", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/52563-1753496756-WhatsApp-Image-2025-07-26-at-7.53.41-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ : ‘ಪ್ರಧಾನಿ ನರೇಂದ್ರ ಮೋದಿಯವರದ್ದು ಬರೀ ಪ್ರದರ್ಶನ, ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ’ ಎಂದು ಲೋಕಸಭೆಯ ವಿರೋಧ ಪಕ್...Read more" } ", "keywords": "Rahul Gandhi statement, Narendra Modi criticism, Indian politics news, Opposition leader Rahul Gandhi, BJP Congress rivalry, PM Modi controversy", "url": "https://dashboard.publicnext.com/node" } ಪ್ರಧಾನಿಯದ್ದು ಕೇವಲ ಶೋಕಿ... ‘ನರೇಂದ್ರ ಮೋದಿ ದೊಡ್ಡ ಸಮಸ್ಯೆಯಲ್ಲ’.. ರಾಹುಲ್‌ ಗಾಂಧಿ ವಾಗ್ದಾಳಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿಯದ್ದು ಕೇವಲ ಶೋಕಿ... ‘ನರೇಂದ್ರ ಮೋದಿ ದೊಡ್ಡ ಸಮಸ್ಯೆಯಲ್ಲ’.. ರಾಹುಲ್‌ ಗಾಂಧಿ ವಾಗ್ದಾಳಿ

ನವದೆಹಲಿ : ‘ಪ್ರಧಾನಿ ನರೇಂದ್ರ ಮೋದಿಯವರದ್ದು ಬರೀ ಪ್ರದರ್ಶನ, ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿ ಕಾರಿದ್ದಾರೆ. ದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ಅವರು ಕೇವಲ ಒಂದು ದೊಡ್ಡ ಪ್ರದರ್ಶನ, ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ" ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯವರನ್ನು ಎರಡು ಮೂರು ಬಾರಿ ಭೇಟಿಯಾಗಿ "ಅವರೊಂದಿಗೆ ಒಂದೇ ಕೋಣೆಯಲ್ಲಿ ಕುಳಿತು ಅವರನ್ನು ಗಮನಿಸಿದ್ದೇನೆ ಹೀಗಾಗಿ ತನಗೆ ಈ ಕುರಿತು ಸಂಪೂರ್ಣವಾಗಿ ತಿಳಿದಿದೆ ಎಂದು ರಾಹುಲ್‌ ಹೇಳಿದ್ದಾರೆ.

ಪ್ರಧಾನಿ ಮೋದಿ ಬಗ್ಗೆ ಯಾವುದೇ ಗಾಳಿ ಸುದ್ದಿ ಇಲ್ಲ. ಮಾಧ್ಯಮಗಳು ಅವರನ್ನು ಮಿತಿ ಮೀರಿ ತೋರಿಸುತ್ತವೆ. "ದಲಿತರು, ಹಿಂದುಳಿದ ವರ್ಗಗಳು, ಬುಡಕಟ್ಟು ಜನಾಂಗದವರು ಮತ್ತು ಅಲ್ಪಸಂಖ್ಯಾತರು ಒಟ್ಟಾಗಿ ದೇಶದ ಜನಸಂಖ್ಯೆಯ ಸುಮಾರು 90% ರಷ್ಟಿದ್ದಾರೆ. ಆದರೆ ಬಜೆಟ್ ಸಿದ್ಧಪಡಿಸಿದ ನಂತರ ಹಲ್ವಾ ವಿತರಿಸುವಾಗ, ಈ 90% ಜನರನ್ನು ಪ್ರತಿನಿಧಿಸುವ ಯಾರೂ ಇರಲಿಲ್ಲ. ಈ 90% ಜನಸಂಖ್ಯೆಯೇ ದೇಶದ ಉತ್ಪಾದಕ ಶಕ್ತಿಯಾಗಿದೆ ಎಂದು ರಾಹುಲ್‌ ಹೇಳಿದ್ದಾರೆ.

‘ಹಲ್ವಾ ತಯಾರಿಸುವವರು ನೀವೇ, ಅದನ್ನು ತಿನ್ನುವವರು ಅವರೇ. ಅವರು ಹಲ್ವಾ ತಿನ್ನಬಾರದು ಎಂದು ನಾವು ಹೇಳುತ್ತಿಲ್ಲ, ಆದರೆ ಕನಿಷ್ಠ ಪಕ್ಷ ಎಲ್ಲರೂ ಹಂಚಿಕೊಂಡು ತಿನ್ನಬೇಕು’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.

2004 ರಲ್ಲಿ ಯುಪಿಎ -1 ಆಡಳಿತದ ಅವಧಿಯಲ್ಲಿ ರಾಜಕೀಯಕ್ಕೆ ಸೇರಿದಾಗಿನಿಂದ ನಾನು ಒಬಿಸಿಯವರನ್ನು ಮೇಲೆತ್ತಲು ಪ್ರಯತ್ನಿಸಿದೆ. ಆದರೆ ಅದು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ನಿಮ್ಮ (ಒಬಿಸಿ) ಇತಿಹಾಸದ ಬಗ್ಗೆ, ನಿಮ್ಮ ಸಮಸ್ಯೆಗಳ ಬಗ್ಗೆ, ಇನ್ನೂ ಸ್ವಲ್ಪ ಹೆಚ್ಚು ತಿಳಿದಿದ್ದರೆ, ಆ ಸಮಯದಲ್ಲಿ ನಾನು ಜಾತಿ ಜನಗಣತಿಯನ್ನು ನಡೆಸುತ್ತಿದ್ದೆ. ಅದಕ್ಕೆ ಈಗಲೂ ಕ್ಷಮೆ ಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.

Edited By : Nirmala Aralikatti
PublicNext

PublicNext

26/07/2025 08:04 am

Cinque Terre

29.93 K

Cinque Terre

14

ಸಂಬಂಧಿತ ಸುದ್ದಿ