", "articleSection": "Infrastructure,Nature,Government", "image": { "@type": "ImageObject", "url": "https://prod.cdn.publicnext.com/s3fs-public/474798-1756653347-youtubenew.01_31_35_26.Still1022.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಈ ಬಾರಿ ಮೇ ತಿಂಗಳಲ್ಲೇ ಮಳೆ ಆರಂಭವಾಗಿದೆ. ‌ಮಳೆ ಏನೋ ಆರಂಭವಾಯ್ತು. ಆದರೆ ಅದು ನಿಲ್ಲುವ ಮುನ್ಸೂಚನೆಯಂತೂ ಕಾಣುತ...Read more" } ", "keywords": "Dharwad house loss compensation, immediate relief for homeless, Dharwad disaster victims, Karnataka housing crisis, people lost homes Dharwad, urgent help needed Dharwad, government aid for house loss, Dharwad relief demand, Dharwad latest news, housing compensation Karnataka, public appeal for help, disaster relief Dharwad", "url": "https://dashboard.publicnext.com/node" } ಧಾರವಾಡ: ಮನೆ ಕಳೆದುಕೊಂಡವರಿಗೆ ತಕ್ಷಣಕ್ಕೆ ಬೇಕಿದೆ ಪರಿಹಾರ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮನೆ ಕಳೆದುಕೊಂಡವರಿಗೆ ತಕ್ಷಣಕ್ಕೆ ಬೇಕಿದೆ ಪರಿಹಾರ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಈ ಬಾರಿ ಮೇ ತಿಂಗಳಲ್ಲೇ ಮಳೆ ಆರಂಭವಾಗಿದೆ. ‌ಮಳೆ ಏನೋ ಆರಂಭವಾಯ್ತು. ಆದರೆ ಅದು ನಿಲ್ಲುವ ಮುನ್ಸೂಚನೆಯಂತೂ ಕಾಣುತ್ತಿಲ್ಲ.

ಮೇ ತಿಂಗಳಲ್ಲೇ ಆರಂಭವಾದ ಮಳೆಯಿಂದ ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಕಡೆ ಹಳೆಯ ಮನೆಗಳು ಬಿದ್ದು‌ ಹೋಗಿವೆ. ಕಳೆದ ವಾರದಿಂದ ಧಾರವಾಡ ಜಿಲ್ಲೆಯಾದ್ಯಂತ ಮತ್ತೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದರಿಂದ ಧಾರವಾಡ ಜಿಲ್ಲೆಯ ನವಲಗುಂದ,‌ ಕುಂದಗೋಳ ಧಾರವಾಡ ತಾಲೂಕಿನಲ್ಲಿ ಮತ್ತೇ ಮನೆಗಳು ಬಿದ್ದಿವೆ. ಇದರಿಂದ ಬಡ ಕುಟುಂಬಗಳು ಬೀದಿಗೆ ಬರುವಂತಾಗಿದೆ.‌ ಸದ್ಯ ಧಾರವಾಡ ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಿಂದ ಇಲ್ಲಿವರೆಗೆ ಮಳೆಗೆ 442 ಮನೆ ಹಾನಿಯಾಗಿವೆ. ಅದರಲ್ಲಿ ಪೂರ್ಣ ಪ್ರಮಾಣದಲ್ಲಿ 31, ಹೆಚ್ಚು ಪ್ರಮಾಣದ 46 ಮತ್ತು ಮಧ್ಯಮ ಪ್ರಮಾಣದಲ್ಲಿ 76 ಮನೆ ಹಾನಿಯಾಗಿವೆ. ಅಲ್ಲದೇ ಅಲ್ಪ ಪ್ರಮಾಣದಲ್ಲಿ 29 ಮನೆ ಹಾನಿಯಾದ ಬಗ್ಗೆ ವರದಿಯಾಗಿದೆ. ಸದ್ಯ ಇದರಲ್ಲಿ ಕಳೆದ 15 ದಿನಗಳಿಂದ ಆದ ಮಳೆಯಿಂದ ಬಿದ್ದ ಮನೆಗಳಿಗೆ ಪರಿಹಾರ ಸಿಕ್ಕಿಲ್ಲ. ಬೇಗ ಪರಿಹಾರ ಕೊಡುವಂತೆ ಮನೆ ಕಳೆದುಕೊಂಡವರು ಒತ್ತಾಯಿಸುತ್ತಿದ್ದಾರೆ.

ಇದರಲ್ಲಿ ಕೆಲವು ಮನೆಗಳ‌ ಅರ್ಜಿ ತಿರಸ್ಕಾರ ಕೂಡ ಮಾಡಲಾಗಿದೆ. ಮನೆ ಕಳೆದುಕೊಂಡವರು ಸಲ್ಲಿಸಿದ್ದ ಅರ್ಜಿಗಳಲ್ಲಿ 246 ಅರ್ಜಿ ತಿರಸ್ಕಾರ ಆಗಿವೆ. ಎಬಿಸಿ ಎಂದು ಕೆಟಗರಿ ಮಾಡಿ ಅದರಂತೆ ಪರಿಹಾರ ಕೊಡುವ ಮಾತನ್ನು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ.

ಸದ್ಯ ಧಾರವಾಡ ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮಳೆಯಾಗಿದೆ. ಇದರಿಂದ ಮನೆ ಹಾನಿ ಕೂಡ ಹೆಚ್ಚಾಗಿವೆ. ಅದಕ್ಕೆ ಸರ್ಕಾರ ಬೇಗ ಪರಿಹಾರ ಕೊಡುವ ಕೆಲಸ ಮಾಡಬೇಕಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

31/08/2025 08:45 pm

Cinque Terre

73.51 K

Cinque Terre

1

ಸಂಬಂಧಿತ ಸುದ್ದಿ