", "articleSection": "Science and Technology,Government,International", "image": { "@type": "ImageObject", "url": "https://prod.cdn.publicnext.com/s3fs-public/387839-1752576929-WhatsApp-Image-2025-07-15-at-4.24.04-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕ್ಯಾಲಿಫೋರ್ನಿಯಾ : ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ನೌಕೆ ಸುರಕ್ಷಿತವಾಗಿ ಭೂಮಿಗೆ ಇಳಿದಿದೆ. ಕ್ಯಾಲಿಫೋರ್ನಿಯಾ ಸಮುದ್ರದಲ್ಲಿ ಯಶಸ್ವಿ ಸ್ಪ್ಲ್...Read more" } ", "keywords": "Shubhanshu Shukla, astronauts safe landing, splashdown, space mission success, Axiom Mission 4. ", "url": "https://dashboard.publicnext.com/node" } WATCH : ಭುವಿಗೆ ಶುಭಾಂಶು ಶುಕ್ಲಾ - ನಾಲ್ವರು ಗಗನಯಾತ್ರಿಗಳೂ ಸೇಫ್ ಸ್ಪ್ಲ್ಯಾಶ್​ಡೌನ್..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH : ಭುವಿಗೆ ಶುಭಾಂಶು ಶುಕ್ಲಾ - ನಾಲ್ವರು ಗಗನಯಾತ್ರಿಗಳೂ ಸೇಫ್ ಸ್ಪ್ಲ್ಯಾಶ್​ಡೌನ್..!

ಕ್ಯಾಲಿಫೋರ್ನಿಯಾ : ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ನೌಕೆ ಸುರಕ್ಷಿತವಾಗಿ ಭೂಮಿಗೆ ಇಳಿದಿದೆ. ಕ್ಯಾಲಿಫೋರ್ನಿಯಾ ಸಮುದ್ರದಲ್ಲಿ ಯಶಸ್ವಿ ಸ್ಪ್ಲ್ಯಾಶ್​ಡೌನ್ ನಡೆದಿದೆ.

(ಭಾರತೀಯ ಸಮಯ ಮಂಗಳವಾರ ಮಧ್ಯಾಹ್ನ 3.01)ಬಾಹ್ಯಾಕಾಶ ನೌಕೆ ಸಮುದ್ರದಲ್ಲಿ ಇಳಿದ ತಕ್ಷಣ, ಇಡೀ ದೇಶವೇ ಸಂಭ್ರಮ ಪಟ್ಟಿದೆ. ಇದರೊಂದಿಗೆ, ಶುಭಾಂಶು ಶುಕ್ಲಾ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಶುಭಾಂಶು ಶುಕ್ಲಾ 20 ದಿನಗಳು ಬಾಹ್ಯಾಕಾಶದಲ್ಲಿ ಮತ್ತು 18 ದಿನಗಳನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ನಂತರ ಇಂದು ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಶುಭಾಂಶು ಶುಕ್ಲಾ ಮತ್ತು ಇತರ ಸಿಬ್ಬಂದಿಯನ್ನು ಹೊತ್ತ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಕ್ಯಾಪ್ಸುಲ್ ಕ್ಯಾಲಿಫೋರ್ನಿಯಾ ಸಮುದ್ರದಲ್ಲಿ ಇಳಿದಿದೆ.

ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ನೌಕೆ ಸೋಮವಾರ ಸಂಜೆ ಸುಮಾರು 4.45 ರ ಸುಮಾರಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಅನ್‌ಡಾಕ್ ಆಗಿದೆ.

ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಆಕ್ಸಿಯಮ್ -4 ಮಿಷನ್‌ನ ಇತರ ಮೂವರು ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳ ವಾಸ್ತವ್ಯದ ನಂತರ ಭೂಮಿಗೆ ಮರಳಿದ್ದಾರೆ.

Edited By : Abhishek Kamoji
PublicNext

PublicNext

15/07/2025 04:25 pm

Cinque Terre

66.93 K

Cinque Terre

0

ಸಂಬಂಧಿತ ಸುದ್ದಿ