", "articleSection": "Crime,International,Viral", "image": { "@type": "ImageObject", "url": "https://prod.cdn.publicnext.com/s3fs-public/235762-1753098044-WhatsApp-Image-2025-07-21-at-4.49.41-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಲಂಡನ್: ಇಸ್ಕಾನ್ ಸಂಸ್ಥೆಯ ಗೋವಿಂದ ರೆಸ್ಟೋರಂಟ್‌ಗೆ ಏಕಾಏಕಿ ನುಗ್ಗಿದ ಯುವಕನೊಬ್ಬ ಅಲ್ಲಿನ ಸಿಬ್ಬಂದಿ ಎದುರಲ್ಲೇ ಚಿಕನ್ ಸವಿದಿದ್ದಾನೆ. ಇದರ ವ...Read more" } ", "keywords": "Iskcon restaurant controversy, chicken controversy in ISKCON, ISKCON restaurant incident, food controversy in temple, Bangalore restaurant controversy, non-vegetarian food in ISKCON", "url": "https://dashboard.publicnext.com/node" } VIDEO: ಇಸ್ಕಾನ್ ರೆಸ್ಟೋರಂಟ್‌ನಲ್ಲಿ ಚಿಕನ್ ತಿಂದ ಯುವಕ - ವ್ಯಾಪಕ ಆಕ್ರೋಶ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಇಸ್ಕಾನ್ ರೆಸ್ಟೋರಂಟ್‌ನಲ್ಲಿ ಚಿಕನ್ ತಿಂದ ಯುವಕ - ವ್ಯಾಪಕ ಆಕ್ರೋಶ

ಲಂಡನ್: ಇಸ್ಕಾನ್ ಸಂಸ್ಥೆಯ ಗೋವಿಂದ ರೆಸ್ಟೋರಂಟ್‌ಗೆ ಏಕಾಏಕಿ ನುಗ್ಗಿದ ಯುವಕನೊಬ್ಬ ಅಲ್ಲಿನ ಸಿಬ್ಬಂದಿ ಎದುರಲ್ಲೇ ಚಿಕನ್ ಸವಿದಿದ್ದಾನೆ. ಇದರ ವಿಡಿಯೋ ವೈರಲ್ ಆಗಿದ್ದು ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಮೊದಲು ರೆಸ್ಟೋರಂಟ್‌ಗೆ ಬಂದ ಆಫ್ರಿಕನ್-ಬ್ರಿಟಿಷ್ ಮೂಲದ ಯುವಕ ಅಲ್ಲಿನ ಸಿಬ್ಬಂದಿಗೆ ಚಿಕನ್ ಇದೆಯಾ ಎಂದು ಕೇಳಿದ್ದಾನೆ. ಆಗ ಅವರು ಇಲ್ಲಿ ಯಾವುದೇ ಮಾಂಸಾಹಾರ, ಬೆಳ್ಳುಳ್ಳಿ ಹಾಗೂ ಈರುಳ್ಳಿ ಪದಾರ್ಥ ಸಿಗೋದಿಲ್ಲ ಎಂದು ಉತ್ತರಿಸಿದ್ದಾರೆ. ಕೆಲಹೊತ್ತು ಆಚೆ ಹೋಗಿ ವಾಪಸ್ ಬಂದ ಯುವಕ ಕೂಡಲೇ ಕೆಎಫ್‌ಸಿ ಚಿಕನ್ ಬಾಕ್ಸ್ಅನ್ನು ತನ್ನ ಬ್ಯಾಗ್‌ನಿಂದ ತೆಗೆದು ಫುಡ್ ಕೌಂಟರ್ ಮುಂದೆಯೇ ತಿನ್ನಲಾರಂಭಿಸಿದ್ದಾನೆ. ಅಲ್ಲದೇ ಅಲ್ಲಿದ್ದ ಇತರ ಗ್ರಾಹಕರಿಗೆ ಚಿಕನ್ ಪೀಸ್ ಕೊಡಲು ಮುಂದಾಗಿದ್ದಾನೆ. ನಂತರ ಅಲ್ಲಿದ್ದ ಗ್ರಾಹಕರು ಆತನನ್ನು ಹೊರಹಾಕಿದ್ದಾರೆ.

ಈತ ಯುಟ್ಯೂಬರ್ ಆಗಿದ್ದು ಹೆಚ್ಚು ವೀಕ್ಷಣೆ ಪಡೆಯಲು ಹೀಗೆ ಮಾಡಿದ್ದಾನೆ ಎನ್ನಲಾಗಿದೆ. ಯಾವುದೇ ರೆಸ್ಟೋರೆಂಟ್‌ಗೆ ಹೊರಗಿನ ಆಹಾರವನ್ನು ತರುವುದನ್ನು ನಿಷೇಧಿಸಲಾಗಿದೆ. ಇಸ್ಕಾನ್‌ಗೆ ಮಾಂಸ ತರುವುದು ಕೇವಲ ಅಗೌರವವಲ್ಲ, ಬದಲಾಗಿ ನಾವು ಎತ್ತಿಹಿಡಿಯುವ ತತ್ವಗಳ ಮೇಲಿನ ದಾಳಿಯಾಗಿದೆ. ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಕ್ರಮ ಅಗತ್ಯ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

Edited By : Nagaraj Tulugeri
PublicNext

PublicNext

21/07/2025 05:11 pm

Cinque Terre

17.43 K

Cinque Terre

2