ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಲ್ತುಳಿತ ಕೇಸ್‌ನಲ್ಲಿ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿಗಳು ಮರು ನಿಯೋಜನೆ

ಬೆಂಗಳೂರು: ಆರ್‌ಸಿಬಿ ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಸರಕಾರ ಕೆಲವು ಪೊಲೀಸ್ ಅಧಿಕಾರಿಗಳ ತಲೆದಂಡ ಮಾಡಿತ್ತು. ಆಗ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿಗಳನ್ನು ಈಗ ಸರಕಾರ ಮರು ನಿಯೋಜನೆ ಮಾಡಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದಂತ ಬಿ.ದಯಾನಂದ್ ಅವರನ್ನು ಅಮಾನತು ರದ್ದುಗೊಳಿಸಿದ ಬಳಿಕ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಎಡಿಜಿಪಿಯಾಗಿ ಸ್ಥಳ ನಿಯೋಜನೆ ಮಾಡಿ ಆದೇಶಿಸಿದೆ.

ಶೇಖರ್ ಹೆಚ್.ಟಿ ಅವರನ್ನು ಗುಪ್ತಚರ ಇಲಾಖೆಯ ಎಸ್ಪಿಯಾಗಿ ನೇಮಿಸಲಾಗಿದೆ. ಈ ಮೂಲಕ ಅಮಾನತು ರದ್ದಾದ ಬಳಿಕ ಐಪಿಎಸ್ ಅಧಿಕಾರಿ ಬಿ.ದಯಾನಂದ್ ಹಾಗೂ ಶೇಖರ್ ಹೆಚ್.ಟಿ ಅವರಿಗೆ ಸ್ಥಳ ನಿಯೋಜನೆ ಮಾಡಿ ಸರ್ಕಾರ ಆದೇಶಿಸಿದೆ.

ಐಜಿಪಿ ವಿಕಾಸ್ ಕುಮಾರ್ ಅವರ ಅಮಾನತು ಆದೇಶವನ್ನು ಹಿಂಪಡೆದ ಸರಕಾರ ಆಂತರಿಕ ಭದ್ರತಾ ವಿಭಾಗದ ಐಜಿಪಿ ಹುದ್ದೆ ನೀಡಿದೆ.

Edited By : Nagaraj Tulugeri
PublicNext

PublicNext

31/07/2025 10:18 pm

Cinque Terre

52.76 K

Cinque Terre

0