ಧರ್ಮಸ್ಥಳ: 1985ರಿಂದ 2000ವರೆಗೂ ಅನಾಥ ಶವಗಳ ಹೂತಿರೋ ಬಗ್ಗೆ ಎಸ್‌ಐಟಿ ಧರ್ಮಸ್ಥಳ ಗ್ರಾಮ ಪಂಚಾಯ್ತಿಗೆ ವರದಿ ಕೇಳಿದೆ.
ಅನಾಥ ಶವಗಳನ್ನ ಎಲ್ಲೆಲ್ಲಿ ಹೂಳಲಾಗಿದೆ? ಯಾವ ಸಂದರ್ಭ, ಎಷ್ಟು ಶವಗಳನ್ನು ಹೂಳಲಾಗಿದೆ ಎಂದು ವರದಿ ಕೇಳಲಾಗಿದೆ. ಧರ್ಮಸ್ಥಳದಲ್ಲಿ ರುದ್ರಭೂಮಿ ಮಂಜೂರಾಗಿದ್ದು ಯಾವಾಗ? ಅದಕ್ಕೂ ಮೊದಲು ಕಂದಾಯ ಇಲಾಖೆಯಿಂದ ಯಾವ ಸ್ಥಳ ಇತ್ತು ಎಂಬ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಗ್ರಾಮ ಪಂಚಾಯ್ತಿ ಪಿಡಿಒಗೆ ಕೇಳಲಾಗಿದೆ. ಬಹುತೇಕ ಇವತ್ತು ಗ್ರಾಮ ಪಂಚಾಯ್ತಿಯಿಂದ ವರದಿ ಬರುವ ಸಾಧ್ಯತೆ ಇದೆ.
PublicNext
01/08/2025 09:45 am