", "articleSection": "Government,Accident", "image": { "@type": "ImageObject", "url": "https://prod.cdn.publicnext.com/s3fs-public/387839-1751250114-Untitled-design---2025-06-30T075526.479.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಪುರಿ : ಪುರಿ ಜಗನ್ನಾಥ ದೇವರ ರಥಯಾತ್ರೆಯ ವೇಳೆ ಭಾನುವಾರ ಬೆಳಗಿನ ಜಾವ 4:20ಕ್ಕೆ ಶ್ರೀ ಗುಂಡಿಚಾ ದೇವಾಲಯದ ಬಳಿ ನಡೆದ ಧಾರ್ಮಿಕ ಆಚರಣೆ ವೇಳೆ ಕಾಲ...Read more" } ", "keywords": "- Puri stampede incident - Stampede in Puri temple - Compensation for Puri stampede victims - Puri crowd management issues - Puri stampede latest news", "url": "https://dashboard.publicnext.com/node" }
ಪುರಿ : ಪುರಿ ಜಗನ್ನಾಥ ದೇವರ ರಥಯಾತ್ರೆಯ ವೇಳೆ ಭಾನುವಾರ ಬೆಳಗಿನ ಜಾವ 4:20ಕ್ಕೆ ಶ್ರೀ ಗುಂಡಿಚಾ ದೇವಾಲಯದ ಬಳಿ ನಡೆದ ಧಾರ್ಮಿಕ ಆಚರಣೆ ವೇಳೆ ಕಾಲ್ತುಳಿತ ಸಂಭವಿಸಿದ್ದು, ಇದರಲ್ಲಿ ಇಬ್ಬರು ಮಹಿಳೆಯರು ಮತ್ತು ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾರೆ.
ಸುಮಾರು 50 ಭಕ್ತರು ಗಾಯಗೊಂಡಿದ್ದು, ಅವರಲ್ಲಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ.
ಈ ವರ್ಷದ ರಥಯಾತ್ರೆ ಶುಕ್ರವಾರದಿಂದ ಆರಂಭವಾಗಿತ್ತು. ಮೊದಲ ದಿನವೇ ಕಾಲ್ತುಳಿತ ಸಂಭವಿಸಿ 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಘಟನೆಯ ವೇಳೆಗೆ ಜಗನ್ನಾಥ ದೇವರು, ದೇವಿ ಸುಭದ್ರಾ ಹಾಗೂ ಶ್ರೀಬಲರಾಮರ ಮೂರ್ತಿಗಳನ್ನು ಹೊತ್ತ ರಥವು ಗುಂಡಿಚಾ ದೇವಾಲಯದ ಬಳಿ ನಿಲ್ಲಿಸಲಾಗಿತ್ತು. ದೇವರ ಮೂರ್ತಿಗೆ ಅಡ್ಡಲಾಗಿ ಹಾಕಲಾಗಿದ್ದ ಪರದೆಯನ್ನು ತೆರೆಯುತ್ತಿದ್ದ ಸಂದರ್ಭ ಭಕ್ತರು ದೇವರ ದರ್ಶನಕ್ಕಾಗಿ ಮುಗಿಬಿದ್ದಿದ್ದು, ಇದರಿಂದ ಕಾಲ್ತುಳಿತ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ತಕ್ಷಣ ಸ್ಪಂದಿಸಿದ ಒಡಿಶಾ ಮುಖ್ಯಮಂತ್ರಿ ಕ್ಷಮೆಯಾಚಿಸಿ, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೇ ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಿಸಿದ್ದಾರೆ.
PublicNext
30/06/2025 07:52 am