ಕೇರಳ ಮೂಲದ ಅಥುಲ್ಯಾ ಶೇಖರ್ ಎಂಬ ಭಾರತೀಯ ಮಹಿಳೆ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾ ನಗರದ ಅಪಾರ್ಟ್‌ಮೆಂಟ್‌ನಲ್ಲಿ ತನ್ನ 30ನೇ ಹುಟ್ಟುಹಬ್ಬದಂದು ಶವವಾಗಿ ಪತ್ತೆಯಾಗಿರುವ ದುರ್ಘಟನೆ ಜುಲೈ 20 ಬೆಳಕಿಗೆ ಬಂದಿದೆ.
ಜುಲೈ 18 ಮತ್ತು 19ರ ನಡುವೆ ಪತಿ ಸತೀಶ್ ಅಥುಲ್ಯಾಳನ್ನ ಕತ್ತು ಹಿಸುಕಿದ ನಂತರ ಹೊಟ್ಟೆಗೆ ಒದ್ದಿದ್ದಾನೆ ಮತ್ತು ತಲೆಗೆ ತಟ್ಟೆಯನ್ನಿಂದ ಹೊಡೆದಿದ್ದಾನೆ. ಈ ಹಿಂಸಾತ್ಮಕ ಕ್ರಿಯೆಗಳ ಪರಿಣಾಮವಾಗಿ ಅಥುಲ್ಯಾ ಸಾವನ್ನಪ್ಪಿದ್ದಾಳೆ ಎಂದು ಮಹಿಳೆಯ ತಾಯಿ ಆರೋಪಿಸಿದ್ದಾರೆ.
ಈ ಕುರಿತು ಕೇರಳದ ಪೊಲೀಸರು ಸತೀಶ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಕೊಲೆ (IPC 302) ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
PublicNext
22/07/2025 09:41 am