", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/463655-1753434825-manjunath-(58).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದೆಹಲಿ : ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಜೊತೆ ನಿನ್ನೆ ರಾತ್ರಿ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸ...Read more" } ", "keywords": "Delhi meeting, Surjewala CM DCM meet, Congress party meeting, corporate board appointments, Karnataka politics, Siddaramaiah Shivakumar meeting, Randeep Singh Surjewala, Congress leadership meet, corporation board chairmen selection, Karnataka Congress news. ", "url": "https://dashboard.publicnext.com/node" } ದೆಹಲಿ : ಸುರ್ಜೇವಾಲ ಜೊತೆ ಸಿಎಂ ಡಿಸಿಎಂ ಸಭೆ : 22 ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆ ಅಂತಿಮ ?
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ : ಸುರ್ಜೇವಾಲ ಜೊತೆ ಸಿಎಂ ಡಿಸಿಎಂ ಸಭೆ : 22 ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆ ಅಂತಿಮ ?

ದೆಹಲಿ : ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಜೊತೆ ನಿನ್ನೆ ರಾತ್ರಿ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿದ್ದಾರೆ. ಸಭೆಯಲ್ಲಿ ನಿಗಮ ಮಂಡಳಿ ಮತ್ತು ಎಂಎಲ್‌ಸಿ ನೇಮಕ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಎಂಎಲ್‌ಸಿ ಆಯ್ಕೆ ಕಗ್ಗಂಟು ಇನ್ನೂ ಬಗೆಹರಿಯಲಿಲ್ಲ ಆದ್ರೆ ನಿಗಮ ಮಂಡಳಿ ನೇಮಕಕ್ಕೆ ಸಧ್ಯಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗಿದೆ.

ಈಗ 22 ನಿಗಮ ಮಂಡಳಿ ನೇಮಕಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸಿಎಂ ಡಿಸಿಎಂ ಬೆಂಗಳೂರಿಗೆ ವಾಪಸ್ ಆಗ್ತಿದ್ದ ಹಾಗೇ ನಿಗಮ ಮಂಡಳಿ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗ ಆಗಲಿರುವ ನಿಗಮ ಮಂಡಳಿ ಸ್ಥಾನಕ್ಕೂ ಸಾಕಷ್ಟು ಪೈಪೋಟಿ ಎದುರಾಗಿತ್ತು ಸಿಎಂ ಬಣ, ಡಿಸಿಎಂ ಬಣ, ಖರ್ಗೆ ಬಣ ಹೀಗೆ ಸಾಕಷ್ಟು ಪೈಪೋಟಿ ಎದುರಾಗಿತ್ತು. ಇದೀಗ ಎಲ್ಲಾ ಒತ್ತಾಯಗಳ ನಡುವೆ 22 ನಿಗಮ ಮಂಡಳಿಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಪಟ್ಟಿ ಬಿಡುಗಡೆಯಾದ ಬಳಿಕ ಯಾವ ನಾಯಕ ಬಣಕ್ಕೆ ಹೆಚ್ಚು ಸಿಕ್ಕಿದೆ ಅನ್ನೋದು ತಿಳಿಯಲಿದೆ.

ಇನ್ನೊಂದೆಡೆ ಎಂಎಲ್‌ಸಿ ಆಯ್ಕೆ ಬಗ್ಗೆ ನಾಯಕರಲ್ಲಿ ಒಮ್ಮತ ಮೂಡದ ಕಾರಣ ಮತ್ತೆ ಮುಂದಕ್ಕೆ ಹೋಗಿದೆ ಎನ್ನಲಾಗಿದೆ. ಇನ್ನೊಂದು ಸುತ್ತಿನ ಸಭೆ ಬಳಿಕ ಎಂಲ್‌ಸಿ ಆಯ್ಕೆ ಅಂತಿಮ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Edited By :
PublicNext

PublicNext

25/07/2025 02:43 pm

Cinque Terre

54.12 K

Cinque Terre

1

ಸಂಬಂಧಿತ ಸುದ್ದಿ