", "articleSection": "Politics,Government,News", "image": { "@type": "ImageObject", "url": "https://prod.cdn.publicnext.com/s3fs-public/421698-1751285828-Youtube-HD.00_49_29_01.Still2535~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವರ ವಿರುದ್ಧ ಎದ್ದಿರುವ ಅಸಮಾಧಾನವನ್ನ ಶಮನ ಮಾಡಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ರಾಜ್ಯಕ...Read more" } ", "keywords": "BR Patil on Surjewala, BR Patil statement Surjewala, I told Surjewala what I had to say, BR Patil political statement, Surjewala BR Patil interaction, BR Patil political news, Karnataka politics Surjewala, BR Patil on party matters, Surjewala's role Karnataka, BR Patil's direct message", "url": "https://dashboard.publicnext.com/node" } ಸುರ್ಜೇವಾಲಾರಿಗೆ ಏನು ಹೇಳಬೇಕೋ ಹೇಳಿದ್ದೇನೆ - ಬಿ.ಆರ್ ಪಾಟೀಲ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರ್ಜೇವಾಲಾರಿಗೆ ಏನು ಹೇಳಬೇಕೋ ಹೇಳಿದ್ದೇನೆ - ಬಿ.ಆರ್ ಪಾಟೀಲ್

ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವರ ವಿರುದ್ಧ ಎದ್ದಿರುವ ಅಸಮಾಧಾನವನ್ನ ಶಮನ ಮಾಡಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ರಾಜ್ಯಕ್ಕೆ ಆಗಮಿಸಿದ್ದಾರೆ. ಅಸಮಾಧಾನಿತ ಶಾಸಕರನ್ನ ಕರೆಸಿ ಒನ್ ಟು ಒನ್ ಪ್ರತ್ಯೇಕ ಸಭೆಗಳನ್ನ ಮಾಡ್ತಿದ್ದಾರೆ. ಒಟ್ಟು ಮೂರು ದಿನಗಳ ಕಾಲ ಬೆಂಗಳೂರಿನಲ್ಲೇ ಇದ್ದು ಅಸಮಾಧಾನಿತ ಶಾಸಕರನ್ನ ಕರೆಸಿ ಮಾತನಾಡಲಿದ್ದಾರೆ.

ಇಂದು ಮೊದಲು ಶಾಸಕ ಬಿ.ಆರ್ ಪಾಟೀಲ್‌ರನ್ನೇ ಕರೆಯಿಸಿ ಒನ್ ಟು ಒನ್ ಚರ್ಚೆ ನಡೆಸಿದ್ದಾರೆ. ವಸತಿ ಇಲಾಖೆಯಲ್ಲಿ ಮನೆ ಪಡೆಯಲು ಹಣ ನೀಡಬೇಕು ಎಂಬ ಗಂಭೀರ ಆರೋಪವನ್ನ ಶಾಸಕ ಬಿ.ಆರ್ ಪಾಟೀಲ್ ಮಾಡಿದ್ರು. ಸಚಿವರ ಕಾರ್ಯದರ್ಶಿ ಜೊತೆ ಮಾತನಾಡಿದ ಆಡಿಯೋ ಸಹ ವೈರಲ್ ಆಗಿ ಸರ್ಕಾರಕ್ಕೆ ಭಾರಿ ಮುಜುಗರ ತಂದಿತ್ತು. ಇದರ ಬೆನ್ನಲ್ಲೇ ಸುರ್ಜೇವಾಲಾ ಇಂದು ಬಿ.ಆರ್ ಪಾಟೀಲ್‌ರನ್ನ ಕೆಪಿಸಿಸಿ ಕಚೇರಿಗೆ ಕರೆಸಿಕೊಂಡು ಸಮಾಲೋಚನೆ ನಡೆಸಿದರು. ಸುರ್ಜೇವಾಲಾ ಜೊತೆ ಸಭೆ ಬಳಿಕ ಮಾತನಾಡಿದ ಶಾಸಕ ಬಿ.ಆರ್ ಪಾಟೀಲ್, ಹೈಕಮಾಂಡ್‌ನಿಂದ ಕರೆಬಂದಿತ್ತು. ಹೀಗಾಗಿ ಬಂದಿದ್ದೆ. ಸುರ್ಜೇವಾಲಾ ಜೊತೆ ದೀರ್ಘವಾದ ಚರ್ಚೆಯಾಯ್ತು. ನಾನು ಅವರಿಗೆ ಹೇಳಬೇಕಾದಂತದ್ದನ್ನೆಲ್ಲ ಹೇಳಿದ್ದೇನೆ. ಎಲ್ಲಾ ವಿಚಾರವನ್ನ ಅವರು ನೋಟ್ ಮಾಡಿಕೊಂಡಿದ್ದಾರೆ.

ಮುಂದೆ ಏನ್ಮಾಡ್ತಾರೋ ಅದು ಅವರಿಗೆ ಬಿಟ್ಟದ್ದು ಮತ್ತು ಪಕ್ಷಕ್ಕೆ ಬಿಟ್ಟಿದ್ದು ಎಂದು ಮಾರ್ಮಿಕವಾಗಿ ಹೇಳಿ ತೆರಳಿದರು. ಅವರ ಅಸಮಾಧಾನ ಶಮನವಾಗಿದ್ಯಾ ಅಥವಾ ಇನ್ನೂ ಇದ್ಯಾ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Edited By : Suman K
PublicNext

PublicNext

30/06/2025 05:47 pm

Cinque Terre

9.77 K

Cinque Terre

1

ಸಂಬಂಧಿತ ಸುದ್ದಿ