", "articleSection": "Politics,Business,Government,International", "image": { "@type": "ImageObject", "url": "https://prod.cdn.publicnext.com/s3fs-public/387839-1753407868-Untitled-design---2025-07-25T071826.025.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಲಂಡನ್‌: ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ಸಹಿ ಹಾಕಿವೆ. ಈ ಒಪ್ಪಂದದಿಂದ ಎರಡು ದೇಶಗಳ ನಡುವೆ ವ...Read more" } ", "keywords": "India-UK FTA, trade agreement, consumer benefits, export opportunities, economic ties, trade pact, bilateral trade, market access, tariff reduction. ", "url": "https://dashboard.publicnext.com/node" } ಭಾರತ-ಯುಕೆ ಎಫ್‌ಟಿಎ ಒಪ್ಪಂದದಿಂದ ಗ್ರಾಹಕರಿಗೆ ಲಾಭ, ರಫ್ತುಗಾರರಿಗೆ ಅವಕಾಶ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ-ಯುಕೆ ಎಫ್‌ಟಿಎ ಒಪ್ಪಂದದಿಂದ ಗ್ರಾಹಕರಿಗೆ ಲಾಭ, ರಫ್ತುಗಾರರಿಗೆ ಅವಕಾಶ

ಲಂಡನ್‌: ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ಸಹಿ ಹಾಕಿವೆ. ಈ ಒಪ್ಪಂದದಿಂದ ಎರಡು ದೇಶಗಳ ನಡುವೆ ವಾರ್ಷಿಕವಾಗಿ ಸುಮಾರು 34 ಶತಕೋಟಿ ಡಾಲರ್‌ ಮೌಲ್ಯದ ದ್ವಿಪಕ್ಷೀಯ ವ್ಯಾಪಾರ ಹೆಚ್ಚಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ಸಮ್ಮುಖದಲ್ಲಿ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಯಿತು. ವಿಶ್ವದ ಅತಿದೊಡ್ಡ ಜನಸಂಖ್ಯೆಯ ಮಾರುಕಟ್ಟೆ ಹೊಂದಿರುವ ಭಾರತದೊಂದಿಗೆ ಯುಕೆ ಒಪ್ಪಂದಕ್ಕೆ ಸಹಿ ಹಾಕಿರುವುದು, ಅಮೆರಿಕ ಸುಂಕದ ಬೆದರಿಕೆ ಹಾಕುತ್ತಿರುವ ಸಮಯದಲ್ಲೇ ಯುಕೆ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿರುವುದು ಮಹತ್ವ ಪಡೆದಿದೆ.

ಒಪ್ಪಂದದ ಅನ್ವಯವಾಗಿ, ಭಾರತದ ಜವಳಿ, ಜೆನೆರಿಕ್ ಔಷಧಗಳು, ವೈದ್ಯಕೀಯ ಸಾಧನಗಳು, ಚರ್ಮದ ಸರಕುಗಳು, ಕೃಷಿ ಮತ್ತು ರಾಸಾಯನಿಕ ಉತ್ಪನ್ನಗಳು ಸೇರಿದಂತೆ 99% ವಸ್ತುಗಳ ಮೇಲಿನ ಯುಕೆಯ ಸುಂಕವನ್ನು ಶೂನ್ಯಕ್ಕೆ ಇಳಿಸಲು ನಿರ್ಧರಿಸಲಾಗಿದೆ.

ಭಾರತ ತನ್ನದಾದ ಸುಂಕಗಳಲ್ಲಿ 90% ರಷ್ಟು ಕಡಿತಗೊಳಿಸಲಿದ್ದು, ಯುಕೆ ಉತ್ಪನ್ನಗಳ ಮೇಲಿನ ಸರಾಸರಿ ಸುಂಕವು 15% ಇಂದ 3% ಕ್ಕೆ ಇಳಿಯಲಿದೆ. ಬ್ರಿಟಿಷ್ ಸ್ಕಾಚ್ ವಿಸ್ಕಿ, ಕಾರುಗಳು ಹಾಗೂ ಕೆಲ ಆಹಾರ ಪದಾರ್ಥಗಳ ಆಮದು ಸುಂಕವನ್ನು ಭಾರತ ಕಡಿತಗೊಳಿಸಲಿದೆ. ವಿಶೇಷವಾಗಿ, ವಿಸ್ಕಿಯ ಮೇಲಿನ ಸುಂಕವನ್ನು 150% ಇಂದ 75% ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಮೇಲಿನ ಸುಂಕವನ್ನು 110% ಇಂದ 10% ಕ್ಕೆ ಇಳಿಸುವ ತೀರ್ಮಾನವೂ ತೆಗೆದುಕೊಳ್ಳಲಾಗಿದೆ.

ಮುಂದಿನ ಎರಡು ವರ್ಷಗಳಲ್ಲಿ ಭಾರತೀಯ ಚರ್ಮೋದ್ಯಮ ಯುಕೆಯಲ್ಲಿ 5% ಹೆಚ್ಚುವರಿ ಮಾರುಕಟ್ಟೆ ಪಾಲು ಪಡೆಯುವ ನಿರೀಕ್ಷೆಯಿದೆ. ಹಾಗೆಯೇ, 2030ರ ವೇಳೆಗೆ ಎಲೆಕ್ಟ್ರಾನಿಕ್ಸ್ ಹಾಗೂ ಎಂಜಿನಿಯರಿಂಗ್ ವಲಯದ ರಫ್ತುಗಳು ದ್ವಿಗುಣಗೊಳ್ಳುವ ಸಾಧ್ಯತೆಯಿದೆ.

ಮುಂದಿನ ಹಣಕಾಸು ವರ್ಷದಲ್ಲಿ ರಾಸಾಯನಿಕ ಉತ್ಪನ್ನಗಳ ರಫ್ತು 30% ರಿಂದ 40% ವರೆಗೆ ಹೆಚ್ಚಾಗಬಹುದೆಂದು ತಜ್ಞರು ಅಂದಾಜಿಸಿದ್ದಾರೆ. ಪ್ರಸ್ತುತ 941 ಮಿಲಿಯನ್ ಡಾಲರ್ ಮೌಲ್ಯದ ರತ್ನ ಮತ್ತು ಆಭರಣ ರಫ್ತು, ಮುಂದಿನ ಮೂರೂ ವರ್ಷಗಳಲ್ಲಿ ದ್ವಿಗುಣವಾಗಲಿದೆ ಎಂಬ ನಿರೀಕ್ಷೆ ಇದೆ.

ವ್ಯಾಪಾರ ಒಪ್ಪಂದ ಜಾರಿಗೆ ಬರುವತ್ತ ಸಾಫ್ಟ್‌ವೇರ್ ಸೇವೆಗಳ ರಫ್ತು ವಾರ್ಷಿಕವಾಗಿ ಸುಮಾರು 20% ಹೆಚ್ಚಾಗಲಿದೆ. ಇದರಿಂದ ಗ್ರಾಹಕರಿಗೆ ಉತ್ಪನ್ನಗಳ ಬೆಲೆಯು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಬ್ರಿಟಿಷ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Edited By : Abhishek Kamoji
PublicNext

PublicNext

25/07/2025 07:14 am

Cinque Terre

26.57 K

Cinque Terre

0

ಸಂಬಂಧಿತ ಸುದ್ದಿ