ನವದೆಹಲಿ: ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ ದಿಢೀರನೇ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳಿಂದ ಅಂಗೀಕಾರವೂ ಆಗಿದೆ. ಈ ನಡುವೆ ಅವರ ಧನಕರ್ ರಾಜೀನಾಮೆ ಬಗ್ಗೆ ತುರುಸಿನ ಚರ್ಚೆಗಳು ಶುರುವಾಗಿದೆ. ದೆಹಲಿ ರಾಜಕಾರಣದಲ್ಲಿ ಈ ಬೆಳವಣಿಗೆ ಸಂಚಲನ ಮೂಡಿಸಿದೆ.
ಇನ್ನು ಇದೇ ವೇಳೆ ಕೇವಲ ಹತ್ತು ದಿನಗಳ ಹಿಂದೆ ಜಗದೀಪ್ ಧನಕರ್ ಮಾತನಾಡಿರುವ ಭಾಷಣದ ವಿಡಿಯೋ ತುಣುಕು ವೈರಲ್ ಆಗುತ್ತಿದೆ. ಜುಲೈ 10ರಂದು ನವದೆಹಲಿಯ ಜೆಎನ್‌ಯು ಆವರಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ನಾನು ಅವಧಿ ಪೂರ್ಣಗೊಳಿಸಿದ ನಂತರವಷ್ಟೇ ಅಂದರೆ 2027ಕ್ಕೆ ನಿವೃತ್ತಿ ಆಗಲಿದ್ದೇನೆ' ಎಂದಿದ್ದರು. ಈ ಮಾತು ಹೇಳಿ ಕೇವಲ 11 ದಿನಗಳ ಅಂತರದಲ್ಲಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
PublicNext
22/07/2025 07:31 pm