", "articleSection": "Government,Accident", "image": { "@type": "ImageObject", "url": "https://prod.cdn.publicnext.com/s3fs-public/387839-1753100036-WhatsApp-Image-2025-07-21-at-5.35.56-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಢಾಕಾ: ಬಾಂಗ್ಲಾದೇಶದ ವಾಯುಪಡೆಯ ಎಫ್-7 ಬಿಜಿಐ ತರಬೇತಿ ಜೆಟ್‌ ವಿಮಾನ ಪತನಗೊಂಡ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದ್ದು, ಪೈಲಟ್‌ ಸೇರಿದಂತೆ ಕನಿಷ...Read more" } ", "keywords": "Dhaka, F-7 BGI training jet crash, pilot killed, 19 fatalities, over 100 injured. ", "url": "https://dashboard.publicnext.com/node" } ಢಾಕಾ: F‑7 ಬಿಜಿಐ ತರಬೇತಿ ಜೆಟ್ ಪತನ - ಪೈಲಟ್ ಸೇರಿ 19 ಮಂದಿ ಸಾವು! 100ಕ್ಕೂ ಹೆಚ್ಚು ಜನರಿಗೆ ಗಾಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಢಾಕಾ: F‑7 ಬಿಜಿಐ ತರಬೇತಿ ಜೆಟ್ ಪತನ - ಪೈಲಟ್ ಸೇರಿ 19 ಮಂದಿ ಸಾವು! 100ಕ್ಕೂ ಹೆಚ್ಚು ಜನರಿಗೆ ಗಾಯ

ಢಾಕಾ: ಬಾಂಗ್ಲಾದೇಶದ ವಾಯುಪಡೆಯ ಎಫ್-7 ಬಿಜಿಐ ತರಬೇತಿ ಜೆಟ್‌ ವಿಮಾನ ಪತನಗೊಂಡ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದ್ದು, ಪೈಲಟ್‌ ಸೇರಿದಂತೆ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶೇಷ ಸಹಾಯಕ ಪ್ರೊಫೆಸರ್ ಎಂಡಿ ಸಯದುರ್ ರೆಹಮಾನ್ ಮಾತನಾಡಿ, ಬಾಂಗ್ಲಾದೇಶದ ವಾಯುಪಡೆಯ ಎಫ್-7 ಬಿಜಿಐ ತರಬೇತಿ ಜೆಟ್ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ಕಳೆದುಕೊಂಡು ಢಾಕಾದ ಉತ್ತರದಲ್ಲಿರುವ ಮೈಲ್‌ಸ್ಟೋನ್ ಶಿಕ್ಷಣ ಸಂಸ್ಥೆಯ ಕಟ್ಟಡಕ್ಕೆ ಅಪ್ಪಳಿಸಿದೆ. ಪರಿಣಾಮ ಪೈಲಟ್ ಸೇರಿ 19 ಜನ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಘಟನೆ ನಡೆದ ತಕ್ಷಣವೇ ಗಾಯಾಳುಗಳನ್ನು ಸಿಎಂಎಚ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರಿದಿದೆ" ಎಂದು ಅಗ್ನಿಶಾಮಕ ದಳದ ಕರ್ತವ್ಯಾಧಿಕಾರಿ ಲಿಮಾ ಖಾನ್ ಮಾಹಿತಿ ಕೊಟ್ಟಿದ್ದಾರೆ.

ಪತನಗೊಂಡ ಜೆಟ್ ಬಾಂಗ್ಲಾದೇಶದ ವಾಯುಪಡೆಗೆ ಸೇರಿದ ಎಫ್-7 ಬಿಜಿಐ ತರಬೇತಿ ವಿಮಾನ ಎಂದು ದೃಢಪಡಿಸಲಾಗಿದೆ.

ಘಟನಾ ಸ್ಥಳದಲ್ಲಿ ತಕ್ಷಣವೇ ಮೂರು ಅಗ್ನಿಶಾಮಕ ದಳದ ವಾಹನಗಳು ನಿಯೋಜನೆಯಾಗಿದ್ದು, ತೀವ್ರ ಭದ್ರತೆ ಹಾಗೂ ರಕ್ಷಣಾ ಕ್ರಮ ಜಾರಿಗೊಳಿಸಲಾಗಿದೆ.

Edited By : Abhishek Kamoji
PublicNext

PublicNext

21/07/2025 05:44 pm

Cinque Terre

67.41 K

Cinque Terre

0

ಸಂಬಂಧಿತ ಸುದ್ದಿ