", "articleSection": "Crime,Law and Order,Cinema", "image": { "@type": "ImageObject", "url": "https://prod.cdn.publicnext.com/s3fs-public/52563-1753686845-WhatsApp-Image-2025-07-28-at-12.23.59-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Padmashree" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ನಟಿ ರಮ್ಯಾ ಮತ್ತು ನಟ ದರ್ಶನ್ ಅಭಿಮಾನಿಗಳ ನಡುವಿನ ವಾಕ್ಸಮರ ಇದೀಗ ಕಾನೂನು ಹೋರಾಟಕ್ಕೆ ತಿರುಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ...Read more" } ", "keywords": "Ramya complains against Darshan fans, cybercrime case filed, Bengaluru police investigation, Darshan fans controversy, Ramya statement", "url": "https://dashboard.publicnext.com/node" }
ಬೆಂಗಳೂರು : ನಟಿ ರಮ್ಯಾ ಮತ್ತು ನಟ ದರ್ಶನ್ ಅಭಿಮಾನಿಗಳ ನಡುವಿನ ವಾಕ್ಸಮರ ಇದೀಗ ಕಾನೂನು ಹೋರಾಟಕ್ಕೆ ತಿರುಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೋರಿ ರಮ್ಯಾ ಪೋಸ್ಟ್ ಮಾಡಿದ್ದಕ್ಕೆ, ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಮತ್ತು ನಿಂದನೀಯ ಕಾಮೆಂಟ್‌ಗಳು ಬಂದಿವೆ. ಇದರಿಂದ ಆಕ್ರೋಶಗೊಂಡಿರುವ ರಮ್ಯಾ, ದರ್ಶನ್ ಅಭಿಮಾನಿಗಳಿಗೆ ಪಾಠ ಕಲಿಸಲು ನಿರ್ಧರಿಸಿದ್ದಾರೆ.
ಸೈಬರ್ ಕ್ರೈಮ್‌ಗೆ ದೂರು :
ಇಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲು ರಮ್ಯಾ ಸಿದ್ಧರಾಗಿದ್ದಾರೆ. ದೂರಿನ ಜೊತೆಗೆ, ಅಶ್ಲೀಲ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಸಲ್ಲಿಸಲಿದ್ದಾರೆ. ಪೊಲೀಸರು ಈ ಸ್ಕ್ರೀನ್‌ಶಾಟ್‌ಗಳ ಆಧಾರದ ಮೇಲೆ ಕಾಮೆಂಟ್ ಮಾಡಿದವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ ಮತ್ತು ಅಗತ್ಯವಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ :
ರಮ್ಯಾ ಅವರ ಈ ದಿಟ್ಟ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. "ಸಿಂಹಿಣಿ", "ಬ್ಯೂಟಿ ವಿತ್ ಬ್ರೈನ್" ಅಂತೆಲ್ಲಾ ರಮ್ಯಾ ಅಭಿಮಾನಿಗಳು ಅವರನ್ನು ಕೊಂಡಾಡುತ್ತಿದ್ದಾರೆ.
PublicNext
28/07/2025 12:45 pm