ಥೈಲ್ಯಾಂಡ್ : ಡೆವಿಲ್ ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ನಟ ದರ್ಶನ್ ಥೈಲ್ಯಾಂಡ್‌ಗೆ ತೆರಳಿದ್ದಾರೆ. ಇಂದಿನಿಂದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು ಹಸಿರು ಬಣ್ಣದ ಸೂಟ್ ಕಾಸ್ಟ್ಯೂಮ್‌ನಲ್ಲಿ ಮಿಂಚಿದ್ದಾರೆ. ವಿದೇಶಿ ಪ್ರವಾಸಿಗರ ಜೊತೆ ದರ್ಶನ್ ಫೋಟೋ ರಿವೀಲ್ ಆಗಿದೆ.
ಕಳೆದ ಮಂಗಳವಾರ ರಾತ್ರಿ ದರ್ಶನ್, ಪತ್ನಿ ವಿಜಯಲಕ್ಷ್ಮಿ ಪುತ್ರ ವಿನೀಶ್ ಜೊತೆ ಹಾಗೂ ಡೆವಿಲ್ ಟೀಮ್ ಜೊತೆ ಥೈಲ್ಯಾಂಡ್‌ಗೆ ತೆರಳಿದ್ದರು. ಇದೀಗ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ನಟಿ ರಚನಾ ರೈ ಜೊತೆ ದರ್ಶನ್ ಡ್ಯುಯೆಟ್ ಸಾಂಗ್ ಇದಾಗಿದೆ.
ನಾಲ್ಕೈದು ದಿನಗಳ ಕಾಲ ಥೈಲ್ಯಾಂಡ್ ದೇಶದ ಬ್ಯಾಂಕಾಕ್, ಫುಕೆಟ್, ಕ್ರಾಬಿಯಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದ್ದು ಬಳಿಕ ಕೆಲ ದಿನ ದರ್ಶನ್ ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ದರ್ಶನ್ ಭಾರತಕ್ಕೆ ಮರಳಲಿದ್ದಾರೆ. ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದ ದರ್ಶನ್ ವರ್ಷಗಳ ಬಳಿಕ ದೇಶ ಬಿಟ್ಟು ವಿದೇಶಕ್ಕೆ ತೆರಳಿರುವ ಖುಷಿಯಲ್ಲಿದ್ದಾರೆ.
PublicNext
17/07/2025 04:56 pm