", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/378325-1751102039-4.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SugandaRajuNajangud" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನಂಜನಗೂಡು: ರೈತನ ಕಣ್ಣ ಮುಂದೆಯೇ ಮರಿ ಜೊತೆ ತಾಯಿ ಹುಲಿ ಹಾದು ಹೋದ ಘಟನೆ ಗ್ರಾಮಸ್ಥರನ್ನ ಬೆಚ್ಚಿಬೀಳಿಸಿದೆ. ನಂಜನಗೂಡು ತಾಲೂಕಿನ ಅಂಜನಾಪುರ ಮತ್ತ...Read more" } ", "keywords": "Nanjanagudu tiger sighting, tiger spotted with cubs, villagers frightened, forest department alert, Karnataka wildlife news. ", "url": "https://dashboard.publicnext.com/node" } ನಂಜನಗೂಡು: ಕಣ್ಣಮುಂದೆಯೇ ಮರಿ ಜೊತೆ ಹಾದು ಹೋದ ವ್ಯಾಘ್ರ, ಗ್ರಾಮಸ್ಥರು ಭಯಭೀತ, ಅರಣ್ಯ ಇಲಾಖೆ ಸಿಬ್ಬಂದಿ ದೌಡು..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡು: ಕಣ್ಣಮುಂದೆಯೇ ಮರಿ ಜೊತೆ ಹಾದು ಹೋದ ವ್ಯಾಘ್ರ, ಗ್ರಾಮಸ್ಥರು ಭಯಭೀತ, ಅರಣ್ಯ ಇಲಾಖೆ ಸಿಬ್ಬಂದಿ ದೌಡು..!

ನಂಜನಗೂಡು: ರೈತನ ಕಣ್ಣ ಮುಂದೆಯೇ ಮರಿ ಜೊತೆ ತಾಯಿ ಹುಲಿ ಹಾದು ಹೋದ ಘಟನೆ ಗ್ರಾಮಸ್ಥರನ್ನ ಬೆಚ್ಚಿಬೀಳಿಸಿದೆ. ನಂಜನಗೂಡು ತಾಲೂಕಿನ ಅಂಜನಾಪುರ ಮತ್ತು ಈರೇಗೌಡನ ಹುಂಡಿ ಗ್ರಾಮದ ಜಮೀನಿನಲ್ಲಿ ತಾಯಿ ಹಾಗೂ ಮರಿ ಹುಲಿಗಳು ಕಾಣಿಸಿಕೊಂಡಿವೆ.

ಈರೇಗೌಡನ ಹುಂಡಿಯ ದೊರೆಸ್ವಾಮಿ ಎಂಬುವರ ಜಮೀನಿನಲ್ಲಿರುವ ತಂಬಾಕು ಬ್ಯಾರಲ್ ಸಮೀಪ ಮರಿ ಜೊತೆ ತಾಯಿ ಹುಲಿ ಹಾದುಹೋಗಿದೆ.ಕೂಗಳತೆ ದೂರದಲ್ಲೇ ಹಾದುಹೋದ ದೃಶ್ಯ ಕಂಡು ದೊರೆಸ್ವಾಮಿ ಬೆಚ್ಚಿಬಿದ್ದಿದ್ದಾರೆ. ಹೆಡಿಯಾಲ ವಿಭಾಗದ ಅರಣ್ಯ ಇಲಾಖೆಗೆ ಸುದ್ದಿ ರವಾನಿಸುತ್ತಿದ್ದಂತೆಯೇ ಸಿಬ್ಬಂದಿಗಳು ಧಾವಿಸಿದ್ದಾರೆ. ಭಾರೀ ಗಾತ್ರದ ಹುಲಿ ಹೆಜ್ಜೆ ಗುರುತು ಸಹ ಪತ್ತೆಯಾಗಿದೆ. ಕಾಡಿನತ್ತ ತೆರಳದೆ ಜಮೀನುಗಳಲ್ಲೇ ಹುಲಿ ತನ್ನ ಮರಿ ಜೊತೆ ಸೇರಿಕೊಂಡಿದೆ. ವ್ಯವಸಾಯಕ್ಕೆ ತೆರಳಲು ರೈತರು ಆತಂಕಕ್ಕೆ ಸಿಲುಕಿದ್ದಾರೆ.ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿ ಹಾಗೂ ಮರಿಯ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

Edited By : Somashekar
PublicNext

PublicNext

28/06/2025 02:44 pm

Cinque Terre

13.77 K

Cinque Terre

0

ಸಂಬಂಧಿತ ಸುದ್ದಿ