", "articleSection": "Politics,Infrastructure,Government,Agriculture", "image": { "@type": "ImageObject", "url": "https://prod.cdn.publicnext.com/s3fs-public/229640-1753582305-bng5.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ರಸ ಗೊಬ್ಬರ ಕೊರತೆಗೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಈ ಸಂಬಂಧ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ...Read more" } ", "keywords": "Bengaluru, fertilizer shortage, state government negligence, BJP leader Vijayendra, agriculture issues, Karnataka government.", "url": "https://dashboard.publicnext.com/node" } ಬೆಂಗಳೂರು : ರಸಗೊಬ್ಬರ ಕೊರತೆಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಕಾರಣ - ವಿಜಯೇಂದ್ರ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ರಸಗೊಬ್ಬರ ಕೊರತೆಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಕಾರಣ - ವಿಜಯೇಂದ್ರ

ಬೆಂಗಳೂರು : ರಸ ಗೊಬ್ಬರ ಕೊರತೆಗೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಈ ಸಂಬಂಧ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ರಸ ಗೊಬ್ಬರ ಕೊರತೆಯ ಬಗ್ಗೆ ಕೇಂದ್ರ ಸಚಿವರಿಗೂ ಪತ್ರ ಬರೆದಿದ್ದೇವೆ. ಈ ಬಾರಿ ಮುಂಗಾರು ಬೇಗನೇ ಆರಂಭವಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇಷ್ಟಿದ್ದರೂ ಕೃಷಿ ಇಲಾಖೆ ಯಾವುದೇ ಪೂರ್ವಸಿದ್ಧತೆ ಮಾಡಿಲ್ಲ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ರೈತರು ಇವತ್ತು ಬೀದಿಗಿಳಿದು ಹೋರಾಟ ಮಾಡ್ತಿದ್ದಾರೆ. ಮುಖ್ಯಮಂತ್ರಿ ಗಳು ಕೊರತೆ ಇದೆ ಎಂದು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸ್ತಿದ್ದಾರೆ. ಆದ್ರೆ ಜುಲೈ ಅಂತ್ಯಕ್ಕೆ 8 ಲಕ್ಷದ 73 ಸಾವಿರ ಮೆಟ್ರಿಕ್ ಟನ್ ನಷ್ಟು ರಸ ಗೊಬ್ಬರ ರಾಜ್ಯಕ್ಕೆ ಬಂದಿದೆ. ನಮ್ಮ ನಿರೀಕ್ಷೆ ಇದ್ದಿದ್ದು ಆರು ಲಕ್ಷದ 31 ಸಾವಿರ ಮೆಟ್ರಿಕ್ ಟನ್, ಸರ್ಕಾರದ ಅಪೇಕ್ಷೆಗೂ ಮೀರಿ ಹೆಚ್ಚು ರಾಜ್ಯಕ್ಕೆ ರಸಗೊಬ್ಬರ ಬಂದಿದೆ. ಬೇಡಿಕೆ ಹೆಚ್ಚಿದೆಯೋ ಅಲ್ಲಿ ರಸಗೊಬ್ಬರ ಸ್ಟಾಕ್ ಇಟ್ಟುಕೊಳ್ಳದೇ ರೈತರಲ್ಲಿ ರಾಜ್ಯ ಸರ್ಕಾರ ಆತಂಕವನ್ನು ಮಾಡಿದ್ದಾರೆ. ಇದು ರಾಜ್ಯ ಸರ್ಕಾರದ ವೈಫಲ್ಯ, ಕೃಷಿ ಸಚಿವರ ವೈಫಲ್ಯ. ಇವರ ವೈಫಲ್ಯ ವನ್ನು ಮುಚ್ಚಿ ಕೊಳ್ಳಲು ಕೇಂದ್ರದ ಮೇಲೆ ಆರೋಪ ಮಾಡ್ತಿದ್ದಾರೆ ಎಂದರು.

ರಾಜ್ಯ ಸರ್ಕಾರದ ನಿರ್ಲಕ್ಷ್ಯ ವನ್ನು ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡುತ್ತದೆ, ಕೃಷಿ ಸಚಿವರು ಇದರ ಬಗ್ಗೆ ಎಚ್ಚರ ವಹಿಸಿ, ರೈತರಿಗೆ ರಸ ಗೊಬ್ಬರ ಒದಗಿಸಬೇಕು ರಸ ಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ದುಪ್ಪಟ್ಟು ದರದಲ್ಲಿ ಕಳ್ಳದಂಧೆ ಕೂಡ ನಡೀತ್ತಿದೆ. ಎಲ್ಲಿ ಕಾಂಗ್ರೆಸ್ ಸರ್ಕಾರ ಇರುತ್ತದೋ ಅಲ್ಲಿ ದಲ್ಲಾಳಿ ಗಳ ಕಾಟ ಇದ್ದೇ ಇರುತ್ತದೆ, ರಾಜ್ಯ ಸರ್ಕಾರದ ಪೂರ್ವ ತಯಾರಿ ಇಲ್ಲದ ಕಾರಣ ಎಲ್ಲ ಕಡೆ ಕಳ್ಳದಂಧೆ ನಡೀತಿದೆ ಎಂದು ಆರೋಪಿಸಿದರು.

Edited By : Manjunath H D
PublicNext

PublicNext

27/07/2025 07:46 am

Cinque Terre

42.83 K

Cinque Terre

1

ಸಂಬಂಧಿತ ಸುದ್ದಿ