ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಕರ್ನಾಟಕದಲ್ಲಿ ಮತಗಳ್ಳತನ ಆಗಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ನನ್ನ ಸಮ್ಮತಿ ಇದೆ ಎಂದ ಡಿಕೆ ಸುರೇಶ್

ಬೆಂಗಳೂರು : ಕರ್ನಾಟಕದಲ್ಲಿ ಮತಗಳ್ಳತನ ಬಗ್ಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಹೇಳಿಕೆ ಬೆನ್ನಲ್ಲೇ ರಾಜ್ಯದ ಕಾಂಗ್ರೆಸ್ ನಾಯಕರು ಇದೀಗ ಧ್ವನಿಗೂಡಿಸುತ್ತಿದ್ದಾರೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಹ ರಾಜ್ಯದಲ್ಲಿ ಮತಗಳ್ಳತನ ಆಗಿತ್ತು ಎಂಬ ಅನುಮಾನ ವ್ಯಕ್ತಪಡಿಸಿದ್ರು ಡಿಕೆ ಶಿವಕುಮಾರ್ ಅಂತೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೇ ನಡೆದಿದೆ ಎಂದು ಹೇಳಿದ್ದರು.

ಇದಕ್ಕೆ ಈಗ ಧ್ವನಿಗೂಡಿಸಿರುವ ಮಾಜಿ ಸಂಸದ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್, ರಾಹುಲ್ ಹೇಳಿಕೆಗೆ ನನ್ನ ಸಮ್ಮತಿ ಇದೆ,ಓಟರ್ ಲಿಸ್ಟ್ ನಲ್ಲಿ ಸಾಕಷ್ಟು ಗೊಂದಲ ಇರುವುದನ್ನು ನೋಡಿದ್ದೇವೆ,ಮತಪಟ್ಟಿ ಸಂಖ್ಯೆ ಏರಿಸಿದ್ದು ಡಿಲೀಟ್ ಮಾಡಿದ್ದು ನೋಡಿದ್ದೇವೆ, ರಾಹುಲ್ ಗಾಂಧಿ, ಸಿಎಂ ಡಿಸಿಎಂ ಅವರವರ ಅನಿಸಿಕೆ ಹೇಳಿದ್ದಾರೆ. ಅವರ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ ಎಂದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಆಗಿದ್ಯಾ ಎಂಬ ಪ್ರಶ್ನೆಗೆ ಅವರೇ ಹೇಳಿದ್ದರಿಂದ ನಾನು ಹೆಚ್ಚಿಗೆ ಹೇಳುವುದಿಲ್ಲ ಎಂದರು.

Edited By :
PublicNext

PublicNext

26/07/2025 04:46 pm

Cinque Terre

15.18 K

Cinque Terre

2

ಸಂಬಂಧಿತ ಸುದ್ದಿ