", "articleSection": "Entertainment,Cinema", "image": { "@type": "ImageObject", "url": "https://prod.cdn.publicnext.com/s3fs-public/454739-1754141158-Untitled-design-(63).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ChaitanyaKothari" }, "editor": { "@type": "Person", "name": "mudakanagouda.p" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು : ಸ್ಯಾಂಡಲ್ವುಡ್‌ನಲ್ಲಿ ಎಲ್ಲರ ಗಮನ ಸೆಳೆದಿರುವ ಬಹುಭಾಷಾ ಚಿತ್ರ ಬ್ರ್ಯಾಟ್ ಇದೀಗ ತನ್ನ ಮೊದಲ ಹಾಡು “ನಾನೇ ನೀನಂತೆ…” ಮೂಲಕ ಮತ್ತ...Read more" } ", "keywords": "Brat movie song release, Naané Neenanthe song, Kannada multilingual song, Brat film music launch, Naané Neenanthe five languages, Kannada song release 2025, Brat Kannada movie song, multilingual music launch, Naané Neenanthe Brat film, Kannada cinema music update ", "url": "https://dashboard.publicnext.com/node" } ಬೆಂಗಳೂರು: ಬ್ರ್ಯಾಟ್ ಚಿತ್ರದ ‘ನಾನೇ ನೀನಂತೆ…’ ಹಾಡು ಐದು ಭಾಷೆಗಳಲ್ಲಿ ಭರ್ಜರಿ ಬಿಡುಗಡೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬ್ರ್ಯಾಟ್ ಚಿತ್ರದ ‘ನಾನೇ ನೀನಂತೆ…’ ಹಾಡು ಐದು ಭಾಷೆಗಳಲ್ಲಿ ಭರ್ಜರಿ ಬಿಡುಗಡೆ

ಬೆಂಗಳೂರು : ಸ್ಯಾಂಡಲ್ವುಡ್‌ನಲ್ಲಿ ಎಲ್ಲರ ಗಮನ ಸೆಳೆದಿರುವ ಬಹುಭಾಷಾ ಚಿತ್ರ ಬ್ರ್ಯಾಟ್ ಇದೀಗ ತನ್ನ ಮೊದಲ ಹಾಡು “ನಾನೇ ನೀನಂತೆ…” ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಈ ಹಾಡು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಆನಂದ್ ಆಡಿಯೋ ಮೂಲಕ ಬಿಡುಗಡೆಗೊಂಡಿದ್ದು, ಎಲ್ಲ ಭಾಷೆಗಳಲ್ಲೂ ಶ್ರೋತರಿಂದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ.

ಬ್ರ್ಯಾಟ್ ಚಿತ್ರಕ್ಕೆ ನಿರ್ದೇಶನ ವಹಿಸಿರುವುದು ಯಶಸ್ವಿ ನಿರ್ದೇಶಕ ಶಶಾಂಕ್, ಮತ್ತು ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದು “ಡಾರ್ಲಿಂಗ್” ಕೃಷ್ಣ. ಈ ಹಿಂದೆ ಕೌಸಲ್ಯ ಸುಪ್ರಜಾ ರಾಮ ಮೂಲಕ ಈ ಜೋಡಿ ಮೆಚ್ಚುಗೆ ಪಡೆದಿತ್ತು. ಈ ಬಾರಿ ಸಹ ಒಂದು ವಿಭಿನ್ನ ಪ್ರಯೋಗದೊಂದಿಗೆ ದೊಡ್ಡ ಪರದೆಯ ಮೇಲೆ ಬರುವ ನಿರೀಕ್ಷೆಯಲ್ಲಿದೆ. ಚಿತ್ರವನ್ನು ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ನಿರ್ಮಾಪಕ ಮಂಜುನಾಥ್ ಕಂದಕೂರ್ ತಮ್ಮ ಸಂಸ್ಥೆಯ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ.

ಈ ಹಾಡಿಗೆ ಸಂಗೀತವನ್ನ ರಚಿಸಿರುವುದು ಖ್ಯಾತ ಸಂಯೋಜಕ ಅರ್ಜುನ್ ಜನ್ಯ. ಅವರು ಈ ಹಾಡನ್ನು ತಯಾರಿಸಲು ನೂರಾರು ಗಂಟೆಗಳ ಶ್ರಮಹಂಚಿದ್ದಾರೆ. ಈ ಹಾಡನ್ನು ಕನ್ನಡ ಹಾಗೂ ತೆಲುಗಿನಲ್ಲಿ ಜನಪ್ರಿಯ ಗಾಯಕ ಸಿದ್ ಶ್ರೀರಾಮ್ ಹಾಡಿದ್ದು, ಕನ್ನಡದ ಫಿಮೇಲ್ ವರ್ಶನ್‌ನಲ್ಲಿ ಲಹರಿ ಮಹೇಶ್ ತಮ್ಮ ಅದ್ಭುತ ಧ್ವನಿಯಿಂದ ಮನಮುಟ್ಟುವ ಗಾಯನ ನೀಡಿದ್ದಾರೆ. ಉಳಿದ ಭಾಷೆಗಳಲ್ಲಿ ಗಾಯಕಿ ಸಿರೀಶ, ತಮಿಳು ಹಾಗೂ ತೆಲುಗಿನಲ್ಲಿ ಶ್ರೀಕಾಂತ್ ಹರಿಹರನ್, ಹಿಂದಿಯಲ್ಲಿ ನಿಹಾಲ್ ತವ್ರು ಹಾಡಿದ್ದಾರೆ.

ಹಾಡು ಬಿಡುಗಡೆ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡವು ತಮ್ಮ ಅನುಭವಗಳನ್ನು ಹಂಚಿಕೊಂಡಿತು. ನಟ ಕೃಷ್ಣ

ಮಾತನಾಡುತ್ತಾ, “ಈ ಹಾಡು ನನ್ನ ಹೃದಯದ ಹತ್ತಿರವಿದೆ. ಶಶಾಂಕ್ ಅವರ ನಿರ್ದೇಶನ ಹಾಗೂ ಅರ್ಜುನ್ ಅವರ ಸಂಗೀತದೊಂದಿಗೆ ಸಿದ್ ಶ್ರೀರಾಮ್ ಅವರ ಧ್ವನಿ ಈ ಹಾಡಿಗೆ ಜೀವ ನೀಡಿದೆ,” ಎಂದರು. ಮುಂದೆ ಸಿನಿಮಾ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದ್ದು, ಇನ್ನೂ ಕೆಲವು ಹಾಡುಗಳು ಹಂತ ಹಂತವಾಗಿ ಬಿಡುಗಡೆಯಾಗಲಿವೆ ಎಂದು ತಿಳಿಸಿದರು.

ನಿರ್ದೇಶಕ ಶಶಾಂಕ್ ಮಾತನಾಡುತ್ತ, “ಈ ಹಾಡು ನನ್ನ ಸಿನಿ ಜೀವನದ ತೀವ್ರ ಶ್ರಮದ ಫಲ. ಇದನ್ನು ರೂಪಿಸೋದು ಸುಲಭವಿರಲಿಲ್ಲ ನಟಿ ಮನಿಶಾ ಕಂದಕೂರ್, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. “ನಾನೇ ನೀನಂತೆ…” ಎಂಬ ಹಾಡು ನನ್ನ ಇಷ್ಟದ ಹಾಡು, ಇದು ನನ್ನ ಪಾತ್ರದ ಭಾವನೆಗಳಿಗೆ ತುಂಬಾನೇ ಹೊಂದಿದೆ,” ಎಂದು ತಿಳಿಸಿದರು.

ನಿರ್ಮಾಪಕ ಮಂಜುನಾಥ್ ಕಂದಕೂರ್ ಮಾತನಾಡುತ್ತ, “ಫಸ್ಟ್ ರ್ಯಾಂಕ್ ರಾಜು ಚಿತ್ರದ ಯಶಸ್ಸು ನಮಗೆ ಆತ್ಮವಿಶ್ವಾಸ ನೀಡಿತು. ಈ ಚಿತ್ರದಲ್ಲಿ ಯಾವ ಕಮ್ಮಿ ಇಲ್ಲದೆ ಪ್ರತಿ ದೃಶ್ಯಕ್ಕೂ ಶ್ರದ್ಧೆ ಹಾಕಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹ ಬೇಕು,” ಎಂದರು. ವೇದಿಕೆಯಲ್ಲಿ ಗಾಯಕಿ ಲಹರಿ, ಆನಂದ್ ಆಡಿಯೋ ಶ್ಯಾಮ್, ನೃತ್ಯ ನಿರ್ದೇಶಕ ಕಲೈ ಮಾಸ್ಟರ್ ಹಾಗೂ ಛಾಯಾಗ್ರಾಹಕ ಅಭಿಷೇಕ್ ಕಲ್ಲತ್ತಿ ಹಾಜರಿದ್ದರು.

Edited By :
PublicNext

PublicNext

02/08/2025 06:56 pm

Cinque Terre

13.4 K

Cinque Terre

0

ಸಂಬಂಧಿತ ಸುದ್ದಿ