", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/387839-1753717012-Untitled-design---2025-07-28T211059.255.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ ಬೆನ್ನಲ್ಲೇ, ಮಾಜಿ ಸಿಎಂ ಬಿ.ಎಸ್ ಯಡ...Read more" } ", "keywords": "Yeshwantpur candidate, Rudresh, BSY announcement, coalition rift, BJP candidate, ST Somashekhar, Karnataka politics, alliance turmoil, election news ", "url": "https://dashboard.publicnext.com/node" } ಯಶವಂತಪುರ ಅಭ್ಯರ್ಥಿಯಾಗಿ ರುದ್ರೇಶ್ ಹೆಸರು ಪ್ರಕಟ! BSY ಘೋಷಣೆಯಿಂದ ಮೈತ್ರಿಕೂಟದಲ್ಲಿ ಕಲಹ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಶವಂತಪುರ ಅಭ್ಯರ್ಥಿಯಾಗಿ ರುದ್ರೇಶ್ ಹೆಸರು ಪ್ರಕಟ! BSY ಘೋಷಣೆಯಿಂದ ಮೈತ್ರಿಕೂಟದಲ್ಲಿ ಕಲಹ!

ಬೆಂಗಳೂರು : ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ ಬೆನ್ನಲ್ಲೇ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮುಂದಿನ ಚುನಾವಣೆಗೆ ಯಶವಂತಪುರ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ. ರುದ್ರೇಶ್ ಅವರ ಹೆಸರನ್ನು ಘೋಷಿಸಿದ್ದಾರೆ.

ವಿಧಾನಸಭಾ ಚುನಾವಣೆಗೆ ಇನ್ನೂ 23 ತಿಂಗಳು ಬಾಕಿ ಇರುವುದರಿಂದ, ಬಿಎಸ್‌ವೈ ಅವರ ಈ ಘೋಷಣೆ ಮೈತ್ರಿಕೂಟದ ಜೆಡಿಎಸ್ ಪಕ್ಷದ ಅಸಮಾಧಾನಕ್ಕೆ ಕಾರಣವಾಗಿದ್ದು, ಗೊಂದಲದ ರಾಜಕೀಯ ಪರಿಸ್ಥಿತಿಗೆ ಇನ್ನು ಪೂರಕವಾಗಿದೆ.

ನಗರದ ಹೊರವಲಯದಲ್ಲಿರುವ ಎಂ. ರುದ್ರೇಶ್ ಅವರ ನಿವಾಸದಲ್ಲಿ ಅವರ ಹುಟ್ಟುಹಬ್ಬದ ಸಂದರ್ಭ ಮಾತನಾಡಿದ ಯಡಿಯೂರಪ್ಪ, "ರುದ್ರೇಶ್ ನಿಸ್ವಾರ್ಥ ಸೇವೆಗನುಸಾರ ಸಮಾಜಮುಖಿ ಕೆಲಸ ಮಾಡಿದ್ದಾರೆ. ಅವರಿಗೆ ಯಶವಂತಪುರ ಟಿಕೆಟ್ ನೀಡಬೇಕು. ಅವರ ಆಯ್ಕೆಯನ್ನು ಯಾರೂ ತಡೆಯಲಾಗದು ಎಂದು ಘೋಷಿಸಿದರು. ಈ ಹೇಳಿಕೆಗೆ ಜೆಡಿಎಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣ ಗಂಭೀರ ರೂಪ ಪಡೆಯುತ್ತಿದ್ದಂತೆಯೇ, ಯಡಿಯೂರಪ್ಪನವರ ಪುತ್ರ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟನೆ ನೀಡಿದರು. "ಯಾರು ಅಭ್ಯರ್ಥಿಯಾಗಬೇಕು ಎಂಬ ನಿರ್ಧಾರ ರಾಜ್ಯ ಕೋರ್‌ ಕಮಿಟಿ ಮತ್ತು ರಾಷ್ಟ್ರೀಯ ನಾಯಕರಿಂದ ಆಗುತ್ತದೆ. ಯಶವಂತಪುರ ಮಾತ್ರವಲ್ಲ, ಶಿಕಾರಿಪುರ ಕೂಡ ಸಹ ಎಂದು ಹೇಳಿದರು. ಯಡಿಯೂರಪ್ಪನವರು ಅಭಿಮಾನದಿಂದ ಹೇಳಿದ್ದಿರಬಹುದು ಎಂದೂ ಅವರು ಹೇಳಿದರು.

ಈ ಕುರಿತು ಎಂ. ರುದ್ರೇಶ್ ಪ್ರತಿಕ್ರಿಯೆ ನೀಡುತ್ತಾ, "ಯಡಿಯೂರಪ್ಪನವರ ಪ್ರೀತಿಯಿಂದಾಗಿ ಅವರು ಈ ಮಾತು ಹೇಳಿದ್ದಾರೆ. ನಾನು ಸಹ ಟಿಕೆಟ್ ಆಕಾಂಕ್ಷಿ. ಪಕ್ಷದ ನಿರ್ಧಾರಕ್ಕೂ ಬದ್ಧನಾಗಿದ್ದೇನೆ. ಜೆಡಿಎಸ್ ನಾಯಕ ಜವರಾಯಿಗೌಡರ ಉಪಸ್ಥಿತಿಯಲ್ಲೇ ಮಾತು ನಡೀತು, ಅವರಿಗೂ ಖುಷಿಯಾಯಿತು ಎಂದರು.

ಈ ಘಟನೆ ಬಳಿಕ ಜೆಡಿಎಸ್‌ನಲ್ಲಿ ಅಸಮಾಧಾನ ತೀವ್ರವಾಗಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರದಲ್ಲಿ ಕೆಲಸ ಮಾಡಿ ಮೇಲಿಂದ ಟಿಕೆಟ್ ತರುವುದು ನನ್ನ ಜವಾಬ್ದಾರಿ ಎಂಬ ರೀತಿಯಲ್ಲಿ ನಾಯಕರಿಗೆ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.

Edited By : Abhishek Kamoji
PublicNext

PublicNext

28/07/2025 09:07 pm

Cinque Terre

35.94 K

Cinque Terre

0

ಸಂಬಂಧಿತ ಸುದ್ದಿ