", "articleSection": "Politics,Business", "image": { "@type": "ImageObject", "url": "https://prod.cdn.publicnext.com/s3fs-public/463655-1752732734-manjunath-(69).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಅವರು ‘ವಾರಕ್ಕೆ 70 ಗಂಟೆ ಕೆಲಸದ ಅಭಿಪ್ರಾಯ ಕುರಿತು ಮಾತನಾಡಿದ್ದು, ಈ ಬಾರಿ ಪ್ರಧಾನಿ ನರ...Read more" } ", "keywords": "Narayan Murthy praises PM Modi, Modi works 100 hours a week, PM Modi work ethic, Narayan Murthy on PM Modi, Modi's work dedication, Indian PM Modi praised, Narayan Murthy statement on PM Modi, PM Modi's work schedule, Modi's leadership skills. ", "url": "https://dashboard.publicnext.com/node" }
ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಅವರು ‘ವಾರಕ್ಕೆ 70 ಗಂಟೆ ಕೆಲಸ'ದ ಅಭಿಪ್ರಾಯ ಕುರಿತು ಮಾತನಾಡಿದ್ದು, ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ನಾನು ವಾರಕ್ಕೆ 100 ಗಂಟೆ ಕೆಲಸ ಮಾಡುವ ವ್ಯಕ್ತಿ ಯಾರಿದ್ದಾರೆ ಎಂಬ ಪ್ರಶ್ನೆಗೆ ಒಂದೇ ಉತ್ತರ – ಪ್ರಧಾನಿ ನರೇಂದ್ರ ಮೋದಿ" ಎಂದು ಅವರು ಹೇಳಿದ್ದಾರೆ.
ಮುಂಬೈ–ಬೆಂಗಳೂರು ಇಂಡಿಗೋ ವಿಮಾನದಲ್ಲಿ ನಾರಾಯಣ ಮೂರ್ತಿ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಆಕಸ್ಮಿಕವಾಗಿ ಭೇಟಿಯಾಗಿದ್ದು, ಈ ಸಂದರ್ಭದಲ್ಲಿ ನಡೆದ ಸಂವಾದವನ್ನು ತೇಜಸ್ವಿ ಸೂರ್ಯ ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿರಿ ಹಂಚಿಕೊಂಡಿದ್ದಾರೆ. "ಇಂದು ಮುಂಬೈದಿಂದ ಬೆಂಗಳೂರಿಗೆ ಹಿಂತಿರುಗುವಾಗ ಮೂರ್ತಿ ಅವರ ಜೊತೆಗೆ ಸ್ಫೂರ್ತಿದಾಯಕ ಸಂಭಾಷಣೆ ನಡೆದಿದೆ. ಆ ಎರಡು ಗಂಟೆಗಳ ಕಾಲ ನಿಜಕ್ಕೂ ಕಲಿಕಾ ಪಾಠವಾಗಿತ್ತು. ಸಂಭಾಷಣೆಯ ಕೊನೆಯಲ್ಲಿ ನಾನು ಅವರಿಗೆ ಹಾಸ್ಯಮಯವಾಗಿ, 'ನೀವು ಸಲಹೆ ನೀಡಿರುವಂತೆ ವಾರಕ್ಕೆ 70 ಗಂಟೆ ಕೆಲಸ ಮಾಡುವ ಗುರಿ ತಲುಪಲು ಪ್ರಯತ್ನಿಸುತ್ತೇನೆ’ ಎಂದೆ. ಆಗ ಅವರು, ‘ನಾನು ತಿಳಿದಿರುವ ಹಾಗೆ ವಾರಕ್ಕೆ 100 ಗಂಟೆ ಕೆಲಸ ಮಾಡುವ ಏಕೈಕ ವ್ಯಕ್ತಿ ಮೋದಿ’ ಎಂದು ಹೇಳಿದರು."
ಈ ಹಿಂದೆ ನಾರಾಯಣ ಮೂರ್ತಿ ನೀಡಿದ "ಭಾರತದ ಕೆಲಸದ ಸಂಸ್ಕೃತಿ ಬದಲಾಗಬೇಕು, ಯುವಜನತೆ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು" ಎಂಬ ಹೇಳಿಕೆಗೆ ಭಾರಿ ವಿವಾದಗಳೆದ್ದು, ಇದನ್ನು ಸಮ್ಮತಿಸಿದ ಎಲ್‌ಆ್ಯಂಡಟಿ ಮುಖ್ಯಸ್ಥ ಎನ್. ಎನ್. ಸುಬ್ರಹ್ಮಣ್ಯನ್ ಅವರು ಉದ್ಯೋಗಿಗಳು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೇ ರೀತಿಯಾಗಿ ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಕೂಡ ಭಾರತೀಯರು ವಾರಕ್ಕೆ 80–90 ಗಂಟೆ ಕೆಲಸ ಮಾಡಬೇಕೆಂದು ಹೇಳಿ ಚರ್ಚೆಗೆ ಗ್ರಾಸವಾಗಿದ್ದರು.
PublicNext
17/07/2025 11:42 am