ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅನುಶ್ರೀ ಮದುವೆ ಸುದ್ದಿ ವೈರಲ್!- ಡೇಟ್ ಫಿಕ್ಸ್

ಬೆಂಗಳೂರು: ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ಅವರ ಮದುವೆ ಬಗ್ಗೆ ಕಳೆದ ಕೆಲವು ತಿಂಗಳಿಂದ ಕೇಳಿ ಬರುತ್ತಿದ್ದ ಸುದ್ದಿಗಳಿಗೆ ಈಗ ನಿಜಾಂಶ ಪತ್ತೆಯಾಗಿದೆ. ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರ ಮದುವೆ ದಿನಾಂಕ ಆಗಸ್ಟ್ 28ಕ್ಕೆ ನಿಗದಿಯಾಗಿದೆ.

ಅನುಶ್ರೀ ಅವರು ಮದುವೆಯಾಗುತ್ತಿರುವವರು ಮಂಗಳೂರಿನ ಮೂಲದ, ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಟೆಕ್ ಉದ್ಯೋಗಿಯಾಗಿದ್ದಾರೆ ಎನ್ನಲಾಗಿದೆ. ಈ ವಿವಾಹದ ಬಗ್ಗೆ ಕುಟುಂಬದವರೇ ಮುಂದಾಗಿ ನೋಡಿದ ವರನೊಂದಿಗೆ ಈ ಸಂಬಂಧ ನಿಶ್ಚಯವಾಗಿದೆ. ಆದರೆ, ವರನ ಹೆಸರು ಹಾಗೂ ಇತರ ವಿವರಗಳನ್ನು ಅನುಶ್ರೀ ಈವರೆಗೆ ಸಾರ್ವಜನಿಕವಾಗಿ ಬಹಿರಂಗ ಪಡಿಸಿಲ್ಲ.

ಮದುವೆ ಕುರಿತು ಈ ಹಿಂದೆ ಹಲವು ಊಹಾಪೋಹಗಳು ಹರಿದಾಡುತ್ತಿದ್ದರೂ, ಅನುಶ್ರೀ ಎಲ್ಲವನ್ನೂ ನಗುತ್ತಾ ತಿರಸ್ಕರಿಸುತ್ತಿದ್ದರು. ಆದರೆ ಈಗ, ನಿಜಕ್ಕೂ ಕಾಲ ಕೂಡಿ ಬಂದಿದ್ದು, ಅವರ ಮದುವೆ ದಿನಾಂಕ ನಿಗದಿಯಾಗಿರುವ ಸುದ್ದಿಯು ಹರಿದಾಡುತ್ತಿದೆ. ಸರಳವಾಗಿ ಶಾಸ್ತ್ರೋಕ್ತ ವಿಧಾನದ ಮೂಲಕ ಮದುವೆ ನೆರವೇರಿಸಿ, ನಂತರ ಆಗಸ್ಟ್ 28ರಂದು ಬೆಂಗಳೂರು ನಗರದಲ್ಲಿ ಸಿನಿಮಾ ರಂಗದ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಹತ್ತಿರದವರಿಗಾಗಿ ಅದ್ಧೂರಿ ಆರತಕ್ಷತೆ ಆಯೋಜಿಸಲಾಗುವ ಸಾಧ್ಯತೆ ಇದೆ.‌

Edited By : Shivu K
PublicNext

PublicNext

18/07/2025 08:19 am

Cinque Terre

18.36 K

Cinque Terre

0