", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/405356-1756619934-addd.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ: ಜಿಲ್ಲೆಯಲ್ಲಿ ಮಳೆ ಬಂದರೂ ಕಷ್ಟ, ಬಾರದಿದ್ರೂ ಮತ್ತೊಂದು ಕಷ್ಟ. ಜಿಲ್ಲೆಯ ರೈತರು‌ ಒಮ್ಮೆ ಅತಿವೃಷ್ಟಿಗೆ ಬಲಿಯಾದರೆ ಇನ್ನೊಮ್ಮೆ ಅನಾವೃಷ...Read more" } ", "keywords": "Vijayapura district heavy rain, Don river flooding, monsoon rains Karnataka, flood alert Vijayapura, heavy rainfall warning, natural disaster management, emergency measures Vijayapura, rain-related incidents, flood-prone areas Karnataka.", "url": "https://dashboard.publicnext.com/node" } ವಿಜಯಪುರ ಜಿಲ್ಲೆಯಲ್ಲಿ ಅಧಿಕ ಮಳೆ ಆತಂಕದಲ್ಲಿ ದೋಣಿ ನದಿ ಜನತೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ ಜಿಲ್ಲೆಯಲ್ಲಿ ಅಧಿಕ ಮಳೆ ಆತಂಕದಲ್ಲಿ ದೋಣಿ ನದಿ ಜನತೆ

ವಿಜಯಪುರ: ಜಿಲ್ಲೆಯಲ್ಲಿ ಮಳೆ ಬಂದರೂ ಕಷ್ಟ, ಬಾರದಿದ್ರೂ ಮತ್ತೊಂದು ಕಷ್ಟ. ಜಿಲ್ಲೆಯ ರೈತರು‌ ಒಮ್ಮೆ ಅತಿವೃಷ್ಟಿಗೆ ಬಲಿಯಾದರೆ ಇನ್ನೊಮ್ಮೆ ಅನಾವೃಷ್ಟಿಗೆ ತುತ್ತಾಗುತ್ತಾರೆ. ಒಟ್ಟಾರೆ ಜಿಲ್ಲೆಯ ರೈತರ ಸಂಕಷ್ಟ ಮಾತ್ರ ತಪ್ಪಿದಲ್ಲ.

ಈಗ ಜಿಲ್ಲೆ ಹಾಗೂ ಮಹಾರಾಷ್ಟ್ರದಲ್ಲಿ ಅಧಿಕ ಮಳೆಯಾದ ಕಾರಣ ದೋಣಿ ನದಿ ತೀರದ ಜನರಲ್ಲಿ ಆತಂಕ ಮನೆ ಮಾಡಿದೆ. ಪ್ರತಿ ಬಾರಿ ದೋಣಿ ನದಿ ಪ್ರವಾಹ ಉಂಟಾದ್ರೆ ನದಿ ತೀರದ ಜನರಿಗೆ ಸಾಲು ಸಾಲು ಸಂಕಷ್ಟ ಎದುರಾಗುತ್ತದೆ. ಸಾರವಾಡ, ಅಡವಿ ಸಂಗಾಪುರ, ಹೊನಗನಹಳ್ಳಿ, ಯಾಳವಾರ, ಕೊಂಡಗೂಳಿ‌ ಸೇರದಂತೆ ಸುಮಾರು 30ಕ್ಕೂ ಹೆಚ್ಚು ಗ್ರಾಮದ ಜನರ ಜಮೀನಿಗೆ ನೀರು ನುಗ್ಗುತ್ತದೆ. ಇದರಿಂದಾಗಿ ನೂರಾರು ಹೆಕ್ಟರ್ ಕೃಷಿ ಭೂಮಿ ಸಂಪೂರ್ಣವಾಗಿ ಹಾಳಾಗಿ ಹೋಗುತ್ತಿದೆ. ಇನ್ನು ನದಿ ದಡದ ಕೆಲ ಗ್ರಾಮಗಳಿಗೆ ದೋಣಿ ನದಿ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ ಉಂಟು ಮಾಡುತ್ತದೆ. ಕೃಷಿ ಭೂಮಿ ಒಳಗೆ ನೀರು ನಿಲ್ಲೊದ್ರಿಂದ ಬೆಳೆ ಸಂಪೂರ್ಣವಾಗಿ ಹಾಳಾಗಿ ಹೋಗುತ್ತದೆ.

ಇನ್ನು ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ ಹಾಗೂ ಜಿಲ್ಲಾ ಪಂಚಾಯತಿ ಸಿಇಒ ರಿಷಿ ಆನಂದ ಅವರು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿ, ಬೆಳೆ ಹಾನಿ ಸುಮಾರು ಐದುವರೆ ಸಾವಿರ ಹೆಕ್ಟೇರ್ ಹಾನಿಯಾಗಿದೆ. ಬೆಳೆ ಹಾನಿಯ ಪರಿಹಾರದ ಹಣವನ್ನು ರೈತರ ಖಾತೆಗೆ ಹಾಕಲಾಗುವುದು, ಇನ್ನೂ ಹೂಳನ್ನು ತೆಗೆಯುವ ಯೋಜನೆ ಸಹಿತ ಮುಂಬರುವ ದಿನಗಳಲ್ಲಿ ಮಾಡಲಾಗುವದು ಎಂದಿದ್ದಾರೆ.

ಒಟ್ಟಿನಲ್ಲಿ ದೋಣಿ ನದಿ ಭಾಗದ ಜನರು ಪ್ರತಿ ವರ್ಷ ತಮ್ಮ ಅಳಲನ್ನು ಅಧಿಕಾರಿಗಳ ಬಳಿ ಹಾಗೂ ಜನಪ್ರತಿನಿಧಿಗಳ ಬಳಿ ತೋಡಿಕೊಂಡರೂ ಯಾವುದೇ ಪ್ರಯೋಜವಾಗಿರಲಿಲ್ಲ. ಆದರೆ ಇಂದು ಡಿಸಿ ಅವರು ಅಧಿಕಾರಿಗಳ ತಂಡದೊಂದಿಗೆ ಆಗಮಿಸಿ ರೈತರ ಹಾಗೂ ಜನರ ಸಮಸ್ಯೆ ಆಲಿಸಿದ್ದು ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿದ್ದು, ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗತ್ತೆ ಎಂಬುದನ್ನೆ ಕಾದು ನೋಡಬೇಕಿದೆ.

ಪಬ್ಲಿಕ್ ನೆಕ್ಸ್ಟ ವಿಜಯಪುರ

Edited By : Vinayak Patil
PublicNext

PublicNext

31/08/2025 11:29 am

Cinque Terre

23.16 K

Cinque Terre

0