ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಎಸ್ ಟೆಕ್ ಸಂಸ್ಥೆಗಳಲ್ಲಿ ಭಾರತೀಯರ ನೇಮಕಕ್ಕೆ ವಿರೋಧ- 'ಆ ದಿನಗಳು ಮುಗಿದಿವೆ' ಎಂದ ಟ್ರಂಪ್

ವಾಷಿಂಗ್ಟನ್: ಅಮೆರಿಕದ ಟೆಕ್ ಸಂಸ್ಥೆಗಳಲ್ಲಿ ಭಾರತೀಯರ ನೇಮಕಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧ ವ್ಯಕ್ತಪಡಿದ್ದಾರೆ. 'ಆ ದಿನಗಳು ಮುಗಿದಿವೆ' ಎಂದು ಟ್ರಂಪ್ ಹೇಳಿದ್ದಾರೆ.

AI ಶೃಂಗಸಭೆಯಲ್ಲಿ ಟ್ರಂಪ್ ಈ ಹೇಳಿಕೆಗಳನ್ನು ನೀಡಿದ್ದಾರೆ. AI ನ್ನು ಬಳಸಿಕೊಳ್ಳಲು ಶ್ವೇತಭವನದ ಕ್ರಿಯಾ ಯೋಜನೆ ಸೇರಿದಂತೆ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಮೂರು ಕಾರ್ಯಕಾರಿ ಆದೇಶಗಳಿಗೆ ಟ್ರಂಪ್ ಇದೇ ವೇಳೆ ಸಹಿ ಹಾಕಿದ್ದಾರೆ.

ಚೀನಾದಲ್ಲಿ ಕಾರ್ಖಾನೆಗಳನ್ನು ನಿರ್ಮಿಸಿ ಭಾರತೀಯರನ್ನು ಅಲ್ಲಿ ನೇಮಿಸಿಕೊಂಡಿದ್ದನ್ನು ಈ ಮೊದಲು ಟ್ರಂಪ್ ವಿರೋಧಿಸಿದ್ದರು. ಈಗ ಅಮೆರಿಕ ಟೆಕ್ ಸಂಸ್ಥೆಗಳಲ್ಲಿ ಭಾರತೀಯರ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ದೀರ್ಘಕಾಲದವರೆಗೆ, ಅಮೆರಿಕದ ಹೆಚ್ಚಿನ ಟೆಕ್ ಉದ್ಯಮವು "ಆಮೂಲಾಗ್ರ ಜಾಗತಿಕತೆ"ಯನ್ನು ಅನುಸರಿಸಿತು. ಅದು ಲಕ್ಷಾಂತರ ಅಮೆರಿಕನ್ನರ" ವಿಶ್ವಾಸ ಕಳೆದುಕೊಂಡು ದ್ರೋಹಿಯಾಗುತ್ತಿದೆ ಎಂದು ಭಾವಿಸುವಂತೆ ಮಾಡಿತು ಎಂದು ಟ್ರಂಪ್ ಆರೋಪಿಸಿದ್ದಾರೆ.

"ನಮ್ಮ ಅನೇಕ ದೊಡ್ಡ ಟೆಕ್ ಕಂಪನಿಗಳು ಚೀನಾದಲ್ಲಿ ತಮ್ಮ ಕಾರ್ಖಾನೆಗಳನ್ನು ನಿರ್ಮಿಸುವಾಗ, ಭಾರತದಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ಮತ್ತು ಐರ್ಲೆಂಡ್‌ನಲ್ಲಿ ಲಾಭವನ್ನು ಕಡಿತಗೊಳಿಸುವಾಗ ಅಮೆರಿಕದ ಸ್ವಾತಂತ್ರ್ಯದ ಆಶೀರ್ವಾದವನ್ನು ಪಡೆದುಕೊಂಡಿವೆ. ಅದು ನಿಮಗೆ ತಿಳಿದಿದೆ. ಅದೇ ಸಮಯದಲ್ಲಿ ತಮ್ಮ ಸಹ ನಾಗರಿಕರನ್ನು ಇಲ್ಲಿಯೇ ವಜಾಗೊಳಿಸವುದು ಮತ್ತು ಸೆನ್ಸಾರ್ ಮಾಡುವುದು ನಡೆಯುತ್ತಿತ್ತು. ಅಧ್ಯಕ್ಷ ಟ್ರಂಪ್ ಅಡಿಯಲ್ಲಿ, ಆ ದಿನಗಳು ಮುಗಿದಿವೆ" ಎಂದು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

26/07/2025 05:03 pm

Cinque Terre

29.61 K

Cinque Terre

4

ಸಂಬಂಧಿತ ಸುದ್ದಿ