", "articleSection": "International", "image": { "@type": "ImageObject", "url": "https://prod.cdn.publicnext.com/s3fs-public/463655-1752747583-manjunath-(74).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ದೆಹಲಿ: ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳ ನರ್ಸ್‌ ನಿಮಿಷಾ ಪ್ರಿಯಾ ಬಿಡುಗಡೆಗೆ ಸಾಗುತ್ತಿರುವ ಮಾನವೀಯ ಮತ್ತು ರಾಜತಾಂತ್ರಿಕ ಪ್...Read more" } ", "keywords": ""Nimisha Priya case, death penalty, Yemen, Kiran Raj not mentioned but keywords related to case - Talal Abdo Mahdi, pardon rejected, execution postponed, Kerala nurse, Yemeni court, Sharia law, blood money, diplomatic efforts, Indian government intervention" ", "url": "https://dashboard.publicnext.com/node" } “ಮರಣದಂಡನೆ ತಪ್ಪಿಸಲು ಸಾಧ್ಯವಿಲ್ಲ” – ತಲಾಲ್ ಸಹೋದರನಿಂದ ಕ್ಷಮೆಗೆ ಸ್ಪಷ್ಟ ವಿರೋಧ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

“ಮರಣದಂಡನೆ ತಪ್ಪಿಸಲು ಸಾಧ್ಯವಿಲ್ಲ” – ತಲಾಲ್ ಸಹೋದರನಿಂದ ಕ್ಷಮೆಗೆ ಸ್ಪಷ್ಟ ವಿರೋಧ

ದೆಹಲಿ: ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳ ನರ್ಸ್‌ ನಿಮಿಷಾ ಪ್ರಿಯಾ ಬಿಡುಗಡೆಗೆ ಸಾಗುತ್ತಿರುವ ಮಾನವೀಯ ಮತ್ತು ರಾಜತಾಂತ್ರಿಕ ಪ್ರಯತ್ನಗಳಿಗೆ ತೀವ್ರ ಬೆಂಬಲ ವ್ಯಕ್ತವಾಗಿದೆ.

ಇತ್ತೀಚೆಗಷ್ಟೆ, ಹಿರಿಯ ಧಾರ್ಮಿಕ ನಾಯಕ ಕಾಂತಪುರಂ ಎ. ಪಿ. ಅಬೂಬಕರ್ ಮುಸ್ಲಿಯಾರ್ ನಡೆಸುತ್ತಿರುವ ಮಧ್ಯಸ್ಥಿಕೆಗೆ ಶಶಿ ತರೂರ್ ಶ್ಲಾಘನೆ ವ್ಯಕ್ತಪಡಿಸಿದ್ದು, ಈ ಹಾದಿಯು ಹೊಸ ಭರವಸೆಯನ್ನ ಮೂಡಿಸಿದೆ ಎಂದು ಹೇಳಿದ್ದಾರೆ.

"ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಲು ಹೋರಾಟ ನಡೆಯುತ್ತಿರುವ ಇಂದಿನ ಕಾಲದಲ್ಲಿ, ಕಾಂತಪುರಂರವರು ನೀಡುತ್ತಿರುವ ಸಂದೇಶ ಶಕ್ತಿಯುತವಾಗಿದೆ ಎಂದು ಎನ್‌ಡಿಟಿವಿಗೆ ನೀಡಿದ ಲೇಖನದಲ್ಲಿ ಶಶಿ ತರೂರ್ ಬರೆದಿದ್ದಾರೆ. ನಿಮಿಷಾ ಬಿಡುಗಡೆಗೆ ಬಲಿಷ್ಠ ರಾಜತಾಂತ್ರಿಕ ದೌತ್ಯ ಅಗತ್ಯವಾಗಿದೆ. ಕೇಂದ್ರ ಸರ್ಕಾರವೂ ಇದರತ್ತ ಗಮನ ಹರಿಸಿದೆ" ಎಂದು ಹೇಳಿದ್ದಾರೆ.

ಈ ಮಧ್ಯೆ, ಮಧ್ಯಸ್ಥಿಕೆ ತಂಡ ತಲಾಲ್ ಕುಟುಂಬದವರನ್ನು ಮತ್ತೆ ಭೇಟಿಯಾಗಿ ಮಾತುಕತೆ ನಡೆಸಿದೆ. ಧರ್ಮಗುರುಗಳೊಂದಿಗೆ ಚರ್ಚೆಯಾದರೂ, ತಲಾಲ್‌ನ ಸಹೋದರ ಅಬ್ದುಲ್ ಫತ್ತಾಹ್ ಕ್ಷಮೆಗೆ ಸಮ್ಮತಿಸಬೇಕೆಂಬ ಮಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಬರೆದು, “ಕ್ರೂರ ಕೊಲೆ ನಡೆದಿದ್ದು, ಮರಣದಂಡನೆ ತಪ್ಪಲು ಅವಕಾಶವಿಲ್ಲ. ಯಾವುದೇ ರಾಜಿಗೆ ನಾವು ಮಣಿಯುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, ಯೆಮೆನ್‌ನಲ್ಲಿ ಮರಣದಂಡನೆಗೆ ಬೆಂಬಲ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವೂ ಜೋರಾಗಿದೆ. ಇದರ ಪರಿಣಾಮ ಪೀಡಿತ ಕುಟುಂಬದ ಮೇಲೆ ಬಿದ್ದಿರಬಹುದೆಂಬ ಆತಂಕವೂ ವ್ಯಕ್ತವಾಗಿದೆ.

ಈ ಗಂಭೀರ ಸ್ಥಿತಿಯಲ್ಲಿ 94 ವರ್ಷದ ಧಾರ್ಮಿಕ ಗುರು ಎ. ಪಿ. ಅಬೂಬಕರ್ ಮುಸ್ಲಿಯಾರ್, ತಮ್ಮ ರಾಜತಾಂತ್ರಿಕ ಸಂಪರ್ಕಗಳಿಂದ ಮಧ್ಯಸ್ಥಿಕೆಯಲ್ಲಿ ಮುಂದಿದ್ದಾರೆ. ಭಾರತದ ‘ಗ್ರ್ಯಾಂಡ್ ಮುಫ್ತಿ’ಯೆಂಬ ಬಿರುದಿಗೆ ತಕ್ಕಂತೆ, ಅವರು ಸಮರಸ ಸ್ಥಿತಿಗಾಗಿ ಶ್ರಮಿಸುತ್ತಿದ್ದಾರೆ.

Edited By :
PublicNext

PublicNext

17/07/2025 03:50 pm

Cinque Terre

9.63 K

Cinque Terre

0

ಸಂಬಂಧಿತ ಸುದ್ದಿ