ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH : ಅಮೆರಿಕದ ಮಾಲ್‌ನಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಭಾರತೀಯ ಮಹಿಳೆ - 'ಬಿಟ್ಟುಬಿಡಿ' ಎಂದು ಗೋಗರೆದ ದೃಶ್ಯ!

ವಾಷಿಂಗ್ಟನ್ ಡಿಸಿ: ಅಮೆರಿಕದ ಪ್ರಸಿದ್ಧ ಮಾಲ್‌ವೊಂದರಲ್ಲಿ ₹1.09 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ ಆರೋಪದಲ್ಲಿ ಭಾರತೀಯ ಮಹಿಳೆಯೊಬ್ಬರು ಬಂಧಿಸಲಾಗಿದೆ.

ಇಲಿನಾಯ್ಸ್ ರಾಜ್ಯದ ಟಾರ್ಗೆಟ್‌ ಅಂಗಡಿಯೊಂದರಲ್ಲಿ 1,300 ಡಾಲರ್ (ಸುಮಾರು 1.09 ಲಕ್ಷ) ಮೌಲ್ಯದ ವಸ್ತುಗಳನ್ನು ಕದಿಯಲು ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆ ಬಾಡಿಕ್ಯಾಮ್‌ನಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದ ಪ್ರಕಾರ, ಮಹಿಳೆ ಭಾರತದಿಂದ ಅಮೆರಿಕಕ್ಕೆ ಬಂದಿದ್ದು ಹಲವಾರು ಗಂಟೆಗಳ ಕಾಲ ಮಾಲ್‌ನಲ್ಲಿ ಸುತ್ತಾಡಿದ್ದಳು. ನಂತರ, ಅವಳು ಹಣ ಪಾವತಿಸದೆ ಪೂರ್ತಿ ಶಾಪಿಂಗ್ ಕಾರ್ಟ್‌ನೊಂದಿಗೆ ಹೊರಬರಲು ಪ್ರಯತ್ನಿಸುತ್ತಿದ್ದಳು. ಅಂಗಡಿ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಕರೆ ಮಾಡಿ, ಸ್ಥಳಕ್ಕೆ ತಲುಪಿದ ಪೊಲೀಸರು ಮಹಿಳೆಯನ್ನು ತಡೆದಿದ್ದಾರೆ.

"ನಾನು ಹಣ ಕೊಡ್ತೀನಿ, ವಿಷಯವನ್ನು ಇಲ್ಲಿಗೆ ಮುಗಿಸಿ ಎಂದು ಮಹಿಳೆ ಪದೇ ಪದೇ ಹೇಳುತ್ತಾ ಬಿಟ್ಟುಬಿಡಿ ಎಂದು ಗೋಗರೆದಿದ್ದಾಳೆ. ಆದರೆ ಪೊಲೀಸರು ಅಂಗಡಿಯ ಬಿಲ್ ಅನ್ನು ಪರಿಶೀಲಿಸಿದರು. ಅದು 1,300 ಡಾಲರ್ ಗಿಂತ ಹೆಚ್ಚಿತ್ತು. ಹೀಗಾಗಿ ಮಹಿಳೆಯನ್ನು ಸ್ಥಳದಲ್ಲೇ ಬಂಧಿಸಲಾಗಿದೆ.

ಈ ಘಟನೆಯ ಬೆನ್ನಲ್ಲೇ ಅಮೆರಿಕ ರಾಯಭಾರ ಕಚೇರಿ ವೀಸಾ ಅರ್ಜಿದಾರರಿಗೆ ಎಚ್ಚರಿಕೆ ನೀಡಿ, ಕಳ್ಳತನ ಅಥವಾ ಹಲ್ಲೆ ಅಂತಹ ಅಪರಾಧಗಳಲ್ಲಿ ತೊಡಗಿದ್ರೆ ನಿಮ್ಮ ವೀಸಾ ರದ್ದಾಗಬಹುದು ಎಂದು ಸ್ಪಷ್ಟಪಡಿಸಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ. ಅನೇಕ ಜನರು ಮಹಿಳೆಯ ನಡವಳಿಕೆಯನ್ನು ಬೇಜವಾಬ್ದಾರಿ ಮತ್ತು ಕಾನೂನನ್ನು ನಿರ್ಲಕ್ಷಿಸುವುದು ಎಂದು ಬಣ್ಣಿಸಿದರು. ಮತ್ತೊಬ್ಬರು ನಾನು ಕೂಡ ವಲಸಿಗ, ಆದರೆ ಬೇರೆ ದೇಶಕ್ಕೆ ಹೋಗಿ ಈ ರೀತಿ ಕಾನೂನನ್ನು ಉಲ್ಲಂಘಿಸುವುದು ಸರಿಯಲ್ಲ, ಯಾವುದೇ ಜಾತಿ, ಏನೇ ಇರಲಿ ತಪ್ಪು ತಪ್ಪೇ ಎಂದು ಅಲ್ಲಿನ ಕಠಿಣ ಕಾನೂನಿನ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ.

ಆದಾಗ್ಯೂ, ಘಟನೆಯನ್ನು ಇನ್ನೂ ಅಧಿಕೃತವಾಗಿ ದೃಢೀಕರಿಸಲಾಗಿಲ್ಲ, ಈ ಬಗ್ಗೆ ತನಿಖೆ ನಡೆಯುತ್ತಿದೆ.

Edited By : Abhishek Kamoji
PublicNext

PublicNext

17/07/2025 06:59 pm

Cinque Terre

25.01 K

Cinque Terre

1

ಸಂಬಂಧಿತ ಸುದ್ದಿ