", "articleSection": "Politics,Law and Order,Government,International", "image": { "@type": "ImageObject", "url": "https://prod.cdn.publicnext.com/s3fs-public/235762-1753716730-WhatsApp-Image-2025-07-28-at-8.59.14-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ನವದೆಹಲಿ: ಹಿಂಸೆ, ರಕ್ತ ಹಾಗೂ ಗುಂಡಿನ ಮೂಲಕ ಮಾತನಾಡುವ ದೇಶದೊಂದಿಗೆ ಮಾತುಕತೆ ಸಾಧ್ಯವಿಲ್ಲ. ಅವರದು ಭಯೋತ್ಪಾದನೆಯ ಭಾಷೆ. ಅವರು ಗುಂಡಿನ ಅಡಿ ...Read more" } ", "keywords": "Rajnath Singh on terrorism, Rajnath Singh latest statement, can't talk to those who speak through blood and bullets, India's stand on terrorism, Rajnath Singh on Pakistan, national security statement", "url": "https://dashboard.publicnext.com/node" }
ನವದೆಹಲಿ: ಹಿಂಸೆ, ರಕ್ತ ಹಾಗೂ ಗುಂಡಿನ ಮೂಲಕ ಮಾತನಾಡುವ ದೇಶದೊಂದಿಗೆ ಮಾತುಕತೆ ಸಾಧ್ಯವಿಲ್ಲ. ಅವರದು ಭಯೋತ್ಪಾದನೆಯ ಭಾಷೆ. ಅವರು ಗುಂಡಿನ ಅಡಿ ಸಂವಾದದ ಧ್ವನಿ ಅಡಗಿಸುತ್ತಾರೆ ಎಂದು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.
ಸಂಸತ್ತಿನಲ್ಲಿ 'ಆಪರೇಶನ್ ಸಿಂಧೂರ್' ಕುರಿತಾಗಿ ಚರ್ಚೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ದೇಶದೊಂದಿಗೆ ಇನ್ನೊಂದು ಪ್ರಜಾಪ್ರಭುತ್ವ ದೇಶ ಮಾತನಾಡಲು ಸಾಧ್ಯವಿದೆ. ಧಾರ್ಮಿಕತೆ, ಮತಾಂಧತೆ ಮತ್ತು ದ್ವೇಷವೇ ತುಂಬಿಕೊಂಡಿರುವ ದೇಶದೊಂದಿಗೆ ಮಾತುಕತೆ ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿದರು.
ಪಾಕಿಸ್ತಾನ ತನ್ನದೇ ಬಲೆಯಲ್ಲಿ ತಾನೇ ಬಿದ್ದಿದೆ. ಪಾಕಿಸ್ತಾನದ ಉದ್ದೇಶಗಳ ಬಗ್ಗೆ ನಮಗೆ ಸ್ಪಷ್ಟವಾಗಿ ಗೊತ್ತಿದೆ. ಭಯೋತ್ಪಾದಕರು ಸತ್ತರೆ ಪಾಕಿಸ್ತಾನ ಸರಕಾರದಿಂದಲೇ ಅಂತಿಮ ಕ್ರಿಯೆ ಮಾಡುತ್ತಾರೆ. ಸೇನಾಧಿಕಾರಿಗಳು ಅದರಲ್ಲಿ ಭಾಗವಹಿಸುತ್ತಾರೆ. ನಾವು ಭಯೋತ್ಪಾದನೆ ವಿರುದ್ಧ ಯಾವ ಹಂತಕ್ಕಾದರೂ ಹೋಗಲು ಸಿದ್ಧ ಎಂದು ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.
PublicNext
28/07/2025 09:02 pm