ಬೆಂಗಳೂರು: ಮೆಟಾ ಕನ್ನಡ ಅನುವಾದದಲ್ಲಿ ಲೋಪ ಕಂಡು ಬಂದಿರೋದಕ್ಕೆ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಖ್ಯಾತ ಹಿರಿಯ ನಟಿ ಬಿ ಸರೋಜಾ ದೇವಿ ನಿಧನರಾದ ಸುದ್ದಿಯನ್ನ ಮೆಟಾ ಕನ್ನಡದಲ್ಲಿ ಮಾಡಿದ ಸ್ವಯಂ ಅನುವಾದದಲ್ಲಿ ದೊಡ್ಡ ಲೋಪ ಕಂಡು ಬಂದಿತ್ತು. ಆ ಸುದ್ದಿಯ ನೈಜತೆಯ ಇಲ್ಲದಂತೆಯಾಗಿ ಟ್ರಾಲ್ ಪೇಜ್ ಗಳಿಗೆ ಆಹಾರವಾಗಿತ್ತು. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಮೂಲಕ ಮೆಟಾ ಸಂಸ್ಥೆಗೆ ಕನ್ನಡದ ಅನುವಾದ ಸರಿಪಡಿಸಿ ಎಂದು ದೂರು ನೀಡಿದ್ದಾರೆ. ಕನ್ನಡ ಅನುವಾದ ಸರಿಪಡಿಸುವ ತನಕ ಸ್ವಯಂ ಅನುವಾದ ನಿಲ್ಲಿಸಿದರೆ ಒಳ್ಳೆಯದು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕಚೇರಿಯಿಂದ ದೂರು ಬರುತ್ತಿದ್ದ ಹಾಗೇ ತಮ್ಮ ಲೋಪದ ಕುರಿತು ಮೆಟಾ ಸಂಸ್ಥೆ ಕ್ಷಮೆಯಾಚನೆ ಮಾಡಿದ ಎನ್ನಲಾಗಿದೆ. ಅಲ್ದೇ ಕನ್ನಡ ಸ್ವಯಂ ಅನುವಾದ ಸರಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
PublicNext
18/07/2025 08:20 am