", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/52563-1752990005-image-(33).png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಬ್ಯಾಂಕ್ ಗೆ ವಂಚಿಸಿ ತಲೆಮರೆಸಿಕೊಂಡಿದ್ದ ಮಹಿಳೆಯನ್ನ ಸುಮಾರು 20ವರ್ಷದ ಬಳಿಕ ಸಿಬಿಐ ಪೊಲೀಸ್ರು ಬಂಧಿಸಿದ್ದಾರೆ. ಮಣಿ ಸೇಖರ್ ಬಂಧಿತ ...Read more" } ", "keywords": "SBI scam, lady accused caught, CBI investigation, 20-year fugitive, Rs 8 crore fraud, bank scam", "url": "https://dashboard.publicnext.com/node" }
ಬೆಂಗಳೂರು: ಬ್ಯಾಂಕ್ ಗೆ ವಂಚಿಸಿ ತಲೆಮರೆಸಿಕೊಂಡಿದ್ದ ಮಹಿಳೆಯನ್ನ ಸುಮಾರು 20ವರ್ಷದ ಬಳಿಕ ಸಿಬಿಐ ಪೊಲೀಸ್ರು ಬಂಧಿಸಿದ್ದಾರೆ. ಮಣಿ ಸೇಖರ್ ಬಂಧಿತ ಮಹಿಳೆಯಾಗಿದ್ದು,ನಗರದ ಎಸ್ ಬಿಐ ಶಾಖೆಯೊಂದಕ್ಕೆ ಎಂಟು ಕೋಟಿ ವಂಚನೆ ಮಾಡಿ
ಮುತ್ತುರಾಮಲಿಂಗಂ ಸೇಖರ್ ಮತ್ತು ಪತ್ನಿ ಮಣಿ ಸೇಖರ್ ತಲೆ ಮರೆಸಿಕೊಂಡಿದ್ರು.
2002 -05 ರ ನಡುವೆ ನಡೆದಿದ್ದ ವಂಚನೆ ಪ್ರಕರಣ ಸಂಬಂಧಿಸಿದಂತೆ ಬೆಂಗಳೂರು ಸಿಬಿಐನಲ್ಲಿ 2006 ರಲ್ಲಿ ಎಫ್ ಐ ಆರ್ ದಾಖಲಾಗಿತ್ತು. ಕೇಸ್ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ದಂಪತಿ ಮೇಲೆ 2007 ರಲ್ಲಿ ಸಿಬಿಐ ಚಾರ್ಜ್ ಶೀಟ್ ಹಾಕಿತ್ತು. ಆರೋಪಿಗಳ ವಿರುದ್ಧ ನ್ಯಾಯಲಯ 2009 ರಲ್ಲಿ ಪ್ರೊಕ್ಲೊಮೇಷನ್ ಆದೇಶ ಹೊರಡಿಸಿತ್ತು. ಬಳಿಕ ಆರೋಪಿಗಳ ಸಿಬಿಐ ಮೇಲೆ ನಿಗಾ ಇಟ್ಟಿತ್ತು.
ಆರೋಪಿಗಳು ತಮ್ಮ ಗುರುತು ಸಿಗದಂತೆ ಕೆವೈಸಿ ಬದಲಿಸಿ ಕೃಷ್ಣ ಕುಮಾರ್ ಗುಪ್ತ ಹಾಗೂ ಗೀತಾ ಕೃಷ್ಣ ಕುಮಾರ್ ಗುಪ್ತ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ರಂತೆ. ಮೊಬೈಲ್ ನಂಬರ್, ಇಮೇಲ್, ಪಾನ್ ಎಲ್ಲವನ್ನೂ ಬದಲಿಸಿದ್ದ ದಂಪತಿ ಮಧ್ಯಪ್ರದೇಶದ ಇಂದೋರ್ ನಲ್ಲಿ ತಲೆಮರೆಸಿಕೊಂಡು ವಾಸ ಮಾಡ್ತಿದ್ರು.
ಸಿಬಿಐ ಅತ್ಯಾಧುನಿಕ ಇಮೇಜ್ ಸರ್ಚ್ ಅನಾಲಿಟಿಕ್ ಸಾಫ್ಟ್‌ವೇರ್ ಮೂಲಕ ಆರೊಪಿಗಳನ್ನ ಬಂಧಿಸಿದೆ. ಹಳೆ ಪ್ರಕರಣಗಳ ಆರೋಪಿಗಳ ಬಗ್ಗೆ ಸರ್ಚ್ ಮಾಡುವಾಗ ಸುಳಿವು ಪತ್ತೆಯಾಗಿದ್ದು ಹಳೇ ಇಮೇಜ್ ಇಟ್ಟುಕೊಂಡು ಶೋಧ ನಡೆಸಿದಾಗ ಮಹಿಳೆ ಇಂದೋರ್ ನಲ್ಲಿ ಪತ್ತೆಯಾಗಿದ್ದಾಳೆ. ಸದ್ಯ ಸಿಬಿಐ ಮಹಿಳೆಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದೆ.
ವಿಚಾರಣೆ ವೇಳೆ ಗಂಡ ಮುತ್ತು ರಾಮಲಿಂಗಂ ಸಾವಿನ ಕುರಿತು ಮಣಿ ವಿಚಾರ ತಿಳಿಸಿದ್ದಾಳೆ. ಎಂಟು ಕೋಟಿ ಬ್ಯಾಂಕ್ ಸಾಲ ಪಡೆದು ವಂಚಿಸಿದ್ದ ದಂಪತಿ ಪತ್ತೆಗೆ ಸಿಬಿಐ ತಲಾ 50 ಸಾವಿರ ಬಹುಮಾನ ಘೋಷಿಸಿತ್ತು.ಸದ್ಯ ಮಹಿಳೆಯನ್ನ ಬಂಧಿಸಿ ಸಿಬಿಐ ಜೈಲಿಗೆ ಕಳುಹಿಸಿದೆ.
PublicNext
20/07/2025 11:10 am