", "articleSection": "Entertainment,Cinema", "image": { "@type": "ImageObject", "url": "https://prod.cdn.publicnext.com/s3fs-public/421698-1752660253-27~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ChaitanyaKothari" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನಟ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ. ಮಳೆಯನ್ನೂ ಲೆಕ್ಕಿಸದೆ ಶಿವಣ್ಣನ ನಿವಾಸದ ಮುಂದೆ ಜ...Read more" } ", "keywords": "ಮಳೆ ಲೆಕ್ಕಿಸದೆ ಶಿವಣ್ಣನಿಗೆ ಜೈಕಾರ- ಅಭಿಮಾನಿಗಳಿಂದ ಹ್ಯಾಟ್ರಿಕ್ ಹೀರೋಗೆ ವಿಶಿಷ್ಟ ಗೌರವ! ", "url": "https://dashboard.publicnext.com/node" } ಮಳೆ ಲೆಕ್ಕಿಸದೆ ಶಿವಣ್ಣನಿಗೆ ಜೈಕಾರ- ಅಭಿಮಾನಿಗಳಿಂದ ಹ್ಯಾಟ್ರಿಕ್ ಹೀರೋಗೆ ವಿಶಿಷ್ಟ ಗೌರವ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆ ಲೆಕ್ಕಿಸದೆ ಶಿವಣ್ಣನಿಗೆ ಜೈಕಾರ- ಅಭಿಮಾನಿಗಳಿಂದ ಹ್ಯಾಟ್ರಿಕ್ ಹೀರೋಗೆ ವಿಶಿಷ್ಟ ಗೌರವ!

ನಟ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ. ಮಳೆಯನ್ನೂ ಲೆಕ್ಕಿಸದೆ ಶಿವಣ್ಣನ ನಿವಾಸದ ಮುಂದೆ ಜಮಾಯಿಸಿದ್ದ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಶಿವರಾಜ್‌ಕುಮಾರ್ ಕೇಕ್ ಕತ್ತರಿಸಿದರು.

ಅಭಿಮಾನಿಗಳೊಂದಿಗೆ ಶಿವಣ್ಣನ ಸಂಭ್ರಮ... ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆ ಸುರಿಯುತ್ತಿದ್ದರೂ, ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ್ದ ಶಿವಣ್ಣನ ಅಭಿಮಾನಿಗಳು ಅವರ ನಿವಾಸದ ಮುಂದೆ ನೆರೆದಿದ್ದರು. ಅಭಿಮಾನಿಗಳ ಅಬ್ಬರ ಮುಗಿಲು ಮುಟ್ಟಿತ್ತು.

ಈ ವೇಳೆ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರೊಂದಿಗೆ ಶಿವಣ್ಣ ಕೇಕ್ ಕತ್ತರಿಸಿ ಸಂಭ್ರಮಿಸಿದರು. ನಂತರ ಮೈಕ್ ಹಿಡಿದು ನೆರೆದಿದ್ದ ಅಭಿಮಾನಿಗಳೊಂದಿಗೆ ಮಾತನಾಡಿದ ಶಿವಣ್ಣ, ನಿಮ್ಮನ್ನು ಹೋಗಿ ಅನ್ನೋಕು ನನಗೆ ಇಷ್ಟ ಇಲ್ಲ. ನಿಮ್ಮ ಪ್ರೀತಿ ಅಮೂಲ್ಯವಾದದ್ದು, ಎಂದು ಅಭಿಮಾನಿಗಳನ್ನು ಕೊಂಡಾಡಿದರು.

ಈ ಬಾರಿಯ ಹುಟ್ಟುಹಬ್ಬ ಶಿವರಾಜ್‌ಕುಮಾರ್ ಅವರಿಗೆ ವಿಶೇಷವಾಗಿತ್ತು. ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾದ ಬಳಿಕ ಆಚರಿಸಿಕೊಳ್ಳುತ್ತಿರುವ ಮೊದಲ ಹುಟ್ಟುಹಬ್ಬ ಇದಾಗಿದೆ. ಅಮೆರಿಕದಲ್ಲಿ ಶಿವಣ್ಣನವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಶಿವಣ್ಣ ತಮ್ಮ ವೈದ್ಯರಿಗೆ ಪೇಟಾ ತೊಡಿಸಿ ಗೌರವಿಸಿದರು.

Edited By : Suman K
PublicNext

PublicNext

16/07/2025 03:35 pm

Cinque Terre

13.97 K

Cinque Terre

1