ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಗನದಿಂದ ಮರಳಿದ ಮಗನ : ತಾಯಿಯ ಕಣ್ಣಲ್ಲಿ ಆನಂದದ ಹರಿವು

ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಭೂಮಿಗೆ ಯಶಸ್ವಿಯಾಗಿ ಮರಳಿದ್ದಾರೆ. ಆಕ್ಸಿಯಮ್–4 ಮಿಷನ್‌ನಲ್ಲಿ ಭಾಗವಹಿಸಿದ್ದ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ ಸುರಕ್ಷಿತವಾಗಿ ಭೂಮಿಗೆ ಇಳಿದಿದೆ.

ಡ್ರ್ಯಾಗನ್ ನೌಕೆಯ ಸ್ಪ್ಲಾಶ್‌ಡೌನ್ ಆಗಿರುವ ಕ್ಷಣವನ್ನು ವೀಕ್ಷಿಸಿದ ಶುಕ್ಲಾ ಅವರ ಕುಟುಂಬಸ್ಥರು ಭಾವುಕರಾಗಿ ಸಂಭ್ರಮಾಚರಣೆ ಮಾಡಿದ್ದಾರೆ. ನೌಕೆಯಿಂದ ಹೊರಬರುತ್ತಿರುವ ದೃಶ್ಯಗಳನ್ನು ನೋಡುತ್ತಿದ್ದಂತೆಯೇ ತಾಯಿ ಆಶಾ ಶುಕ್ಲಾ ಕಣ್ಣೀರಿಡುತ್ತಿದ್ದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಆಶಾ ಶುಕ್ಲಾ, ಅವರು "ನನ್ನ ಮಗ ಸುರಕ್ಷಿತವಾಗಿ ಮರಳಿದ್ದಾನೆ ಎಂಬ ಖುಷಿಗೆ ಪದಗಳೇ ಸಾಲವಿಲ್ಲ. ಅವನು ಪಟ್ಟಿರುವ ಪರಿಶ್ರಮ ಇಂದಿಗೆ ಫಲ ನೀಡಿದೆ. ಈ ಕ್ಷಣ ದೇವರಿಗೆ ಧನ್ಯವಾದ ಹೇಳಲೇಬೇಕು" ಎಂದರು.

ತಂದೆ ಶಂಭು ದಯಾಳ್ ಶುಕ್ಲಾ ಮಾತನಾಡಿ, "ಇದು ಕೇವಲ ನಮ್ಮ ಕುಟುಂಬದ ಹೆಮ್ಮೆ ಅಲ್ಲ, ಇಡೀ ದೇಶದ ಹೆಮ್ಮೆ. ಶುಭಾಂಶು ಭಾರತಕ್ಕೆ ಬರುವ ಕ್ಷಣವನ್ನು ನಾವು ಕಾತುರದಿಂದ ಕಾಯುತ್ತಿದ್ದೇವೆ. ಇವನು ಇಂದಿನಿಂದ ದೇಶದ ಗಗನಯಾನ ಸಾಹಸದ ಐಕಾನ್" ಎಂದು ಭಾವೋದ್ರೇಕದ ಮಾತುಗಳನ್ನಾಡಿದ್ದಾರೆ.

Edited By :
PublicNext

PublicNext

15/07/2025 07:16 pm

Cinque Terre

123.23 K

Cinque Terre

1

ಸಂಬಂಧಿತ ಸುದ್ದಿ