ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಭಾವನಾ ತಾಯಿಯಾಗುತ್ತಿರುವ ಸಂತಸದಲ್ಲಿ ಮುಳುಗಿದ್ದಾರೆ. ಈಗಾಗಲೇ ಏಳು ತಿಂಗಳ ಗರ್ಭಿಣಿಯಾಗಿರುವ ಅವರು ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ಮದುವೆಯಾಗದೆ ಭಾವನಾ ಹೇಗೆ ಗರ್ಭಿಣಿಯಾಗಿದರು ಎಂಬುದು ಕೆಲವರಿಗೆ ಆಶ್ಚರ್ಯ ಹುಟ್ಟಿಸಬಹುದು. ಆದರೆ, ಅವರು ಐವಿಎಫ್ ಚಿಕಿತ್ಸೆಯ ಮೂಲಕ ತಮ್ಮ ಗರ್ಭದಲ್ಲಿಯೇ ಮಕ್ಕಳನ್ನು ಧರಿಸುತ್ತಿರುವುದು ಗಮನಾರ್ಹ. ನಟಿಯಾಗಿ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಭಾವನಾ ಅವರು ಈಗ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಇಂದಿನ ಆಧುನಿಕ ವೈದ್ಯಕೀಯ ತಂತ್ರಜ್ಞಾನದಿಂದ ಪುರುಷನ ನೆರವಿಲ್ಲದೆ ಸಹ ತಾಯಿಯಾಗುವುದು ಸಾಧ್ಯವಾಗಿದೆ. ಭಾವನಾ ಅವರು ಕೂಡ ಇದೇ ಮಾರ್ಗದ ಮೂಲಕ ತಾಯಿಯಾಗಿ, ತಮ್ಮ ಸಂತಸದ ವಿಷಯವನ್ನು ‘ಪಬ್ಲಿಕ್ ನೆಕ್ಸ್ಟ್’ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
PublicNext
17/07/2025 01:25 pm