", "articleSection": "International", "image": { "@type": "ImageObject", "url": "https://prod.cdn.publicnext.com/s3fs-public/463655-1752570770-manjunath-(65).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸನಾ: ಯೆಮೆನ್ ಪ್ರಜೆಯ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರಣ ದಂಡನೆ ಶಿಕ್ಷೆಗೆ ಒಳಗಾಗಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ನಿರೀಕ್ಷಿತ ಪ್ರಮ...Read more" } ", "keywords": ""Nimisha Priya, Kerala nurse, death sentence, execution stay, India news, Kerala news, death penalty, nurse sentenced to death, Nimisha Priya case, Kerala nurse death sentence" ", "url": "https://dashboard.publicnext.com/node" } ಕೇರಳ ನರ್ಸ್‌ ನಿಮಿಷ ಪ್ರಿಯಾಗೆ ಮರಣದಂಡನೆ ಮುಂದೂಡಿಕೆ !
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇರಳ ನರ್ಸ್‌ ನಿಮಿಷ ಪ್ರಿಯಾಗೆ ಮರಣದಂಡನೆ ಮುಂದೂಡಿಕೆ !

ಸನಾ: ಯೆಮೆನ್ ಪ್ರಜೆಯ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರಣ ದಂಡನೆ ಶಿಕ್ಷೆಗೆ ಒಳಗಾಗಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ನಿರೀಕ್ಷಿತ ಪ್ರಮಾಣದಲ್ಲಿ ತಾತ್ಕಾಲಿಕ ರಕ್ಷಣೆ ಒದಗಿದ್ದು, ಜುಲೈ 16, 2025 ರಂದು ನಡೆಯಬೇಕಾಗಿದ್ದ ಮರಣದಂಡನೆಯನ್ನು ಯೆಮೆನ್ ಅಧಿಕಾರಿಗಳು ಮುಂದೂಡಿದ್ದಾರೆ.

ಪ್ರಿಯಾ ಪರವಾಗಿ ರಾಜತಾಂತ್ರಿಕ ಹಾಗೂ ಧಾರ್ಮಿಕ ನೆಲೆಗಳಲ್ಲಿ ನಿರಂತರ ಪ್ರಯತ್ನಗಳು ನಡೆದಿದ್ದು, ಇವು ಫಲಕಾರಿಯಾಗಿರುವ ಸೂಚನೆ ಇದೆ. ಭಾರತದ ಪ್ರಮುಖ ಸುನ್ನಿ ಮುಸ್ಲಿಂ ಧರ್ಮಗುರು, ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್, ಮೃತ ಯೆಮೆನ್ ನಾಗರಿಕ ತಲಾಲ್ ಅಬ್ದೋ ಮಹ್ದಿ ಅವರ ಕುಟುಂಬದೊಂದಿಗೆ ನೇರವಾಗಿ ಮಾತುಕತೆ ನಡೆಸಿದ್ದು, ಕ್ಷಮೆಗೆ ಬದಲಾಗಿ ಹಣ ಸ್ವೀಕರಿಸುವಂತೆ ಮನ ಒಲಿಸುತ್ತಿದ್ದಾರೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಸ್ಥಳೀಯ ಜೈಲು ಹಾಗೂ ಪ್ರಾಸಿಕ್ಯೂಟರ್ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಪರಿಣಾಮ, ಈ ತಾತ್ಕಾಲಿಕ ಮುಂದೂಡಿಕೆ ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಕೇರಳದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ವಿದೇಶಾಂಗ ಸಚಿವಾಲಯದೊಂದಿಗೆ ನೇರವಾಗಿ ಮಾತುಕತೆ ನಡೆಸಿದ್ದಾರೆ. ಅವರು ಭಾರತೀಯ ಉದ್ಯಮಿ ಎಂ. ಎ. ಯೂಸುಫಾಲಿ ಅವರೊಂದಿಗೆ ಸಹ ಸಂವಾದ ನಡೆಸಿದ್ದು, ಯೂಸುಫಾಲಿ ಅವರು ನಿಮ್ಮಿಷಾ ಪ್ರಿಯಾ ರಕ್ಷಣೆಗೆ ದೇಣಿಗೆ ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

ನಿಮಿಷಾ ಪ್ರಿಯಾ ಅವರ ಜೀವದ ಮೇಲಿದ್ದ ತಕ್ಷಣದ ಅಪಾಯ ದೂರವಾದರೂ, ಮುಂದಿನ ಹಂತಗಳಲ್ಲಿ ಮೃತ ವ್ಯಕ್ತಿಯ ಕುಟುಂಬದ ಒಪ್ಪಿಗೆ ಮತ್ತು ಹಣದ ಸಮರ್ಪಣೆಯು ನಿರ್ಣಾಯಕವಾಗಲಿದೆ.

Edited By :
PublicNext

PublicNext

15/07/2025 02:43 pm

Cinque Terre

44.25 K

Cinque Terre

1

ಸಂಬಂಧಿತ ಸುದ್ದಿ