ಬೆಂಗಳೂರು : ನಾಲ್ವಡಿ ಕೃಷ್ಣರಾಜ ಒಡೆಯರ್ ಗಿಂತ ಸಿದ್ದರಾಮಯ್ಯ ಕೊಡುಗೆ ಅಪಾರ ಅನ್ನೋ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಆರ್.ಅಶೋಕ್ ಕಿಡಿ ಕಾರಿದ್ದಾರೆ. ಒಡೆಯರ್ ಅಂತ ಪುಣ್ಯಾತ್ಮರಿಗೆ ತುಲನೆ ಮಾಡಿದ್ದು ಸರಿಯಲ್ಲ ಎಂದು ಕಿಡಿ ಕಾರಿದರು. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯತೀಂದ್ರ ಸಿದ್ದರಾಮಯ್ಯ ಅವರ ತಂದೆ ಮೇಲೆ ಇರುವ ದುರಾಭಿಮಾನ ದಿಂದ ಈ ರೀತಿ ಹೇಳಿದ್ದಾರೆ.
ಒಡೆಯರ್ ರಾಜ್ಯಕ್ಕೆ ಮೈಸೂರು ಭಾಗಕ್ಕೆ ಏನು ಕಾಣಿಕೆ ಎಂಬುದನ್ನ ಮೊದಲು ತಿಳಿದುಕೊಳ್ಳಲಿ , ಮೂಡಾ ಸೈಟ್ ನಂಗೆ ಬೇಕು ಎಂದ ಸಿದ್ದರಾಮಯ್ಯನವರನ್ನ ಚಿನ್ನ ಅಡವಿಟ್ಟು ಕೆಆರ್ ಎಸ್ ಕಟ್ಟಿದ ಒಡೆಯರ್ ಅವರಿಗೆ ಹೋಲಿಕೆ ಮಾಡ್ತಾರಲ್ಲ ಇದು ಹಾಸ್ಯಾಸ್ಪದ. ಸದ್ಯಕ್ಕೆ ಮಹಾತ್ಮ ಗಾಂಧಿಯನ್ನ ಹೋಲಿಕೆ ಮಾಡಲಿಲ್ಲ ಅಲ್ವಾ ನನ್ನ ಪುಣ್ಯ ಎಂದು ಟೀಕಿಸಿದರು.
ಯತೀಂದ್ರ ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ಕೊಟ್ಟು ಒಡೆಯರ್ ಕುಟುಂಬ ಮತ್ತು ಮೈಸೂರು ಭಾಗದ ಜನರಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಯತಿಂದ್ರ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
PublicNext
27/07/2025 10:28 am