", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/474798-1753711596-dham-beku.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ರಸಗೊಬ್ಬರ ಕೊರತೆ ವಿಚಾರವಾಗಿ ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ವಿಚಾರಕ್ಕೆ ಸಚಿವ ಚಲುವರಾಯಸ್ವಾಮಿ ಕಿಡಿ ಕಾರಿದ್ದಾರ...Read more" } ", "keywords": "Fertilizer shortage, Karnataka BJP, Chaluvadi Narayanaswamy, Congress Karnataka, BJP criticism, farmers' issue Karnataka, agricultural crisis.", "url": "https://dashboard.publicnext.com/node" } ಬೆಂಗಳೂರು : ರಸಗೊಬ್ಬರ ಕೊರತೆ ವಿಚಾರ - ಬಿಜೆಪಿಯವರಿಗೆ ಕೇಂದ್ರಕ್ಕೆ ಹೋಗಿ ‌ಹೇಳೋ ದಮ್ ಇಲ್ಲ - ಚಲುವರಾಯಸ್ವಾಮಿ ಕಿಡಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ರಸಗೊಬ್ಬರ ಕೊರತೆ ವಿಚಾರ - ಬಿಜೆಪಿಯವರಿಗೆ ಕೇಂದ್ರಕ್ಕೆ ಹೋಗಿ ‌ಹೇಳೋ ದಮ್ ಇಲ್ಲ - ಚಲುವರಾಯಸ್ವಾಮಿ ಕಿಡಿ

ಬೆಂಗಳೂರು : ರಸಗೊಬ್ಬರ ಕೊರತೆ ವಿಚಾರವಾಗಿ ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ವಿಚಾರಕ್ಕೆ ಸಚಿವ ಚಲುವರಾಯಸ್ವಾಮಿ ಕಿಡಿ ಕಾರಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಹಳ ಸ್ಪಷ್ಟವಾಗಿ ಎಲ್ಲೆಲ್ಲಿ ಯೂರಿಯಾ ಸರಬರಾಜು ಆಗಿದೆ ಎಂದು ಹೇಳಿದ್ದೇನೆ, ಡಿಸಿ, ಸೆಕ್ರೆಟರಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ ಆದ್ರೆ ಬಿಜೆಪಿಗೆ ಬೇರೆ ವಿಷಯ ಇಲ್ಲ, ಕೇಂದ್ರಕ್ಕೆ ಹೋಗಿ ‌ಹೇಳೋ ದಮ್ ಇಲ್ಲ ಎಂದು ಕಿಡಿ ಕಾರಿದರು.

ನಾನು ‌ಎಲ್ಲ ಎಂಪಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ, ಕೇಂದ್ರ ಮಂತ್ರಿಗಳಿಗೆ ನಾನು ಪತ್ರ ಬರೆದಿದ್ದೇನೆ,ಸಿಎಂ ಅವರು ಕೂಡ ಪತ್ರ ಬರೆದಿದ್ದಾರೆ, ಇನ್ನೂ ಏನು ಮಾಡಬೇಕೆಂತೆ ವಿಜಯೇಂದ್ರಗೆ, ಅಶೋಕ್‌ಗೆ ? ಕೇಂದ್ರವೇ ನಮಗೆ ಯೂರಿಯಾ ಒದಗಿಸುತ್ತದೆ

ಹೀಗಾಗಿ ನಾವು ಇದರಲ್ಲಿ ರಾಜಕೀಯ ಮಾಡಲು ಹೋಗಿರಲಿಲ್ಲ ಇವರು ರಾಜಕೀಯವಾಗಿ ಅವರು ಮಾತಾಡಿದ್ರೆ ನಾವೇನು ಮಾಡೋಕೆ ಆಗಲ್ಲ ಎಂದು.

ರಾಜ್ಯದಲ್ಲಿರುವ ಕೇಂದ್ರದ ಒಬ್ಬ ಮಂತ್ರಿಯಾದ್ರೂ ಪತ್ರ ಬರೆಯುವ ದಮ್ ಇದ್ಯಾ ಎಂದು ಪ್ರಶ್ನಿಸಿದರು.

ರಾಜ್ಯದ ರೈತರಿಗೆ ರಸಗೊಬ್ಬರ ಕೊಡುತ್ತಿದ್ದೇವೆ, ಕೊಪ್ಪಳದಲ್ಲಿಯ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆಗೆ ಮಾತಾಡಿದ್ದೇನೆ, ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ ಆದ್ರೆ ಈ ಬಿಜೆಪಿಯವರು ರೈತರ ಸಮಸ್ಯೆಗಳ ಮೇಲೆಯೂ ರಾಜಕಾರಣ ಮಾಡ್ತಿದ್ದಾರೆ ಇದಕ್ಕೆ ಏನೂ ಮಾಡಲು ಆಗಲ್ಲ,‌ ರೈತರ ಪರ ನಾವು ಇದ್ದೆವೆ,ಕೇಂದ್ರದಿಂದ ಬರಬೇಕಾದ ಬಾಕಿ ಯೂರಿಯಾ ಬರಲು ಎಲ್ಲ ಪ್ರಯತ್ನ ಮಾಡ್ತಿದ್ದೇವೆ. ಬಿಜೆಪಿಯವರಿಗೆ ದಮ್ ತಾಕತ್ ಇದ್ರೆ ಕೇಂದ್ರದ ಮೇಲೆ ಒತ್ತಡ ಹಾಕಲಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Edited By :
PublicNext

PublicNext

28/07/2025 07:38 pm

Cinque Terre

26.32 K

Cinque Terre

0

ಸಂಬಂಧಿತ ಸುದ್ದಿ