ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಯಕನಹಟ್ಟಿಯಲ್ಲಿ ಹರ್-ಘರ್ ತಿರಂಗಾ’ ಅಭಿಯಾನ

ಚಳ್ಳಕೆರೆ 79 ನೇ ಸ್ವಾತಂತ್ರ್ಯ ದಿನೋತ್ಸವವನ್ನು ಸಂಭ್ರಮಿಸಲು ದೇಶಾದ್ಯಂತ ನಡೆಯುತ್ತಿರುವ ‘ಹರ್-ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣದಲ್ಲಿ ಹರ್-ಘರ್ ತಿರಂಗಾ’ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮನೆ-ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಗೌರವ ಸಲ್ಲಿಸಬೇಕಿದೆ. ಈ ಹಿನ್ನಲೆಯಲ್ಲಿ ಇಂದಿನಿಂದ ಆಗಸ್ಟ್ 15 ರವರೆಗೂ ಪ್ರತಿ ಮನೆ ಮನೆಗಳ ಮೇಲೆ ರಾಷ್ಟ್ರ ಧ್ವಜ ರಾರಾಜಿಸಬೇಕಿದೆ. ಇದರಿಂದ ಭಾರತದ ಹಿರಿಮೆ ವಿಶ್ವ ಭೂಪಟದಲ್ಲಿ ಮಿನುಗಬೇಕಿದೆ ಎಂದು ನಾಯಕನಹಟ್ಟಿ ಬಿಜೆಪಿ ಮಂಡಲದ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್ ಹೇಳಿದರು.ಪಟ್ಟಣದ ಮನೆಗಳಲ್ಲಿ ಹರ್-ಘರ್ ತಿರಂಗ ಅಭಿಯಾನದ ಅಂಗವಾಗಿ ಬಿಜೆಪಿ ಹಮ್ಮಿಕೊಂಡ 79ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಸುಮಾರು 250ಕ್ಕೂ ಹೆಚ್ಚು ರಾಷ್ಟ್ರಧ್ವಜಗಳನ್ನು ವಿತರಿಸಲಾಗಿತ್ತು ಎಂದು ಮಾಹಿತಿ ನೀಡಿದರು.

Edited By : PublicNext Desk
Kshetra Samachara

Kshetra Samachara

13/08/2025 09:26 pm

Cinque Terre

2.36 K

Cinque Terre

0