", "articleSection": "Crime,Viral", "image": { "@type": "ImageObject", "url": "https://prod.cdn.publicnext.com/s3fs-public/463655-1753457432-WhatsApp-Image-2025-07-25-at-8.56.22-PM-(1).jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಲಖನೌ: ತಂದೆ-ತಾಯಿ ತಮ್ಮ ಮಕ್ಕಳಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಅವರು ಎಷ್ಟೇ ಕಷ್ಟದಲ್ಲಿದ್ದರೂ ಕೂಡಾ ಮಕ್ಕಳಿಗೆ ಹೊಟ್ಟೆತುಂಬ ಊ...Read more" } ", "keywords": "Elderly mother abandoned, viral video, family abandons old mother, street video goes viral, elderly abuse case, India news, old age care, family drama, viral video news, social issue. ", "url": "https://dashboard.publicnext.com/node" } ವೃದ್ದ ತಾಯಿಯನ್ನ ಬೀದಿಗೆ ಬಿಟ್ಟ ಕುಟುಂಬ : ಮಾನವ ಕುಲವೇ ತಲೆತಗ್ಗಿಸುವ ವಿಡಿಯೋ ವೈರಲ್.!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೃದ್ದ ತಾಯಿಯನ್ನ ಬೀದಿಗೆ ಬಿಟ್ಟ ಕುಟುಂಬ : ಮಾನವ ಕುಲವೇ ತಲೆತಗ್ಗಿಸುವ ವಿಡಿಯೋ ವೈರಲ್.!

ಲಖನೌ: ತಂದೆ-ತಾಯಿ ತಮ್ಮ ಮಕ್ಕಳಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಅವರು ಎಷ್ಟೇ ಕಷ್ಟದಲ್ಲಿದ್ದರೂ ಕೂಡಾ ಮಕ್ಕಳಿಗೆ ಹೊಟ್ಟೆತುಂಬ ಊಟ ಮಾಡಿಸಿ ತಾವು ಉಪವಾಸದಲ್ಲಿ ಇದ್ದು ಮಕ್ಕಳನ್ನ ಚನ್ನಾಗಿ ಬೆಳಸುತ್ತಾರೆ. ಆದರೆ ಅದೇ ಮಕ್ಕಳು ಬೆಳೆದು ದೊಡ್ಡವರಾದಾಗ, ತಂದೆ-ತಾಯಿಯನ್ನೇ ಮನೆಯಿಂದ ಹೊರ ಹಾಕುವಂತಹ ಕ್ರೂರ ಘಟನೆಗಳನ್ನ ನಾವು ಹಲವು ಬಾರಿ ನೋಡಿದ್ದೇವೆ.

ಇಂತಹದ್ದೇ ಒಂದು ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಆಯೋಧ್ಯೆ ನಗರದಲ್ಲಿ ನಡೆದಿದೆ. ವಯಸ್ಸಾದ ವೃದ್ಧ ಮಹಿಳೆಯೊಬ್ಬರನ್ನು, ಅವರ ಮನೆಯವರು ಎಲ್ಲರೂ ಸೇರಿ ಬೀದಿಯ ಬದಿಯಲ್ಲಿ ಮಲಗಿಸಿ ಹೋಗಿರುವುದು ಮಾನವೀಯತೆಯೆಂಬ ಅರ್ಥವನ್ನೇ ಕುಂದಿಸಿದೆ.

ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ವೀಡಿಯೋ ಕಂಡ ನೆಟ್ಟಿಗರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು , "ತಾಯಿಯ ಪ್ರೀತಿ ಇಷ್ಟೊಂದು ಅವಮಾನ ಅನುಭವಿಸಬೇಕಾದ ದಿನವೂ ಬರುತ್ತದೆ ಎಂಬುದು ದುಃಖಕರ ಸಂಗತಿ," ಎಂದು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

ವೃದ್ಧೆಯನ್ನು ಬೀದಿಯಲ್ಲಿ ಬಿಟ್ಟು ಹೋದ ಮನೆಯ ಸದಸ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಾರ್ವಜನಿಕರು ಕೂಡ ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

Edited By :
PublicNext

PublicNext

25/07/2025 09:00 pm

Cinque Terre

112.49 K

Cinque Terre

15

ಸಂಬಂಧಿತ ಸುದ್ದಿ