", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/463655-1756531462-manjunath---2025-08-30T105412.918.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಲಬುರ್ಗಿ ಜಿಲ್ಲೆಯ ಮೇಳಕುಂದಾ (ಬಿ) ಗ್ರಾಮದಲ್ಲಿ ಮನುಷ್ಯತ್ವವನ್ನೇ ಪ್ರಶ್ನಿಸುವಂತಹ ಭೀಕರ ಘಟನೆ ನಡೆದಿದ್ದು, ಅನ್ಯಜಾತಿಯ ಯುವಕನನ್ನು ಪ್ರೀತಿಸು...Read more" } ", "keywords": "inter-caste love, honor killing, father kills daughter, cruel father arrested, caste-based violence, family murder, Kalaburagi crime, girl killed by father, love affair murder, domestic violence, Karnataka news, shocking incident, Indian village crime, inter-caste relationship, murder over love", "url": "https://dashboard.publicnext.com/node" }
ಕಲಬುರ್ಗಿ ಜಿಲ್ಲೆಯ ಮೇಳಕುಂದಾ (ಬಿ) ಗ್ರಾಮದಲ್ಲಿ ಮನುಷ್ಯತ್ವವನ್ನೇ ಪ್ರಶ್ನಿಸುವಂತಹ ಭೀಕರ ಘಟನೆ ನಡೆದಿದ್ದು, ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ತಂದೆಯೇ ತನ್ನ ಮಗಳ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಮೃತ ಯುವತಿಯನ್ನ ಕವಿತಾ ಕೊಳ್ಳೂರ ಎಂದು ಗುರುತಿಸಲಾಗಿದೆ. ಕವಿತಾ ಅದೇ ಗ್ರಾಮದ ಅನ್ಯಜಾತಿಯ ಆಟೋ ಡ್ರೈವರ್ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಸಂಬಂಧ ತಿಳಿದ ಹೆತ್ತವರು, ತಮ್ಮ “ಮರ್ಯಾದೆಗೆ ಅಡ್ಡಿ” ಎಂಬ ಕಾರಣದಿಂದ ಕವಿತಾಳ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು.
ಮೊದಲು ಮಗಳಿಗೆ ಬುದ್ಧಿ ಹೇಳಿ ಸಂಬಂಧ ಮುರಿಯಲು ಪ್ರಯತ್ನಿಸಿದರೂ, ಕವಿತಾ ಒಪ್ಪದ ಹಿನ್ನೆಲೆಯಲ್ಲಿ ಆಕೆಗೆ ಚಿತ್ರಹಿಂಸೆ ನೀಡಲಾಗಿತ್ತಂತೆ. ಕೊನೆಗೆ, ಕಳೆದ ರಾತ್ರಿ ತಂದೆ ಶಂಕರ ಕೊಳ್ಳೂರ ಸಹೋದರ ಸಂಬಂಧಿಗಳಾದ ಶರಣಪ್ಪ ಮತ್ತು ದತ್ತಪ್ಪ ಸೇರಿ ಕವಿತಾ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯ ಬಳಿಕ ಕವಿತಾಳ ಕತ್ತು ಹಿಸುಕಿದ್ದು, ಆಕೆಯನ್ನು ಕೊಲೆ ಮಾಡಿದ್ದಾರೆ. ಬಳಿಕ ಇದನ್ನು ಆತ್ಮಹತ್ಯೆಯಾಗಿ ತೋರಿಸಲು ಶರೀರದ ಮೇಲೆ ಕ್ರಿಮಿನಾಶಕ ಸಿಂಪಡಿಸಿ, ತಮ್ಮದೇ ಹೊಲದಲ್ಲಿ ಶವವನ್ನು ಸುಟ್ಟಿದ್ದಾರೆ. ಇದನ್ನೆಲ್ಲಾ ಆತುರದಲ್ಲಿ ಮುಗಿಸಿ, "ಆತ್ಮಹತ್ಯೆ ಮಾಡಿಕೊಂಡಿದ್ದಾಳೆ" ಎಂದು ಕಟ್ಟು ಕಥೆ ಕಟ್ಟಿದ್ದರು.
ಆದರೆ ಕಾವಲುಕೋಟೆಯಿಂದ ಫರಹತಾಬಾದ್ ಪೊಲೀಸ್ ಠಾಣೆಗೆ ಅನಾಮಧೇಯ ವ್ಯಕ್ತಿಯೊಬ್ಬರು ಕರೆಮಾಡಿ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಮಾಹಿತಿ ನೀಡಿದ್ದಾರೆ.
ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ತನಿಖೆಯ ನಂತರ ಪೋಷಕರನ್ನ ವಿಚಾರಿಸಿದಾಗ ತಂದೆ ಶಂಕರ ಕೊಳ್ಳೂರ ಕವಿತಾಳನ್ನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸರು ಕೊಲೆ ಆರೋಪಿ ಶಂಕರನನ್ನ ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
PublicNext
30/08/2025 11:01 am