", "articleSection": "Entertainment,Crime,Cinema,News,LadiesCorner", "image": { "@type": "ImageObject", "url": "https://prod.cdn.publicnext.com/s3fs-public/421698-1754128220-10~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ChaitanyaKothari" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ನಟಿ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ ಅದಿತಿ ಪ್ರಭುದೇವ,...Read more" } ", "keywords": "give me top 5 english seo in comma separated ", "url": "https://dashboard.publicnext.com/node" } ಅನಗತ್ಯ ಕಾಮೆಂಟ್‌ ಮಾಡುವವರು ಹುಚ್ಚರು - ನಟಿ ಅದಿತಿ ಪ್ರಭುದೇವ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನಗತ್ಯ ಕಾಮೆಂಟ್‌ ಮಾಡುವವರು ಹುಚ್ಚರು - ನಟಿ ಅದಿತಿ ಪ್ರಭುದೇವ

ಬೆಂಗಳೂರು: ನಟಿ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ ಅದಿತಿ ಪ್ರಭುದೇವ, "ಸಿನಿಮಾ ತಾರೆಯರಿಗಷ್ಟೇ ಅಲ್ಲದೆ, ಸಾಮಾನ್ಯರಿಗೂ ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ವಿಷಯಗಳು ಸಾಮಾನ್ಯ" ಎಂದು ಹೇಳಿದರು.

ನನಗೆ ವೈಯಕ್ತಿಕವಾಗಿ ಕೆಟ್ಟ ಕಮೆಂಟ್‌ಗಳ ಅನುಭವ ಆಗಿಲ್ಲ. ಆದರೆ, ಹುಡುಗರು ಮಾತ್ರವಲ್ಲ, ಕೆಲವು ಹುಡುಗಿಯರು ಕೂಡ ಕಮೆಂಟ್ ಮಾಡುತ್ತಾರೆ. ಫೇಕ್ ಅಕೌಂಟ್‌ಗಳ ಮೂಲಕ ಈ ರೀತಿ ಕೆಟ್ಟ ಕಮೆಂಟ್ ಮಾಡುವುದರಿಂದ ಅವರಿಗೆ ಏನು ಲಾಭ ಸಿಗುತ್ತದೆಯೋ ಗೊತ್ತಿಲ್ಲ. ಇಂತಹ ವಿಷಯಗಳನ್ನು ನಿರ್ಲಕ್ಷಿಸುವುದು ಉತ್ತಮ ಎಂದರು.

ಇದಲ್ಲದೆ, ಸ್ಟಾರ್‌ಗಳು ಎಲ್ಲರಿಗೂ ಬೆಂಬಲ ನೀಡುತ್ತಾರೆ ಎಂದು ನನಗೆ ಅನಿಸುತ್ತದೆ. ಹುಚ್ಚರು ಮಾತ್ರ ಅನಗತ್ಯವಾಗಿ ಕಮೆಂಟ್ ಮಾಡುತ್ತಾರೆ ಎಂದು ಅವರು ಖಡಾಖಂಡಿತವಾಗಿ ಹೇಳಿದರು. ನಮ್ಮ ಮನೆಯಲ್ಲಿ ರಕ್ತ ಸಂಬಂಧಿಗಳ ನಡುವೆಯೇ ಮನಸ್ತಾಪಗಳಿರುತ್ತವೆ. ಹಾಗಾಗಿ ಇಂತಹ ಅನಗತ್ಯ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ನಮಗೂ ಒಂದು ಕುಟುಂಬ ಇದೆ ಎಂಬುದನ್ನು ನೆನಪಿನಲ್ಲಿ ಇಡಬೇಕು ಎಂದು ಅವರು ಹೇಳಿದರು.

ನಕಲಿ ಖಾತೆಗಳನ್ನು ಸೃಷ್ಟಿಸಿಕೊಂಡು, ಸ್ಟಾರ್ ನಟರ ಅಭಿಮಾನಿಗಳ ಹೆಸರಿನಲ್ಲಿ ಕೆಟ್ಟ ಕಮೆಂಟ್‌ಗಳನ್ನು ಮಾಡುವುದು ಹೆಚ್ಚಾಗಿದೆ. ಕೆಲವು ನಟ ನಟಿಯರು ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಾಗ, ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ನಟಿ ರಮ್ಯಾ ಅವರು ಕಾನೂನು ಹೋರಾಟವನ್ನು ಪ್ರಾರಂಭಿಸಿದ್ದಾರೆ. ನಟ ಪ್ರಥಮ್ ಸೇರಿದಂತೆ ಹಲವರು ದೂರು ದಾಖಲಿಸಿದ್ದಾರೆ. ಅಲ್ಲದೆ, ನಿರ್ಮಾಪಕರು ಕೂಡ ಕಲಾವಿದರ ಸಂಘಕ್ಕೆ ದೂರು ನೀಡಿ, ಇಂತಹ ಕೃತ್ಯಗಳಲ್ಲಿ ತೊಡಗುವ ನಟರಿಗೆ ಬುದ್ಧಿ ಹೇಳುವಂತೆ ಒತ್ತಾಯಿಸಿದ್ದಾರೆ.

Edited By : Suman K
PublicNext

PublicNext

02/08/2025 03:20 pm

Cinque Terre

20.47 K

Cinque Terre

0

ಸಂಬಂಧಿತ ಸುದ್ದಿ