", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/421698-1751271967-Youtube-HD.00_24_03_07.Still2529~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕುಂದಾಪುರ: ತಾಲೂಕಿನ ಕೋಟೇಶ್ವರದಲ್ಲಿ ಕಳ್ಳರು ಮಾರಕಾಸ್ತ್ರದೊಂದಿಗೆ ಮನೆಗೆ ನುಗ್ಗಲು ಯತ್ನ ನಡೆಸಿದ ಘಟನೆ ಊರವರನ್ನು ಬೆಚ್ಚಿ ಬೀಳಿಸಿದೆ. ಭಾನುವಾ...Read more" } ", "keywords": "Kundapura Koteshwara, house break-in attempt, thieves with deadly weapons, Koteshwara crime news, armed robbery attempt Kundapura, house invasion Koteshwara, Kundapura thieves caught, Koteshwara home security, armed intruders Kundapura, house break-in Koteshwara, deadly weapons crime Kundapura, Koteshwara residents alert, Kundapura police action, house break-in attempt news, Koteshwara safety concerns", "url": "https://dashboard.publicnext.com/node" } ಕುಂದಾಪುರ : ಕೋಟೇಶ್ವರದಲ್ಲಿ ಮಾರಕಾಸ್ತ್ರಗಳೊಂದಿಗೆ ಮನೆಗೆ ನುಗ್ಗಲು ಯತ್ನಿಸಿದ ಕಳ್ಳರು !
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ : ಕೋಟೇಶ್ವರದಲ್ಲಿ ಮಾರಕಾಸ್ತ್ರಗಳೊಂದಿಗೆ ಮನೆಗೆ ನುಗ್ಗಲು ಯತ್ನಿಸಿದ ಕಳ್ಳರು !

ಕುಂದಾಪುರ: ತಾಲೂಕಿನ ಕೋಟೇಶ್ವರದಲ್ಲಿ ಕಳ್ಳರು ಮಾರಕಾಸ್ತ್ರದೊಂದಿಗೆ ಮನೆಗೆ ನುಗ್ಗಲು ಯತ್ನ ನಡೆಸಿದ ಘಟನೆ ಊರವರನ್ನು ಬೆಚ್ಚಿ ಬೀಳಿಸಿದೆ. ಭಾನುವಾರ ಮುಂಜಾನೆಯ ಹೊತ್ತಿಗೆ ಈ ಘಟನೆ ನಡೆದಿದೆ.

ಕುಂದಾಪುರ ತಾಲೂಕು ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿ ಬಳಿಯ ಮ್ಯಾಕ್ಸಿಮಾ ವಿಲ್ಲಾ ಎಂಬ ಮನೆಯ ಬಾಗಿಲಿನ ನೆಟ್ ಮುರಿದು ಕಳ್ಳರು ಒಳಗೆ ನುಗ್ಗಲು ಯತ್ನಿಸಿದ್ದಾರೆ. ಕಳ್ಳರು ಬಾಗಿಲು ಮುರಿಯುವ ಯತ್ನದಲ್ಲಿದ್ದಾಗ ಮನೆಯಾಕೆ ಎಚ್ಚರಗೊಂಡಿದ್ದಾರೆ.

ಈ ವೇಳೆ ಗಾಬರಿಯಿಂದ ಬೊಬ್ಬೆ ಹೊಡೆದಿದ್ದು, ಬಳಿಕ ಮಹಿಳೆ ಫೋನ್ ಕರೆ ಮಾಡುತ್ತಿರುವುದನ್ನು ಗಮನಿಸಿದ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಘಟನಾ ಸ್ಥಳಕ್ಕೆ ಕುಂದಾಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.

ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಕಳ್ಳರ ಕೃತ್ಯ ಸೆರೆಯಾಗಿದ್ದು, ಪೊಲೀಸರು ತಂಡ ರಚಿಸಿ ತನಿಖೆ ನಡೆಸುತ್ತಿದ್ದಾರೆ.

Edited By : Suman K
PublicNext

PublicNext

30/06/2025 01:56 pm

Cinque Terre

16.83 K

Cinque Terre

2

ಸಂಬಂಧಿತ ಸುದ್ದಿ