", "articleSection": "LadiesCorner", "image": { "@type": "ImageObject", "url": "https://prod.cdn.publicnext.com/s3fs-public/52563-1754147629-_(1280-x-720-px)-(74).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ತುಂಬಾ ಕಡಿಮೆ ಸಮಯದಲ್ಲಿ ರುಚಿಕರವಾದ ಅಕ್ಕಿ ರೊಟ್ಟಿ ಮಾಡಿ ಸವಿಯಿರಿ ಅಕ್ಕಿ ರೊಟ್ಟಿ ಮಾಡಲು ಬೇಕಾಗುವ ವಸ್ತುಗಳು ಬೇಕು? ಅಕ್ಕಿ ಹಿಟ್ಟಿ ಉ...Read more" } ", "keywords": ""rice roti recipe, 5-minute rice roti, quick rice roti, instant rice roti, rice flour roti, Indian flatbread recipe, easy rice roti"", "url": "https://dashboard.publicnext.com/node" } 5 ನಿಮಿಷದಲ್ಲಿ ಮಾಡಿ ಅಕ್ಕಿ ರೊಟ್ಟಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

5 ನಿಮಿಷದಲ್ಲಿ ಮಾಡಿ ಅಕ್ಕಿ ರೊಟ್ಟಿ

ತುಂಬಾ ಕಡಿಮೆ ಸಮಯದಲ್ಲಿ ರುಚಿಕರವಾದ ಅಕ್ಕಿ ರೊಟ್ಟಿ ಮಾಡಿ ಸವಿಯಿರಿ

ಅಕ್ಕಿ ರೊಟ್ಟಿ ಮಾಡಲು ಬೇಕಾಗುವ ವಸ್ತುಗಳು ಬೇಕು?

ಅಕ್ಕಿ ಹಿಟ್ಟಿ

ಉಪ್ಪು

ಎಣ್ಣೆ

ಅಕ್ಕಿ ರೊಟ್ಟಿ ಮಾಡುವುದು ಹೇಗೆ?

ಮೊದಲು ಒಂದು ಬಾಣಲೆಲ್ಲಿ ನೀರು ಇಟ್ಟು ಅದಕ್ಕೆ ಉಪ್ಪು 1 ಸ್ಪೂನ್ ಎಣ್ಣೆ ಹಾಕಿ ಕುದಿಯಲು ಬಿಡಬೇಕು. ಈಗ ಕುದಿಬರುತ್ತಿರುವ ನೀರಿಗೆ ಜರಡಿ ಹಿಡಿದು ಇಟ್ಟುಕೊಂಡಿರುವ 1 ಕಪ್ ನುಣ್ಣಗಿನ ಅಕ್ಕಿ ಹಿಟ್ಟನ್ನು ಹಾಕಿ 2 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿ ಮುಚ್ಚಳ ಮುಚ್ಚಿ ಇಡಿ. 5 ನಿಮಿಷ ಇಟ್ಟು ಕೈಯಿಂದಲೇ ಹಿಟ್ಟನ್ನು ಹದ ಮಾಡಿಕೊಳ್ಳಿ. ಚೆನ್ನಾಗಿ ಹಿಟ್ಟನ್ನು ಒತ್ತಿಕೊಂಡು ಚಪಾತಿ ಹಿಟ್ಟಿನಂತಹ ಹದಕ್ಕೆ ಬರುವವರೆಗೂ ಹದ ಮಾಡಿಕೊಳ್ಳಬೇಕು. ಅನಂತರ ಕೈಗೆ ನೀರು ಹಚ್ಚಿಕೊಂಡು ನಿಂಬೆ ಹಣ್ಣಿನ ಗಾತ್ರಕ್ಕೆ ಉಂಡೆಗಳ ಮಾಡಿ ಚಪಾತಿಯಂತೆಯೇ ಒಣ ಹಿಟ್ಟು ಹಾಕಿಕೊಳ್ಳುತ್ತಾ ಮೆದುವಾಗಿ ಲಟ್ಟಿಸಿಕೊಳ್ಳಬೇಕು.

ಈಗ ಈ ರೊಟ್ಟಿಯನ್ನು ಬಿಸಿಯಾದ ಕಾವಲಿ ಮೇಲೆ ಹಾಕಿ ಕಾಟನ್ ಬಟ್ಟೆಯಲ್ಲಿ ನೀರನ್ನು ಅದ್ದಿ ಈ ರೊಟ್ಟಿಯ ಮೇಲೆ ನಿಧಾನಕ್ಕೆ ಹಚ್ಚಿಕೊಳ್ಳಿ. ಈ ರೀತಿ ಮಾಡಿದ್ರೆ ರೊಟ್ಟಿ ಒಣಗುವುದಿಲ್ಲ ಅಥವಾ ಗಟ್ಟಿಯಾಗುವುದಿಲ್ಲ. ಬೇಗ ಬೇಗ ತಿರುಗಿಸಿಕೊಂಡು ಸ್ವಲ್ಪ ಬಾಡಿಕೊಳ್ಳಲು ಬಿಡಬೇಕು. ನಂತರ ಇದನ್ನು ನೇರವಾಗಿ ಒಲೆ ಉರಿಯಲ್ಲಿ ಸುಟ್ಟುಕೊಳ್ಳಬೇಕು. ಇಷ್ಟಾದರೆ ಮೃದುವಾದ, ಉಬ್ಬಿಬರುವ ಅಕ್ಕಿ ರೊಟ್ಟಿ ರೆಡಿ. ನೀವು ಟ್ರೈ ಮಾಡಿ.

Edited By : Nirmala Aralikatti
PublicNext

PublicNext

02/08/2025 08:44 pm

Cinque Terre

8.28 K

Cinque Terre

0