", "articleSection": "Crime,Government,Viral", "image": { "@type": "ImageObject", "url": "https://prod.cdn.publicnext.com/s3fs-public/222042-1752669807-Canva---2025-07-16T180955.280.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಕಾರವಾರ: ಗೋಕರ್ಣದ ಬಳಿ ದಟ್ಟಕಾನನದ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ ಕುರಿತು ದಿನಕ್ಕೊಂದು ವಿಷಯಗಳು ಬಯಲಾಗುತ್ತಿದ್ದು, ಸದ್ಯ ಆಕೆಯ ಪ್ರಿ...Read more" } ", "keywords": "Russian woman gives birth in cave, solo birth in cave, unusual birth story, woman delivers baby in wilderness, cave birth survival, remote birth, wilderness survival story, unusual news, inspiring survival story, ", "url": "https://dashboard.publicnext.com/node" } ಗುಹೆಯಲ್ಲಿ ತಾನೇ ಹೆರಿಗೆ ಮಾಡಿಕೊಂಡಿದ್ದ ರಷ್ಯಾದ ಮಹಿಳೆ! ಪುತ್ರಿಯರೊಂದಿಗೆ ಬದುಕಲು ತಂದೆ ತವಕ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಹೆಯಲ್ಲಿ ತಾನೇ ಹೆರಿಗೆ ಮಾಡಿಕೊಂಡಿದ್ದ ರಷ್ಯಾದ ಮಹಿಳೆ! ಪುತ್ರಿಯರೊಂದಿಗೆ ಬದುಕಲು ತಂದೆ ತವಕ

ಕಾರವಾರ: ಗೋಕರ್ಣದ ಬಳಿ ದಟ್ಟಕಾನನದ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ ಕುರಿತು ದಿನಕ್ಕೊಂದು ವಿಷಯಗಳು ಬಯಲಾಗುತ್ತಿದ್ದು, ಸದ್ಯ ಆಕೆಯ ಪ್ರಿಯಕರ ತನ್ನ ಮಕ್ಕಳನ್ನು ಹುಡುಕಿಕೊಂಡು ಬಂದಿದ್ದಾರೆ.

ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿರುವ ಇಸ್ರೇಲ್ ಪ್ರಜೆ ಡ್ರೋರ್ ಗೋಲ್ಡ್‌ಸ್ಟೈನ್, ಮಕ್ಕಳಾದ ಪ್ರೇಯಾ (6) ಮತ್ತು ಅಮಾ (4) ಪಾಲನೆಯನ್ನು ನೀನಾ ಕುಟಿನಾ ಜೊತೆಗೆ ಹಂಚಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ನನ್ನ ಇಬ್ಬರು ಪುತ್ರಿಯರಿಗೆ ಹತ್ತಿರವಾಗಲು ಬಯಸುತ್ತೇನೆ. ಪೋಷಣೆಯ ಹಂಚಿಕೆಗೆ ಒತ್ತಾಯಿಸಿದ ಅವರು, ಮಕ್ಕಳನ್ನು ಭೇಟಿಯಾಗಲು, ಅವರಿಗೆ ಹತ್ತಿರವಾಗಲು ಮತ್ತು ತಂದೆಯಾಗಿರಲು ಮನಸ್ಸು ಬಯಸುತ್ತಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

'ಗೋವಾಗೆ ತೆರಳಿದ್ದಾಗ ನೀನಾ ಕುಟಿನಾ ಹಾಗೂ ನನ್ನ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. 2017ರಿಂದ 2024ರವರೆಗೂ ನಾವಿಬ್ಬರು ಲಿವಿಂಗ್ ಟುಗೆದರ್ ರಿಲೇಷನ್‌ಶಿಪ್‌ನಲ್ಲಿದ್ದೆವು. ವರ್ಷದಲ್ಲಿ ಆರು ತಿಂಗಳು ಗೋವಾದಲ್ಲಿ ಇರುತ್ತಿದ್ದೆವು. ಇಬ್ಬರು ಕೂಡ ದೊಡ್ಡದಾದ ವಿಲ್ಲಾದಲ್ಲಿ ವಾಸವಾಗಿದ್ದೆವು. 2019ರಿಂದಲೂ ನಾನು ಆಕೆಗೆ ಪ್ರತಿ ತಿಂಗಳು 400 ಡಾಲರ್ (3.5 ಲಕ್ಷ) ಹಣವನ್ನು ಕೊಡುತ್ತಿದ್ದೆ. ಆದರೆ 2024ರ ಡಿಸೆಂಬರ್‌ನಲ್ಲಿ ನೀನಾ ಯಾವುದೇ ಮಾಹಿತಿ ನೀಡದೇ ಗೋವಾದಿಂದ ಹೊರಟು ಹೋಗಿದ್ದಳು. ಬಳಿಕ ನಾನು ಪಣಜಿಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ಕೊಟ್ಟಿದ್ದೆ. ಬಳಿಕ ಮಾರ್ಚ್ ತಿಂಗಳಲ್ಲಿ ಆಕೆ ಮಕ್ಕಳ ಜೊತೆಗೆ ಗೋಕರ್ಣದಲ್ಲಿ ಇರುವುದು ಗೊತ್ತಾಗಿದೆ' ಎಂದು ಹೇಳಿದ್ದಾರೆ.

ಗುಹೆಯ ಒಳಗೆ ವಾಸಿಸುತ್ತಿದ್ದ ಆಕೆ ಪತ್ತೆಯಾಗಿರುವುದು ಅನೇಕರನ್ನು ಬೆರಗುಗೊಳಿಸಿದ್ದರೆ ನೀನಾ ಕುಟಿನಾ, ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಮ್ಮ ಕುಟುಂಬ ಪ್ರಕೃತಿಯನ್ನು ಪ್ರೀತಿಸುತ್ತದೆ. ಕಳೆದ 15 ವರ್ಷಗಳಲ್ಲಿ 20 ದೇಶಗಳ ಕಾಡುಗಳಲ್ಲಿ ವಾಸಿಸಿರುವುದಾಗಿ ಆಕೆ ಹೇಳಿದ್ದಾಳೆ. ನನ್ನ ಮಕ್ಕಳೆಲ್ಲರೂ ಬೇರೆ ಬೇರೆ ಸ್ಥಳಗಳಲ್ಲಿ ಜನಿಸಿದರು. ಆಸ್ಪತ್ರೆಗಳು ಅಥವಾ ವೈದ್ಯರು ಇಲ್ಲದೆ ನಾನು ಅವರೆಲ್ಲರಿಗೂ ಜನ್ಮ ನೀಡಿದ್ದೇನೆ. ಏಕೆಂದರೆ ಅದನ್ನು ಹೇಗೆ ಮಾಡಬೇಕೆಂದು ನನಗೆ ತಿಳಿದಿದೆ. ಯಾರೂ ನನಗೆ ಸಹಾಯ ಮಾಡಲಿಲ್ಲ, ನಾನೊಬ್ಬಳೆ ಅದೆಲ್ಲಾವನ್ನು ಮಾಡಿರುವುದಾಗಿ ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ನೀನಾ ತನ್ನ ಇಬ್ಬರು ಪುತ್ರರು ಮತ್ತು ಒಬ್ಬಳು ಮಗಳೊಂದಿಗೆ ಹಲವು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದರು. ಅವರ ಹಿರಿಯ ಮಗ 21ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಅವರ ಇನ್ನೊಬ್ಬ ಮಗ ಎಲ್ಲಿದ್ದಾನೆ ಎಂಬುದು ತಿಳಿದಿಲ್ಲ. ಆಕೆಯ ವ್ಯಾಪಾರ ವೀಸಾವು 2017 ರಲ್ಲಿ ಮುಕ್ತಾಯಗೊಂಡಿತ್ತು. ಆಗಿನಿಂದಲೂ ಅನೇಕ ಸಂಕೀರ್ಣ ಕಾರಣಗಳಿಂದ ಗುಹೆಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.

ಅನೇಕ ವೈಯಕ್ತಿಕ ನಷ್ಟಗಳು ಸಂಭವಿಸಿವೆ. ನನ್ನ ಮಗನ ಸಾವು ಮಾತ್ರವಲ್ಲ, ಇತರ ಕೆಲವು ನಿಕಟವರ್ತಿಗಳ ಸಾವು, ನಿರಂತರ ದುಃಖ, ಕಾಗದಪತ್ರಗಳು ಮತ್ತಿತರ ಸಮಸ್ಯೆಗಳಿದ್ದವು ಎಂದು ನೀನಾ ಹೇಳಿಕೊಂಡಿದ್ದಾರೆ.

Edited By : Vijay Kumar
PublicNext

PublicNext

16/07/2025 06:14 pm

Cinque Terre

35.53 K

Cinque Terre

0

ಸಂಬಂಧಿತ ಸುದ್ದಿ