ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇರಳ: ವೇಷ ಬದಲಿಸಿಕೊಂಡ ರೇಪ್ & ಮರ್ಡರ್ ಕೇಸ್ ಖೈದಿ, ಸಿಸಿಟಿವಿ ದೃಶ್ಯ ಲಭ್ಯ!

ಕೇರಳ:- 23 ವರ್ಷದ ಸೌಮ್ಯ ರೇಪ್ & ಮರ್ಡರ್ ಕೇಸ್ ಅಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಗೋವಿಂದ ಚಾಮಿ ಮಿಸ್ಸಿಂಗ್ ಪ್ರಕರಣ ಸಂಬಂಧ ಆತನ ಓಡಾಟದ ಸಿಸಿಟಿವಿ ದೃಶ್ಯ ಲಭ್ಯ ಆಗಿದೆ. ಕೇರಳದ ಸೆಂಟ್ರಲ್ ಜೈಲಿನಿಂದ ಮುಂಜಾನೆ 4-6 ಗಂಟೆಯ ಸುಮಾರಿಗೆ ಜೈಲಿನಿಂದ ಎಸ್ಕೇಪ್ ಆಗಿದ್ದಾನೆ.

ಡಾಗ್ ಸ್ಕ್ವಾಡ್,ಸುತ್ತ ಮುತ್ತಲಿನ ಸಿಸಿಟಿವಿ ದೃಶ್ಯ ಆಧರಿಸಿ ಕಾರ್ಯಾಚರಣೆ ನಡೆದಿದೆ. ವೇಷ ಬದಲಿಸಿ ಓಡಾಡುತ್ತಿದ್ದ ಖದೀಮನ ಸೆರೆ ಹಿಡಿಯಲು ಪೊಲೀಸರು ಪಣ ತೊಟ್ಟಿದ್ದಾರೆ. ಜೈಲಿನಿಂದ ಆಚೆ ಹೋಗುವ ಸಂದರ್ಭದ ಸಿಸಿಟಿವಿ & ಆಚೆ ಹೋದ ಮೇಲೆ ಅಲೆದಾಡುತ್ತಿರುವ CCTV ದೃಶ್ಯ ಲಭ್ಯ ಆಗಿದೆ. ಎಲ್ಲಾ ಕಡೆ ಫೋಟೋ ಹರಿಬಿಟ್ಟಿದ್ದು wanted ಅಂತ ಪೋಸ್ಟರ್ ಹಾಕಲಾಗಿದೆ. ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣ ಮಾಡುವಾಗ ಬಾಳಿ ಬದುಕ ಬೇಕಾದ ಹುಡುಗಿಯನ್ನ ಕೊಲೆ ಮಾಡಿದ ಕೀಚಕ ಈ ಗೋವಿಂದ ಚಾಮಿ. ಹಾಗಾಗಿ ಈತನ ಪತ್ತೆ ಕಾರ್ಯ ಚುರುಕು ಗೊಂಡಿದೆ.

Edited By : Shivu K
PublicNext

PublicNext

26/07/2025 05:25 pm

Cinque Terre

14.25 K

Cinque Terre

0