", "articleSection": "Cinema", "image": { "@type": "ImageObject", "url": "https://prod.cdn.publicnext.com/s3fs-public/52563-1751282609-_(1280-x-720-px)-(30).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಸದ್ಯದಲ್ಲೇ ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಲಿದೆ. ಆದರೆ, ಈ ಬಾರಿ ನಿರೂಪಕರಾಗಿ ಯಾರು ಇರುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತ...Read more" } ", "keywords": "Bigg Boss Kannada 12, Kiccha Sudeep host, Colors Kannada, reality TV show, Sudeep conditions, Kannada entertainment news" ", "url": "https://dashboard.publicnext.com/node" }
ಬೆಂಗಳೂರು : ಸದ್ಯದಲ್ಲೇ ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಲಿದೆ. ಆದರೆ, ಈ ಬಾರಿ ನಿರೂಪಕರಾಗಿ ಯಾರು ಇರುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ರ ನಿರೂಪಣೆ ಮಾಡಿದ್ದ ನಟ ಕಿಚ್ಚ ಸುದೀಪ್ ಇದು ನನ್ನ ಕೊನೆಯ ಆವೃತ್ತಿ ಎಂದು ಹೇಳಿದ್ದರು. ಆದರೀಗ ಬಂದಿರುವ ಮಾಹಿತಿಯ ಪ್ರಕಾರ ಕಿಚ್ಚ ಬಿಗ್ ಬಾಸ್ 12 ನಿರೂಪಣೆ ಮಾಡಲಿದ್ದಾರೆ.
ಕಲರ್ಸ್ ಕನ್ನಡ ಹಾಗೂ ಅದರ ಆಯೋಜಕರು ಇಂದು ಪತ್ರಿಕಾಗೋಷ್ಠಿಯನ್ನು ನಡೆಸಿದ್ದು ಈ ಪ್ರಸ್ ಮಿಟ್‌ನಲ್ಲಿ ಕಿಚ್ಚ ಸುದೀಪ್ ಹಾಜರಾಗಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್ ಅವರೇ ಸೀಸನ್ 12 ಅನ್ನು ನಿರೂಪಣೆ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ಹಾಗೂ ಕಿಚ್ಚನ ಮಧ್ಯೆ ನಡೆದ ಮಾತುಕತೆ ಯಶಸ್ವಿಯಾಗಿದೆ.
ಕಿಚ್ಚ ಸುದೀಪ್ ಕೆಲವು ಷರತ್ತುಗಳನ್ನು ಹಾಕಿದ್ದರು. ಆ ಬಗ್ಗೆ ಮಾತುಕತೆ ನಡೆದು, ಕೊನೆಗೆ ಕಿಚ್ಚನ ಮನವೊಲಿಸುವಲ್ಲಿ ಕಲರ್ಸ್ ಕನ್ನಡ ಯಶಸ್ವಿಯಾಗಿದೆ.
ಕಳೆದ 11 ಸೀಸನ್‌ಗಳಿಂದ ನಿರಂತರವಾಗಿ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುತ್ತ ಬಂದಿದ್ದಾರೆ. ಬೇರೆ ಭಾಷೆಗಳಲ್ಲಿ ಬಿಗ್ ಬಾಸ್ ನಿರೂಪಣೆ ಮಾಡುವ ಸ್ಟಾರ್‌ಗಳು ಬದಲಾಗಿದ್ದಾರೆ. ಆದರೆ, ಕನ್ನಡದಲ್ಲಿ ಹಾಗಾಗಿರಲಿಲ್ಲ. ಕಿಚ್ಚ ಸುದೀಪ್ ನಿರೂಪಣಾ ಶೈಲಿಯನ್ನು ಮೆಚ್ಚಿಕೊಂಡಿದ್ದ ವೀಕ್ಷಕರು ಇವರ ಸ್ಥಾನಕ್ಕೆ ಬೇರೆ ನಿರೂಪಕರನ್ನು ಊಹಿಸುವುದಕ್ಕೂ ಸಾಧ್ಯವಾಗಿರಲಿಲ್ಲ. ಆದರೀಗ ಕಲರ್ಸ್ ಕನ್ನಡ ಕಿಚ್ಚ ಸುದೀಪ್ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.
ಕೆಲ ವರದಿಗಳ ಪ್ರಕಾರ, ಈ ಬಾರಿ ಬಿಗ್ ಬಾಸ್ ಮನೆ ಸೇರಲಿರುವ ಸಂಭಾವ್ಯ ಪಟ್ಟಿ ಈಗಾಗಲೇ ತಯಾರಾಗಿದೆಯಂತೆ. ಆದರೆ ಅಂತಿಮ ಹಂತದ ಜರಡಿ ಹಿಡಿಯುವ ಕಾರ್ಯಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.
PublicNext
30/06/2025 04:54 pm