಈ ಅಪಘಾತದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಳ್ಳಿ ತಾಲ್ಲೂಕಿನ ಮೇಘೇಶ್ (17), ಚರಣ್ (17) ಮತ್ತು ಶ್ರಾವಣಿ (28) ದುರ್ಮರಣ ಹೊಂದಿದ್ದಾರೆ. ಇನ್ನೂ ಒಂಬತ್ತು ಮಂದಿ ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ಬಾಗೇಪಳ್ಳಿ - ತಿರುಪತಿ ಮಧ್ಯದ ರಸ್ತೆಯಲ್ಲಿ ಸಂಭವಿಸಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
PublicNext
30/06/2025 11:12 am