", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/286525-1756465434-WhatsApp-Image-2025-08-29-at-4.33.44-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Purashottama Surapur" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಯಾದಗಿರಿ : ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮೇಲಿನ ಗಡ್ಡಿಯ ಕುರಿ ಕಾಯಿಗಳು ಎಂದಿನಂತೆ ತಮ್ಮ ಕುರಿಗಳನ್ನು ನದಿ ತಟದಲ್ಲಿ ಮೇಯಿಸಲು ತೆರಳಿದಾಗ...Read more" } ", "keywords": "Krishna River, sheep drown, livestock loss, farmer distress, natural disaster", "url": "https://dashboard.publicnext.com/node" }
ಯಾದಗಿರಿ : ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮೇಲಿನ ಗಡ್ಡಿಯ ಕುರಿ ಕಾಯಿಗಳು ಎಂದಿನಂತೆ ತಮ್ಮ ಕುರಿಗಳನ್ನು ನದಿ ತಟದಲ್ಲಿ ಮೇಯಿಸಲು ತೆರಳಿದಾಗ ಏಕಾಏಕಿ ನದಿ ನೀರು ಬಂದಿದೆ. ಇದರಿಂದಾಗಿ 200ಕ್ಕೂ ಹೆಚ್ಚು ಕುರಿಗಳು ನೀರಿನಲ್ಲಿ ಕೊಚ್ಚು ಹೋಗಿರುವ ಘಟನೆ ನಡೆದಿದೆ.
ಕೃಷ್ಣಾ ಜಲನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗಿರುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಕೃಷ್ಣೆಯು ಮೈದುಂಬಿ ಹರಿಯುತ್ತಿದ್ದು ಸರ್ಕಾರದ ಎಚ್ಚರಿಕೆಯ ನಡುವೆಯೂ ಈ ದುರ್ಘಟನೆ ನಡೆದಿದೆ. ಎಂದಿನಂತೆ ಗುರುವಾರ ಕುರಿಗಳನ್ನು ಮೇಯಿಸಲು ನದಿ ತೀರಕ್ಕೆ ತೆರಳಿದಾಗ ಈ ಘಟನೆ ನಡೆದಿದೆ. ಸುಮಾರು ಎರಡು ನೂರು ಕುರಿಗಳ ಜೊತೆಗೆ ಆರು ಜನ ಕುರಿ ಗಾಯಿಗಳಿದ್ದರು ಎಂದು ತಿಳಿದು ಬಂದಿದೆ.
ನದಿಯಲ್ಲಿ ನೀರು ತಗ್ಗಿಸಿರುವುದರಿಂದ ಇಂದು ಕುರಿಗಳ ದೇಹಗಳು ನದಿಯ ಬಂಡೆಗಳ ಮೇಲೆ, ಜಾಲಿ ಕಂಠಿಗಳಲ್ಲಿ ಸಿಲುಕಿಕೊಂಡಿರುವ ದೃಶ್ಯ ಕುರಿಗಾಯಿಗಳ ಕಣ್ಣಂಚಲ್ಲಿ ನೀರು ಚಿಮ್ಮಿದವು. ಕುರಿಗಾಯಿಗಳಾದ ನಾಗಪ್ಪ, ಮಾಳಪ್ಪ, ಶಾವಮ್ಮ, ಚಂದನಗೌಡ, ಗದ್ದೆಪ್ಪ ಹಾಗೂ ಶಿವಮ್ಮ ಎನ್ನುವವರು ಸುರಕ್ಷಿತವಾಗಿದ್ದು ಇವರುಗಳಿಗೆ ಸೇರಿದ ಕುರಿಗಳು ಎನ್ನಲಾಗಿದೆ.
ಸ್ಥಳಕ್ಕೆ ಕಂದಾಯ ಹಾಗೂ ಪಶು ಇಲಾಖೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
- ಪುರುಷೋತ್ತಮ್ ನಾಯಕ್ ಪಬ್ಲಿಕ್ ನೆಕ್ಸ್ಟ್ ಸುರಪುರ
PublicNext
29/08/2025 04:51 pm