", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/474799-1757343006-yutube1920.02_24_51_02.Still3744.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ವಿಜಯಪುರ : ಗಣೇಶೊತ್ಸವ ಆಚರಣೆ ಬೆನ್ನಲ್ಲೇ ಗ್ರಾಮೀಣ ಭಾಗದಲ್ಲಿ ಜೋಕುಮಾರ ಸ್ವಾಮಿಯನ್ನ ವಿಶೇಷವಾಗಿ ಆರಾಧಿಸಲಾಗುತ್ತದೆ. ಹೌದು ! ವಿಜಯಪುರ ...Read more" } ", "keywords": "vijayapura, ganesh festival, jokumara swamy worship, religious celebration, cultural tradition, devotional event, vijayapura news, kannada headline ", "url": "https://dashboard.publicnext.com/node" }
ವಿಜಯಪುರ : ಗಣೇಶೊತ್ಸವ ಆಚರಣೆ ಬೆನ್ನಲ್ಲೇ ಗ್ರಾಮೀಣ ಭಾಗದಲ್ಲಿ ಜೋಕುಮಾರ ಸ್ವಾಮಿಯನ್ನ ವಿಶೇಷವಾಗಿ ಆರಾಧಿಸಲಾಗುತ್ತದೆ.
ಹೌದು ! ವಿಜಯಪುರ ಜಿಲ್ಲೆಯ ಜಾಲಗೇರಿ ಗ್ರಾಮದಲ್ಲಿ ಜೋಕುಮಾರಸ್ವಾಮಿ ಆಚರಣೆ ವಿಶೇಷವಾಗಿ ಮಾಡಲಾಗುತ್ತಿದೆ. ರೈತರ ಪಾಲಿಗೆ ಜೋಕುಮಾರ ಸ್ವಾಮಿ ಆರಾಧನೆ ವಿಶೇಷತೆ ಪಡೆದಿದೆ.
ಮಳೆ, ಬೆಳೆ ಸಮೃದ್ಧವಾಗಿ, ಮನುಕುಲಕ್ಕೆ ಒಳಿತಾಗಲಿ, ರೈತರ ಜಮೀನಲ್ಲಿ ಉತ್ತಮ ಬೆಳೆ ಬೆಳೆದು ನಾಡು ಸಮೃದ್ಧವಾಗಲಿ ಎಂದು ಬಿಸಿಲು ನಾಡು ಭಾಗದಲ್ಲಿ ಜೋಕುಮಾರಸ್ವಾಮಿ ಪೂಜೆಯ ಆಚರಣೆ ಮಾಡಲಾಗುತ್ತಿದೆ.
ಗಣೇಶ ಹಬ್ಬ ಐದು ದಿನದ ಬಳಿಕ ಜೋಕುಮಾರಸ್ವಾಮಿಯನ್ನು ಬುಟ್ಟಿಯಲ್ಲಿ ಹಾಕಿಕೊಂಡು ಜಾಲಗೇರಿ ಗ್ರಾಮದ ಕೋಳಿ ಕುಟುಂಬದವರು ಕಳೆದ ಹಲವು ದಶಕಗಳಿಂದ ಜನರ ಮನೆ ಮನೆಗೆ ಕರೆದೊಯ್ದು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡ್ತಾರೆ.
ಸಿಂಗರಿಸಿದ ಬುಟ್ಟಿಯಲ್ಲಿ ಜೋಕುಮಾರನನ್ನು ಪ್ರತಿಷ್ಠಾಪಿಸಿ ಮನೆ, ಮನೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ರೈತರು ತಮ್ಮ ಪ್ರಾರ್ಥನೆ ಮೂಲಕ ದವಸಧಾನ್ಯ ನೀಡುತ್ತಾರೆ.
ಜೋಕುಮಾರ ಸ್ವಾಮಿಯ ಹುಟ್ಟು ಮತ್ತು ಸಾವು ಎರಡು ಬಹಳ ವಿಚಿತ್ರವಾಗಿದೆ. ಜೋಕುಮಾರಸ್ವಾಮಿ ಮೂರ್ತಿ ಸುತ್ತಲೂ ಬೇವಿನ್ನಿಟ್ಟು, ಟೋಪಿ ಹಾಕಿ, ಜೋಕುಮಾರಸ್ವಾಮಿ ಬಾಯಿಗೆ ಬೆಣ್ಣೆ, ಕಣ್ಣಿಗೆ ಕಾಡಿಗೆ ಹಚ್ಲಾಗುತ್ತದೆ. ಹೀಗೆ 8 ದಿನಗಳವರೆಗೆ ಊರನ್ನು ಸುತ್ತಿದ ನಂತರ ಒಂಭತ್ತನೆ ದಿನಕ್ಕೆ ಅಂದರೆ ಜೋಕುಮಾರಸ್ವಾಮಿ ಹುಣ್ಣಿಮೆ ದಿನದಂದು ಹೋಳಿಗೆ, ತುಪ್ಪ ನೈವೇದ್ಯ ಹಾಕಿ ಜೋಕುಮಾರ ಸ್ವಾಮಿಯನ್ನು ಮಹಿಳೆಯರು ನೀರಿಗೆ ಬಿಡುವುದು ಪ್ರತೀತಿ ಇದೆ.
ಸರ್ಕಾರ ಜೋಕುಮಾರ ಸ್ವಾಮಿಯನ್ನು ಆರಾಧಿಸುವ ಕೋಳಿ, ಗಂಗಾಮಸ್ಥ ಕುಟುಂಬದವರಿಗೆ ಆರ್ಥಿಕ ನೆರವು ನೀಡುವ ಮೂಲಕ ಗ್ರಾಮೀಣ ಸೊಗಡಿನ ಸಂಪ್ರದಾಯಗಳಿಗೆ ಪ್ರೋತ್ಸಾಹ ನೀಡವುಂತಾಗಬೇಕು ಎನ್ನುವುದು ಪಬ್ಲಿಕ್ ನೆಕ್ಸ್ಟ ನ ಆಶಯ..
PublicNext
08/09/2025 08:20 pm