", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/52563-1752737462-image-(19).png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಬಿಹಾರ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದಂತೆ ಎಲ್ಲಾ ಗೃಹ ಬಳಕೆದಾರರಿಗೆ ಮಾಸಿಕ 125 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ ನೀಡು...Read more" } ", "keywords": "Santosh Lad, Bihar free electricity, Karnataka guarantee scheme, Congress, BJP, Siddaramaiah, Electricity bill waiver, Karnataka politics", "url": "https://dashboard.publicnext.com/node" } ಬೆಂಗಳೂರು : ಬಿಹಾರದಲ್ಲಿ ಉಚಿತ ವಿದ್ಯುತ್ ಘೋಷಣೆ : ನಮ್ಮ ಗ್ಯಾರಂಟಿ ಅನುಕರಣೆ ಎಂದ ಸಂತೋಷ್ ಲಾಡ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಬಿಹಾರದಲ್ಲಿ ಉಚಿತ ವಿದ್ಯುತ್ ಘೋಷಣೆ : ನಮ್ಮ ಗ್ಯಾರಂಟಿ ಅನುಕರಣೆ ಎಂದ ಸಂತೋಷ್ ಲಾಡ್

ಬೆಂಗಳೂರು : ಬಿಹಾರ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದಂತೆ ಎಲ್ಲಾ ಗೃಹ ಬಳಕೆದಾರರಿಗೆ ಮಾಸಿಕ 125 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ ನೀಡುವ ಘೋಷಣೆ ಮಾಡಿದೆ. ಇದು ಕಾಂಗ್ರೆಸ್ ಗ್ಯಾರಂಟಿ ಯೋಜನೆಯಿಂದ ಮಾಡಿದ ಅನುಕರಣೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.

ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಯನ್ನು ಟೀಕೆ ಮಾಡುತ್ತಿರುವ ಬಿಜೆಪಿ ಚುನಾವಣೆಯ ಸಂದರ್ಭದಲ್ಲಿ ನಮ್ಮ ಗ್ಯಾರಂಟಿ ಯೋಜನೆಯನ್ನ ಅನುಕರಣೆ ಮಾಡುತ್ತಿದೆ, ಬಿಜೆಪಿ ಅಧಿಕಾರ ಬರೊಕೆ ಮೊದಲು ಆಧಾರ್ ಕಾರ್ಡ್ ವಿರುದ್ದ ಮಾತಾಡಿದ್ರು, ನರೇಗ ವಿರುದ್ದ ಮಾತಾಡಿದ್ರು, ಐದು ಗ್ಯಾರಂಟಿ ವಿರುದ್ದ ಮಾತಾಡಿದ್ರು ಈಗ ಚುನಾವಣೆ ಬಂದಾಗ ನಮ್ಮ ಗ್ಯಾರಂಟಿ ಸ್ಕೀಮ್ ಘೊಷಣೆ ಮಾಡ್ತಿದ್ದಾರೆ. ಕಳೆದ 25 ವರ್ಷದಿಂದ ಬಿಹಾರದಲ್ಲಿ ಬಿಜೆಪಿ‌ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ, ಬಿಹಾರ ದೇಶದಲ್ಲೇ ಅತ್ಯಂತ ಭ್ರಷ್ಟ ರಾಜ್ಯ,ಜಿಎಸ್ ಟಿ ಸಂಗ್ರಹ ಪ್ರಮಾಣ ಅತ್ಯಂತ ಕಡಿಮೆ,ಶಿಕ್ಷಣ,ಕೈಗಾರಿಕೆಯಲ್ಲಿ ಹಿಂದುಳಿದಿದೆ ಎಂದರು.

ದಕ್ಷಿಣದ ರಾಜ್ಯಗಳಿಗೆ ಬಿಜೆಪಿ ಆಡಳಿತ ಯಾವುದೇ ರಾಜ್ಯವನ್ನು ಹೋಲಿಕೆ ಮಾಡಲು ಅಸಾದ್ಯ, ನಮ್ಮ ಪಾಲಿನ ಜಿಎಸ್ ಟಿ ಹಣವು ಅಲ್ಲಿಗೆ ಹೋಗುತ್ತಿದೆ, ಇಷ್ಟೆಲ್ಲ ಹಣ ಹೋದ್ರು‌ 15 ಸೇತುವೆ ಬಿದ್ದಿವೆ, ಇವರೆಗೂ ಬಿಹಾರ ರಾಜ್ಯ ಉದ್ದಾರ ಆಗಿಲ್ಲಾ ಎಂದು ಕಿಡಿ ಕಾರಿದರು.

Edited By : Nirmala Aralikatti
PublicNext

PublicNext

17/07/2025 01:01 pm

Cinque Terre

16.93 K

Cinque Terre

2

ಸಂಬಂಧಿತ ಸುದ್ದಿ